Sunday, 9 August 2015

Hindu

ಸಂಸ್ಕೃತದಲ್ಲಿರುವ ಸುವಿಚಾರಗಳು ಹಲವಾರು..ಅವುಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸಲು
ನಮ್ಮ ಪುಟ್ಟ ಪ್ರಯತ್ನ..

ಸುವಚನಾನಿ ಎಂಬ ಧಾರಾವಾಹಿ ಮಾಲಿಕೆಯಲ್ಲಿ , ಸಂಸ್ಕೃತದಲ್ಲಿರುವಪ್ರಮುಖವಾದ
ಸುವಚನಗಳನ್ನು (ಒಳ್ಳೆಯ ಮಾತು) ಪರಿಚಯಿಸುತ್ತಿದ್ದೇವೆ..

ಇದನ್ನು ತಪ್ಪದೇ ಓದಿ..ಶೇರ್ ಮಾಡಿ..

ಅತಿಲೋಭಃ ವಿನಾಶಾಯ

(ಅತಿಯಾದ ಆಸೆಯಿಂದ ವಿನಾಶ)

ಅತಿತೃಷ್ಣಾ ನ ಕರ್ತವ್ಯಾ

(ಅತ್ಯಾಸೆ ಪಡಬೇಡ)

ಅತಿ ಸರ್ವತ್ರ ವರ್ಜಯೇತ್

(ಅತಿಯಾದ ಆಸೆಯನ್ನು ಎಲ್ಲ ಕಡೆ ವರ್ಜಿಸಬೇಕು)

ಅಧಿಕಸ್ಯಾಧಿಕಂ ಫಲಂ

(ಅಧಿಕ ಪ್ರಯತ್ನಕ್ಕೆ ಅಧಿಕ ಫಲ)

ಅನತಿಕ್ರಮಣೀಯಾ ಹಿ ನಿಯತಿಃ

(ವಿಧಿಯನ್ನು ಗೆಲ್ಲುವುದು ಅಸಾಧ್ಯ)

ಅಲ್ಪಶ್ಚ ಕಾಲೋ ಬಹವಶ್ಚ ವಿಘ್ನಾಃ

(ಕಾಲ ಅಲ್ಪ..ವಿಘ್ನಗಳು ಹಲವಾರು)

ಅಹಿಂಸಾ ಪರಮೋ ಧರ್ಮಃ

(ಅಹಿಂಸೆಯೇ ಪರಮಧರ್ಮ)

ಅಭದ್ರಂ ಭದ್ರಂ ವಾ ವಿಧಿಲಿಖಿತಮ್ ಉನ್ಮೂಲಯತಿ ಕಃ ?

(ಒಳ್ಳೆಯದೋ , ಕೆಟ್ಟದ್ದೋ ವಿಧಿಲಿಖಿತವನ್ನು ತಪ್ಪಿಸಬಲ್ಲವರು ಯಾರು ?)

ವಿತ್ತಂ ಹಿ ಲೋಕೇ ಪುರುಷಸ್ಯ ಬಂಧುಃ

(ಹಣವೇ ಪ್ರಪಂಚದಲ್ಲಿ ಮನುಷ್ಯನ ನಿಜವಾದ ಬಂಧು.)

ಇಕ್ಷುಃ ಮಧುರೋಪಿ ಸಮೂಲಂ ನ ಭಕ್ಷ್ಯಃ

(ಕಬ್ಬು ಸಿಹಿಯೆಂದು ಕಬ್ಬಿನಬೇರನ್ನು ತಿನ್ನಬಾರದು.)

ಈಶ್ವರೇಚ್ಛಾ ಬಲೀಯಸೀ

(ಈಶ್ವರನ ಇಚ್ಛೆಯೇ ಪ್ರಬಲವಾದದ್ದು)

ಉತ್ಪದ್ಯಂತೇ ವಿಲೀಯಂತೇ ದರಿದ್ರಾಣಾಂ ಮನೋರಥಾಃ

(ಬಡವರ ಕನಸುಗಳು ಹುಟ್ಟುತ್ತವೆ ಹಾಗೇ ಸಾಯುತ್ತವೆ.)

ಉತ್ಸವಪ್ರಿಯಾಃ ಖಲು ಮನುಷ್ಯಾಃ

(ಮಾನವರು ಉತ್ಸವಪ್ರಿಯರು.)

ಕರ್ತವ್ಯೋ ಮಹದಾಶ್ರಯಃ

(ನಮ್ಮ ಕರ್ತವ್ಯವೇ ನಮಗಾಶ್ರಯ.)

ಕವಯಃ ಕಿಂ ನ ಪಶ್ಯಂತಿ ?

(ಕವಿಗಳು ಏನನ್ನು ತಾನೇ ನೋಡುವುದಿಲ್ಲ..?)

ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಮ್

(ಬುದ್ಧಿವಂತರ ಕಾಲ ಕಾವ್ಯ , ಶಾಸ್ತ್ರಗಳ ವಿವೇಚನೆಯಲ್ಲಿ ಕಳೆಯುತ್ತದೆ.)

ಕಾಲಾಯ ತಸ್ಮೈ ನಮಃ

(ಸಮಯಕ್ಕೆ ನಮಸ್ಕಾರ)

ಕ್ಷಮಯಾ ಕಿಂ ನ ಸಿಧ್ಯತಿ ?

(ಕ್ಷಮೆಯಿಂದ ಯಾವುದು ತಾನೇ ಅಸಾಧ್ಯ..?)

ಗತಂ ನ ಶೋಚ್ಯಮ್

(ಕಳೆದುಹೋಗಿದ್ದಕ್ಕೆ ಚಿಂತಿಸಬಾರದು.)

ಗುಣಾಃ ಸರ್ವತ್ರ ಪೂಜ್ಯಂತೇ

(ಸದ್ಗುಣಗಳು ಎಲ್ಲೆಡೆ ಪೂಜಿಸಲ್ಪಡುತ್ತವೆ.)

ಚಕ್ರವತ್ ಪರಿವರ್ತಂತೇ ದುಃಖಾನಿ ಚ ಸುಖಾನಿ ಚ

(ಸುಖ-ದುಃಖಗಳು ಚಕ್ರದಂತೇ ಸುತ್ತುತ್ತಲೇ ಇರುತ್ತವೆ.)

ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ

(ಜನನಿ ಹಾಗೂ ಜನ್ಮಭೂಮಿಗಳು ಸ್ವರ್ಗಕ್ಕಿಂತಲೂ ಮಿಗಿಲಾದವು.)

ತ್ರೈಲೋಕ್ಯೇ ದೀಪಕಃ ಧರ್ಮಃ

(ಧರ್ಮ ಮೂರು ಲೋಕಗಳನ್ನೂ ಬೆಳಗುತ್ತದೆ.)

Know Hinduism

.....ಪಂಚಾಮೃತ...........
ಹಾಲು, ಮೊಸರು, ತುಪ್ಪ , ಜೇನುತುಪ್ಪ, ಸಕ್ಕರೆ, ಬಾಳೆಹಣ್ಣು, ಎಳನೀರು, ನೀರು ಮುಂತಾದ ವಸ್ತುಗಳಿಂದ ದೇವರ ವಿಗ್ರಹಕ್ಕೆ ಅಭಿಷೇಕವನ್ನು ಮಾಡುತ್ತೇವೆ, ತದನಂತರ ತೀರ್ಥವೆಂದು ಸೇವಿಸುತ್ತೇವೆ.
ಇದಕ್ಕೆ ಪಂಚಾಮೃತವೆಂದೂ ಕರೆಯುತ್ತಾರೆ.

ಅಭಿಷೇಕವನ್ನು ಸಾಮಾನ್ಯವಾಗಿ ಸಾಲಿಗ್ರಾಮ ಶಿವಲಿಂಗ ಅಥವಾ ಕಂಚು, ತಾಮ್ರ, ಕಬ್ಬಿಣ, ಚಿನ್ನ ಮುಂತಾದ ಪಂಚಲೋಹಗಳಿಂದ ಮಾಡಿದ ವಿಗ್ರಹಗಳ ಮೇಲೆ ಮಾಡುತ್ತಾರೆ.

ಬಾಳೆಹಣ್ಣು ಹಾಗೂ ಎಳನೀರಿನಲ್ಲಿ ಇರುವ ಪೊಟ್ಯಾಶಿಯಂ ಹೃದಯ ಸಂಬಂಧಿ ಖಾಯಿಲೆಗಳು ಬರದಂತೇ ತಡೆಯುತ್ತದೆ.

ಇವುಗಳಲ್ಲಿರುವ ಔಷಧೀಯ ಗುಣಗಳು ನೀರಿನೊಂದಿಗೆ ಸೇರುತ್ತವೆ.

ಶುದ್ಧ ಸಾಲಿಗ್ರಾಮ ಹಾಗೂ ಶಿವಲಿಂಗಗಳು ಸಿಗುವುದು ಗಂಡಕಿ ಹಾಗೂ ನರ್ಮದಾ ನದಿಗಳಲ್ಲಿ.

ಈ ನದಿಗಳ ನೀರಿನಲ್ಲಿ ಸಿಲಿಕಾ ಹಾಗೂ ಕ್ಯಾಲ್ಸಿಯಂ ಅಂಶಗಳು ಜಾಸ್ತಿಯಾಗಿವೆ.

ಸಾಲಿಗ್ರಾಮ, ಶಿವಲಿಂಗಗಳ ಅಭಿಷೇಕದ ನೀರೂ ಸಹ ಈ ಅಂಶಗಳನ್ನು ಒಳಗೊಂಡಿರುತ್ತದೆ.

ಇದು ದೃಷ್ಟಿ ಸಂಬಂಧಿ ನರಗಳ ಬಲವನ್ನು ಹೆಚ್ಚಿಸುತ್ತದೆಂದು ಸಾಬೀತಾಗಿದೆ.

ಇದೇ ಕಾರಣದಿಂದ ಅಭಿಷೇಕವಾದ ನಂತರ ಸಾಲಿಗ್ರಾಮ ಅಥವಾ ಶಿವಲಿಂಗವನ್ನು ಕಣ್ಣುಗಳಿಗೆ ತಾಗಿಸಿ ನಮಸ್ಕರಿಸುತ್ತೇವೆ.

ಇನ್ನು, ಪಂಚಲೋಹಗಳಿಗಂತೂ ನಮ್ಮ ಪೂರ್ವಜರು ಬಹಳ ಮಹತ್ವ ನೀಡಿದ್ದರು.

ಬೆಳ್ಳಿಯ ತಟ್ಟೆಗಳಲ್ಲಿ ಆಹಾರವನ್ನು ಸೇವಿಸುತ್ತಿದ್ದರು.

ತಾಮ್ರದ ಪಾತ್ರೆಗಳಲ್ಲಿ ನೀರನ್ನು ಸಂಗ್ರಹಿಸಿ ಕುಡಿಯುತ್ತಿದ್ದರು.

ಲೋಹಗಳಲ್ಲಿ ವಿಶೇಷವಾದ ಶಕ್ತಿಯೆದೆಯೆಂದು ತಿಳಿದಿದ್ದರು.

ಅವುಗಳ ಮೂಲಕ ಆಹಾರವನ್ನು ಸೇವಿಸುವುದರಿಂದ ಆರೋಗ್ಯ ಚೆನ್ನಾಗಿರುತ್ತದೆಂದು ಅವರು ಅರಿತಿದ್ದರು..

ॐ ಹರ ಹರ ಮಹಾದೇವಾ ॐ 
ॐ ಹಿ೦ದುತ್ವದ ವಿಚಾರಧಾರೆ ॐ

Know Hinduism

ಹಿಂದೂ ಪುರಾಣಗಳಲ್ಲಿ ಬ್ರಹ್ಮ,ವಿಷ್ಣು ಮತ್ತು ಮಹೇಶ್ವರ ಈ ಮೂರು ದೇವತೆಗಳನ್ನು ತ್ರಿಮೂರ್ತಿಗಳು ಎಂದು ಉಲ್ಲೇಖಿಸಲಾಗಿದೆ.
ಬ್ರಹ್ಮ - ಸೃಷ್ಟಿ
ವಿಷ್ಣು - ಸ್ಥಿತಿ
ಶಿವ - ಲಯ
ಬ್ರಹ್ಮ - ಹಿಂದೂ ಧರ್ಮದಲ್ಲಿನ ತ್ರಿಮೂರ್ತಿ ದೇವತೆಗಳಲ್ಲೊಬ್ಬರು. ಬ್ರಹ್ಮನನ್ನು ಸೃಷ್ಟಿಕರ್ತ ಎನ್ನಲಾಗುತ್ತದೆ. ಸರಸ್ವತಿಯು ಬ್ರಹ್ಮನ ಹೆಂಡತಿ, ಮತ್ತು ನಾರದರು ಬ್ರಹ್ಮನ ಮಾನಸ ಪುತ್ರರು. ಚತುರ್ಮುಖ ಬ್ರಹ್ಮ ವಿಷ್ಣುವಿನ ನಾಭಿನಿಂದ ಹುಟ್ಟಿದ ಕಮಲದಲ್ಲಿ ಜನಿಸಿದನೆಂದು ಪ್ರತೀತಿ. ಹಾಗಾಗಿ ಬ್ರಹ್ಮನಿಗೆ ಜಡಜಜ ಎಂಬ ಹೆಸರು ಉಂಟು.. ಜಡ ಎಂದರೆ ಚಲನೆ ಇಲ್ಲದ ಎಂದರ್ಥ. ಜಡಕ್ಕೆ ಕೆಸರು ಎಂಬರ್ಥವೂ ಇದೆ. ಹೀಗೆ ಜಡಜ ಎಂದರೆ ಕೆಸರಿನಲ್ಲಿ ಜನಿಸಿದ್ದು ಅಂದರೆ ಕಮಲ ಎಂದರ್ಥ. ಹಾಗಾಗಿ ವಿಷ್ಣುವಿನ ನಾಭಿಕಮಲದಲ್ಲಿ ಜನಿಸಿದ ಬ್ರಹ್ಮನನ್ನು ಜಡಜಜ ಎಂದು ಕರೆಯಲಾಗುತ್ತದೆ.

ವಿಷ್ಣು- ವಿಷ್ಣು ತ್ರಿಮೂರ್ತಿಗಳಲ್ಲಿ ಒಬ್ಬನಾಗಿದ್ದು,ಸಕಲ ಲೋಕಗಳ ಸ್ಥಿತಿಕರ್ತ ಎಂದು ಹಿಂದೂ ಧರ್ಮ ನಂಬುತ್ತದೆ. ಧರ್ಮ ಸಂಸ್ಥಾಪನೆಗಾಗಿ ದಶಾವತಾರ ತಾಳಿ ಭೂಲೋಕವನ್ನು ರಕ್ಷಿಸಿದಾತ ಎಂದು ಪುರಾಣಗಳು ಕೊಂಡಾಡುತ್ತವೆ. ವಿಷ್ಣುವನ್ನು ಲಕ್ಮಿನಾರಾಯಣ, ಹರಿ, ಜನಾರ್ದನ, ಮಾಧವ, ಕೇಶವ, ಅಚ್ಚ್ಯುತ, ಶ್ರೀನಿವಾಸ ಎಂದೂ ಕರೆಯುತ್ತಾರೆ.

ಯಾರು ಮಂಗಳಕರನೋ ಅವನೇ ಶಿವ. ಹಿಂದೂ ಧರ್ಮದಲ್ಲಿ ಯಾವ ಯಾವಾಗ ನಿರಾಕಾರ ಉಪಾಸನೆ ಬರುತ್ತದೋ ಆಗ ಆ ಪರಬ್ರಹ್ಮವನ್ನು ಶಿವ ಎಂದೇ ಸಂಬೋಧಿಸುತ್ತಾರೆ. ಲಿಂಗಾಯತ ಮತದ ಪ್ರಕಾರ ಶಿವವೇ ಪರಬ್ರಹ್ಮ. ಕೆಲವರು ಹಿಂದೂ ಧರ್ಮದ ಪ್ರಕಾರ ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹೇಶ್ವರನೇ ಶಿವನೆಂದು ಭಾವಿಸುತ್ತಾರೆ.
ಶಿವನಿಗೆ ಲಯಕಾರಕ ಎಂದೂ ಸಹ ಕರೆಯುತ್ತಾರೆ. ಅಂದರೆ ಸೃಷ್ಟಿ ಮಾಡುವುದು ಬ್ರಹ್ಮನ ಕೆಲಸವಾದರೆ, ಆ ಸೃಷ್ಟಿಯಾದ ಆಕರಗಳಿಗೆ (ಜೀವಿಗಳಿಗೆ) ಸ್ಥಿತಿ ಕೊಡುವುದು ವಿಷ್ಣುವಿನ ಕೆಲಸ. ಈ ರೀತಿ ಸೃಷ್ಟಿ, ಸ್ಥಿತಿ ಪಡೆದ ಆಕರಗಳಿಗೆ ಲಯ (ಕೊನೆ) ಕಾಣಿಸುವವನು ಶಿವ. ಆದ್ದರಿಂದ ಶಿವನಿಗೆ ಲಯಕಾರ ಎಂದೂ ಸಹ ಕರೆಯುತ್ತಾರೆ. ಸಂಹಾರಕ ಅಥವ ಲಯಕಾರಕ ದೇವತೆ : ಶಿವ ಅಥವ ರುದ್ರ..

ॐ ಹಿ೦ದುತ್ವದ ವಿಚಾರಧಾರೆ ॐ

Temples information

ಬೆಂಗಳೂರಿನ ಬಸವನಗುಡಿಯಲ್ಲಿರುವ ದೊಡ್ಡ ಬಸವಣ್ಣ (ನಂದಿ) ದೇವಸ್ಥಾನ
ಈ ದೇವಾಲಯವನ್ನು ಕೆಂಪೇಗೌಡರು 1537ರಲ್ಲಿ ಕಟ್ಟಿಸಿದರು. 

ಬೆಂಗಳೂರು ಮಹಾನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಬಸವನಗುಡಿಯೂ ಒಂದು. ಈ ಪ್ರದೇಶಕ್ಕೆ ಬಸವನಗುಡಿ ಎಂದು ಹೆಸರು ಬರಲು ಕಾರಣವೇ ಇಲ್ಲಿರುವ ಪುರಾತನ ಬೃಹತ್ ಬಸವನ ದೇವಾಲಯ. ಎತ್ತರದ ಗುಡ್ಡದ ಮೇಲೆ ಕಟ್ಟಲಾಗಿರುವ ಪುರಾತನ ದೇವಾಲಯದಲ್ಲಿ 15 ಅಡಿ ಎತ್ತರ 20 ಅಡಿ ಉದ್ದದ ದೊಡ್ಡ ಬಸವಣ್ಣನ ವಿಗ್ರಹವಿದೆ. ಹೀಗಾಗೆ ಈ ದೇವಾಲಯಕ್ಕೆ ದೊಡ್ಡ ಬಸವನಗುಡಿ ಎಂಬ ಹೆಸರೂ ಇದೆ.

ಈ ದೇವಾಲಯವನ್ನು ಕೆಂಪೇಗೌಡರು 1537ರಲ್ಲಿ ಕಟ್ಟಿಸಿದರು. ದೇವಾಲಯದ ಮುಂದೆ ಸುಂದರವಾದ ದ್ವಜಸ್ತಂಭವಿದೆ. ಈ ಕಲ್ಲು ಕಂಬದಲ್ಲಿ ತಂತಿ ವಾದ್ಯ ನುಡಿಸುತ್ತಿರುವ ಸ್ತ್ರೀ ಮೊದಲಾದ ಉಬ್ಬು ಶಿಲ್ಪಗಳಿವೆ. ದೇವಾಲಯಕ್ಕೆ ಭವ್ಯವಾದ ಗೋಪುರವಿದ್ದು, ಒಳ ಪ್ರಾಕಾರದಲ್ಲಿಯೂ ವಿಶಾಲವಾದ ಗುಡಿ, ಪ್ರಥಕ್ಷಿಣ ಪಥವಿದೆ. ಬಾಗಿಲಲ್ಲಿ ದ್ವಾರಪಾಲಕರ ಶಿಲ್ಪಗಳಿವೆ. ಈ ಗರ್ಭಗೃಹದಲ್ಲಿರುವ ಕಪ್ಪು ಶಿಲೆಯ ಬಸವ ಉದ್ಭವಮೂರ್ತಿಯೆಂದು ಹೇಳುತ್ತಾರೆ. ಪರಶಿವನ ವಾಹನ ಬಸವ ಇಲ್ಲಿ ಬಂದು ಶಿಲೆಯಾದ ಎಂಬ ಪ್ರತೀತಿ ಇದೆ. ಅದಕ್ಕೆ ಪೂರಕವಾಗಿ ಒಂದು ಕಥೆ ಇದೆ.

ಐತಿಹ್ಯ: 
ಈಗ ಬಸವಣ್ಣನ ದೇವಸ್ಥಾನ ಇರುವ ಸ್ಥಳ ಹಿಂದೆ ಸುಂಕೇನ ಹಳ್ಳಿ ಎಂದು ಹೆಸರಾಗಿತ್ತು. ಇಲ್ಲಿ ಹೊಲ ಗದ್ದೆಗಳಿದ್ದವು. ರೈತಾಪಿವರ್ಗದ ಜನ ಇಲ್ಲಿ ವಾಸಿಸುತ್ತಿದ್ದರು. ಇವರು ಪ್ರಧಾನವಾಗಿ ತಮ್ಮ ಹೊಲಗಳಲ್ಲಿ ಕಡಲೇ ಕಾಯಿ ಬೆಳೆಯುತ್ತಿದ್ದರು. ಸರ್ವರಿಗು ಸಮಪಾಲು, ಸರ್ವರದು ಸಹಬಾಳ್ವೆ ಎಂದು ಬದುಕುತ್ತಿದ್ದ ಆ ರೈತಾಪಿ ವರ್ಗ, ಕಡಲೆಕಾಯಿ ಫಸಲು ಬರುವ ಕಾರ್ತೀಕದಲ್ಲಿ ತಾವು ಬೆಳೆದ ಕಡಲೆಕಾಯಿಯನ್ನು ರಾಶಿ ಮಾಡಿ ಕಣದ ಪೂಜೆ ಮಾಡಿ ಮಾರನೆ ದಿನ ಸಮನಾಗಿ ಹಂಚಿಕೊಳ್ಳುತ್ತಿದ್ದರು. ಒಮ್ಮೆ ಹೀಗೆ ಕಣ ಮಾಡಿದ್ದ ಸಂದರ್ಭದಲ್ಲಿ ಗೂಳಿಯೊಂದು ಬಂದು ರಾಶಿ ರಾಶಿ ಕಡಲೆಕಾಯಿ ತಿಂದು ಹೋಗುತ್ತಿತ್ತಂತೆ.

ಈ ಗೂಳಿ ಅರ್ಥಾತ್ ಬಸವನ ಕಾಟ ತಾಳಲಾರದೆ ರೈತರು ಒಂದು ದಿನ ರಾತ್ರಿಯಿಡೀ ಕಾದಿದ್ದು ಬಡಿಗೆ ಹಿಡಿದು ಬಸವನ ಬಡಿಯಲು ಕಾದಿದ್ದರಂತೆ. ನಿರೀಕ್ಷೆಯಂತೆ ಬಸವ ಬಂದ, ಕಡಲೆಕಾಯಿ ತಿನ್ನುತ್ತಿದ್ದ. ಇದನ್ನು ನೋಡಿ ಕೋಪಗೊಂಡ ರೈತರು, ತಾವು ತಂದಿದ್ದ ಬಡಿಗೆ ಹಿಡಿದು ಬಸವನ್ನು ಅಟ್ಟಿಸಿಕೊಂಡು ಹೋದರಂತೆ ಆಗ ರೈತರ ಹೊಡೆತ ತಪ್ಪಿಸಿಕೊಳ್ಳಲೆಂದು ಓಡಿದ ಬಸವ ಸುಂಕೇನಹಳ್ಳಿಯಿಂದ ಸ್ವಲ್ಪದೂರ ಓಡಿಬಂದು ಗುಡ್ಡ ಏರಿ ಕಲ್ಲಾದನಂತೆ . ಈ ಸೋಜಿಗವನ್ನು ಕಣ್ಣಾರೆ ಕಂಡ ರೈತರಿಗೆ ಇದು ಸಾಮಾನ್ಯ ಗೂಳಿಯಲ್ಲ. ಶಿವನ ವಾಹನ ನಂದಿ ಎಂಬ ಸತ್ಯ ತಿಳಿಯಿತಂತೆ. ಕೈಲಾಸದಿಂದ ಧರೆಗಿಳಿದುಬಂದ ನಂದಿಕೇಶ್ವರನನ್ನೇಹೊಡೆದು ಎಂಥ ತಪ್ಪು ಮಾಡಿದೆವೆಂದು ಮರುಗಿದರಂತೆ. ಅರಿಯದೆ ತಾವು ಮಾಡಿದ ತಪ್ಪು ಮನ್ನಿಸೆಂದು ಪರಿಪರಿಯಾಗಿ ಬೇಡಿದರಂತೆ. ಅಂದಿನಿಂದ ರೈತರು ತಪ್ಪೊಪ್ಪಿಗೆಯಾಗಿ ಪ್ರತಿವರ್ಷ ಕಡಲೆಕಾಯಿ ಬೆಳೆ ಬಂದ ತತ್‌ಕ್ಷಣ ತಮ್ಮ ಮೊದಲ ಬೆಳೆಯನ್ನು ಈ ಕಲ್ಲಿನ ಬಸವಣ್ಣನಿಗೆ ತಂದು ಒಪ್ಪಿಸಿ ನೇವೇದ್ಯ ಮಾಡಿ, ಕ್ಷಮಿಸೆಂದು ಕೇಳಿ ನಂತರ ಮಾರಾಟ ಮಾಡುತ್ತಿದ್ದರಂತೆ. ಇಂದಿಗೂ ಈ ಪರಂಪರೆ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಪ್ರತಿವರ್ಷ ಕಾರ್ತೀಕ ಮಾಸದಲ್ಲಿ ನಡೆಯುವ ಜಾತ್ರೆ ಕಡಲೆಕಾಯಿ ಪರಿಷೆ ಎಂದೇ ಖ್ಯಾತವಾಗಿದೆ.

ಈ ಜಾತ್ರೆಗೆ ಬಸವನ ಭಕ್ತರು ಬಂದು ಬಂದು ಕಡಲೇ ಕಾಯಿ ತಿಂದರೆ, ನಂದಿ ತೃಪ್ತನಾಗುತ್ತಾನೆಂಬುದು ಹಲವು ಹಿರಿಯರ ನಂಬಿಕೆ. ಭಕ್ತರು ತಿಂದು ಎಸೆವ ಸಿಪ್ಪೆಯನ್ನು ರಾತ್ರಿಯ ವೇಳೆ ಕಲ್ಲು ಬಸವ ನಿಜರೂಪ ತಾಳಿ ಆ ಸಿಪ್ಪೆಯನ್ನು ತಿನ್ನುತ್ತಾನೆ ಎಂದು ಇಂದಿಗೂ ಜನ ನಂಬಿದ್ದಾರೆ.

ದೊಡ್ಡ ಬಸವಣ್ಣನ ಹಿಂಭಾಗದಲ್ಲಿ ಅದೇ ಕಟ್ಟೆಯ ಮೇಲೆ ಗಣಪತಿಯ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಗಣೇಶನ ಎದುರು ಶಿವ ದೇವಾಲಯವಿದೆ.

ಪಕ್ಕದಲ್ಲೇ ಸುಂದರವಾದ ಕಹಳೆ ಬಂಡೆ (ಬ್ಯೂಗಲ್ ರಾಕ್) ಉದ್ಯಾನವಿದೆ. ಈ ಉದ್ಯಾನದಲ್ಲಿ ಧುಮ್ಮಿಕ್ಕುವ ಜಲಧಾರೆ, ಸಂಗೀತ ಕಾರಂಜಿಯೇ ಮೊದಲಾದ ಮನರಂಜನೆಯೂ ಇದೆ.

ಅಧಾರ- *ಟಿ.ಎಂ.ಸತೀಶ್ ಅವರ ಬ್ಲಾಗ್.
http://www.ourtemples.in/doddabasavanagudi.html

ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಓರ್ವ ವೈಮಾನೀಕ ಇಂಜಿನೀಯರ್ , ಪ್ರಾಧ್ಯಾಪಕ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿ, ತಿರುವನಂತಪುರಂ (ಐ.ಐ.ಎಸ್.ಟಿ) ವೊದಲ ಛಾನ್ಸ್ಲರ್(ಮೂಖ್ಯೊಪಾಧ್ಯಯ), ಜುಲೈ ೨೫, ೨೦೦೨ ರಿಂದ ಜುಲೈ ೨೫ ೨೦೦೭ ರ ತನಕ ಭಾರತದ ರಾಷ್ಟ್ರಪತಿಗಳಾಗಿದ್ದರು. ಇವರು ಭಾರತದ ಹನ್ನೊಂದನೇ ರಾಷ್ಟ್ರಪತಿಗಳಾಗಿ ಜುಲೈ ೨೫, ೨೦೦೨ರಂದು ಅಧಿಕಾರ ಸ್ವೀಕರಿಸಿದರು. ಭಾರತ ಸರ್ಕಾರವು ೧೯೯೭ ರಲ್ಲಿ ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ರಾಷ್ತ್ರಪತಿ ಆಗುವುದಕ್ಕೂ ಮುನ್ನ ಇವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್ : ಡಿ.ಆರ್.ಡಿ.ಓ.) ಮತ್ತು ಇಸ್ರೊದಲ್ಲಿ ವೈಮಾನೀಕ ಇಂಜಿನೀಯರ್ ಆಗಿ ಸೇವೆ ಸಲ್ಲಿಸೀದರು. ಇವರು ಭಾರತಕ್ಕೆ ಕ್ಷಿಪಣಿ ಹಾಗೂ ರಾಕೆಟ್ ತಾಂತ್ರಜ್ಞಾನವನ್ನು ತಯಾರಿಸಿರುವ ಕಾರಣ ,ಕ್ಷಿಪಣಿಗಳ ಜನಕ (ಮಿಸೈಲ್ ಮ್ಯಾನ್ ಆಫ್ ಇಂಡಿಯ)ಎ೦ದು ಕರೆಯುತ್ತಾರೆ.
ಸನ್ ೧೯೯೮ರಲ್ಲಿ ಪೋಖ್ರನ್-೨ ನ್ಯುಕ್ಲಿಯರ್ ಪರೀಕ್ಷೆಯಲ್ಲಿ, ತಾಂತ್ರಿಕವಾಗಿ ,ರಾಜಕೀಯವಾಗಿ ಪ್ರಧಾನ ಪಾತ್ರವನ್ನು ವಹಿಸಿದರು. ಆದರೂ ಇವರು ಅಪವಾದಗಳಿಂದ ದೂರವಿರಲ್ಲಿಲ್ಲ, ಕೇವಲ ಹೋಮಿ ಜಹಂಗೀರ್ ಭಾಬ ಮತ್ತು ವಿಕ್ರಮ್ ಸಾರಭಾಯಿರವರ ಕೆಲಸವನ್ನು ಮುಂದುವರಿಸಿದರೆಂದು ಹಾಗು ನೂಕ್ಲಿಯರ್ ವಿಜ್ಞಾನದಲ್ಲಿ ಪ್ರಾವಿಣ್ಯವಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟರು.
ಪ್ರಸ್ತುತ ಈ ಮಹಾನ್ ಚೇತನವು ಸಂದರ್ಶಕ ಪ್ರಾಧ್ಯಾಪಕರಾಗಿ ಐ.ಐ.ಎಮ್, ಅಹೆಮ್ದಾಬಾದ್ ಮತ್ತು ಐ.ಐ.ಎಮ್, ಇಂದೋರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ [೧].
ಅಣ್ಣಾ ವಿಶ್ವವಿದ್ಯಾಯಲಯ(ಚೆನ್ನೈ), ಜೆ.ಎಸ್.ಎಸ್ ವಿಶ್ವವಿದ್ಯಾಲಯ (ಮೈಸೂರು) ಮತ್ತು ಅನೇಕ ಸಂಶೋಧನಾಲಯದಲ್ಲಿ ವೈಮಾನಿಕ ಪ್ರಾದ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಭ್ರಷ್ಟಾಚಾರದ ಮೇಲೆ ೨೦೧೧ರ ಮೇ ನಲ್ಲಿ ತಮ್ಮ ಧ್ವನಿಯೆತ್ತಿದ್ದರು. ಕಲಾಮ್ ಓರ್ವ ವಿಜ್ಞಾನಿಯು, ತಮಿಳು ಕವಿಯು ಹಾಗೂ ವೀಣಾ ವಾದ್ಯಗಾರರು ಆಗಿದ್ದಾರೆ.

ಇವರ ಜನನ ಅಕ್ಟೋಬರ್ ೧೫, ೧೯೩೧ ರಂದು ತಮಿಳುನಾಡಿನ ರಾಮೇಶ್ವರಂನ ಧನುಷ್ಕೋಟಿಯಲ್ಲಿ ಆಯಿತು[೨]. ಇವರ ಬಾಲ್ಯವು ಬಹಳ ಆರ್ಥಿಕ ಬಡತನದಿಂದ ಸಾಗಿತ್ತು. ಮುಂಜಾನೆ ೪:೦೦ ಘಂಟೆಗೆ ಎದ್ದು ದಿನದ ಪಾಠಗಳನ್ನು ಓದಿ ಶಾಲೆಗೆ ಹೋಗುತ್ತಿದ್ದರು. ಶಾಲೆಯಲ್ಲಿ ಗಣಿತವು ಮೊದಲ ಪಾಠವಾಗಿತ್ತು. ಶಾಲೆ ಮುಗಿದ ನಂತರ ತಮ್ಮ ಸಂಸೂದ್ದಿನ ಕಲಾಂ ಜೊತೆಗೆ ದಿನಪತ್ರಿಕೆ ಮಾರಲು ಹೋಗುತ್ತಿದ್ದರು.
ಇದರಿಂದ ಬಂದ ಹಣದಿಂದ ತಂದೆಗೆ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದರು. ಕಲಾಂ ಓದಿನಲ್ಲಿ ಸಾಧಾರಣ ವಿದ್ಯಾರ್ಥಿಯಾಗಿದ್ದರೂ, ತನ್ನ ಬುದ್ದಿವಂತಿಕೆ ಹಾಗೂ ಕಠಿಣ ಪರಿಶ್ರಮದಿ೦ದ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಗಣಿತಶಾಸ್ತ್ರವನ್ನು ತುಂಬಾ ಆಸಕ್ತಿಯಿಂದ ಕಲಿಯು ತ್ತಿದ್ದರು.[೩]ತಮ್ಮ ಪ್ರಾಥಮಿಕ ಶಿಕ್ಷಣದ ನಂತರ, ಕಲಾಂ ಸಂತ ಜೋಸೆಫ್ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು. ಆದರೆ ಭೌತಶಾಸ್ತ್ರದ ಬಗ್ಗೆ ಆಸಕ್ತಿ ಮೂಡದ ಕಾರಣ, ವೈಮಾನಿಕ ಇಂಜಿನೀಯರ್ ಪದವಿಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು.he is a great scientist in india

೧೯೫೮ರಲ್ಲಿ ಮದ್ರಾಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನೋಲಜಿ ಯಿಂದ ವೈಮಾನೀಕ ಇಂಜಿನೀಯರ್‍ನಲ್ಲಿ ಪದವಿಯನ್ನು ಪಡೆದರು. ಹಾಗೆಯೇ ಪಿ.ಎಚ್.ಡಿ., ಎಮ್ ಟೆಕ್ ಪದವಿಯನ್ನು ಪಡೆದಿದ್ದಾರೆ. ಡಿ.ಆರ್.ಡಿ.ಓ ಹಾಗೂ ಇಸ್ರೋಗಳಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿರುವ ಇವರು ಭಾರತದ ಅಣುಬಾಂಬು ಹಾಗೂ ಕ್ಷಿಪಣಿಗಳ ಜನಕ ಎಂದೇ ಪ್ರಸಿದ್ಧರು. ಇವರು ಬ್ರಹ್ಮಚಾರಿಗಳು.
ಕಲಾಂರವರು ಭಾರತದ ೧೧ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ೨೦೦೨ರ ರಾಷ್ತ್ರಪತಿ ಚುನಾವಣೆಯಲ್ಲಿ ಲಕ್ಷ್ಮೀ ಸೆಹೆಗಲ್ ವಿರುದ್ಧ ೧೦೭,೩೬೬ ಓಟುಗಳ ಮುನ್ನಡೆಯಲ್ಲಿ ಗೆದ್ದರು. ೨೫ ಜುಲೈ ೨೦೦೨ರಿಂದ ೨೫ ಜುಲೈ ೨೦೦೭ರ ವರೆಗೆ ರಾಷ್ಟಪತಿಯಾಗಿ ಸೇವೆ ಸಲ್ಲಿಸಿದರು.

ಡೆವೆಲಪ್ಮೆಂಟ್ಸ್ ಇನ್ ಫ್ಲುಯಿಡ್ ಮೆಖಾನಿಕ್ಸ್ ಅಂಡ್ ಸ್ಪೇಸ್ ಟೆಕ್ನಾಲಜಿ-ರೊಡ್ಡಂ ನರಸಿಂಹರವರ ಜತೆ ಬರೆದಿರುವ ವೈಜ್ಞಾನಿಕ ಪುಸ್ತಕ.[೫]
ವಿಂಗ್ಸ್ ಆಫ್ ಫೈಯರ್ (ಕನ್ನಡ ಅನುವಾದ - ಅಗ್ನಿಯ ರೆಕ್ಕೆಗಳು)-ಅರುಣ್ ತಿವಾರಿಯವರ ಜತೆ ಬರೆದ ಈ ಪುಸ್ತಕವು ಇವರ ಆತ್ಮಕಥೆಯಾಗಿದ್ದು, ಇವರ ಸರಳ ಹಾಗೂ ಮಾದರಿ ಜೀವನದ ಅನೇಕ ಘಟನೆಗಳನ್ನು ಓದುಗರಿಗೆ ತೆರೆದಿಡುತ್ತದೆ. ಇಂದಿನ ಯುವ ಪೀಳಿಗೆಗೆ ಇದೊಂದು ಅನುರೂಪವಾದ ಮಾರ್ಗದರ್ಶಿ.[೬]
ಇಂಡಿಯಾ ೨೦೨೦- ಈ ಪುಸ್ತಕದಲ್ಲಿ ಕಲಾಮ್ ರವರು ೨೦೨೦ನೇ ಇಸವಿಯಲ್ಲಿ ಭಾವಿ ಭಾರತವು ಹೇಗಿರಬೇಕೆಂದು ತಮ್ಮ ಕನಸನ್ನು ಬಿಚ್ಚಿಡುತ್ತಾರೆ. ಯುವ ಜನಾಂಗಕ್ಕೆ ಸ್ಪೂರ್ತಿಯಾಗಬಲ್ಲಂತಹ ಕೃತಿ.[೭]
ಇಗ್ನೈಟೆಡ್ ಮೈಂಡ್ಸ್- ಮಕ್ಕಳಿಗಾಗಿ ಬರೆದಿರುವ ಈ ಪುಸ್ತಕವು ಅವರು ಮುಂದಿನ ನಾಗರೀಕರಾಗಿದ್ದು ದೇಶವನ್ನು ಹೇಗೆ ಬೆಳಸಬಹುದು ಎಂದು ಹೇಳುತ್ತದೆ.[೮]
ಎನ್ವಿಶನಿಂಗ್ ಅನ್ ಎಂಪವರ್ಡ್ ನೇಷನ್-ಸಾಮಾಜಿಕ ಬದಲಾವಣೆಗಾಗಿ ತಂತ್ರಜ್ಞಾನದ ಬಗ್ಗೆ ಎ.ಶಿವತನು ಪಿಳ್ಳೈರವರ ಜತೆ ಬರೆದಿರುವ ಪುಸ್ತಕ.[೯]
ಮೈ ಜರ್ನೀ- ಇದು ಅವರ ಎರಡನೇ ಆತ್ಮಕಥೆ. ಇಲ್ಲಿ ಅವರ ಜೀವನದ ಇಷ್ಟ-ಕಷ್ಟಗಳ ಬಗ್ಗೆ ಹೇಳಿದ್ದಾರೆ. ಇದನ್ನು ವಿ.ಸತ್ಯನಾರಾಯಣ ಮೂರ್ತಿ ಪ್ರಕಟಿಸಿದ್ದಾರೆ.[೧೦]
ದಿ ಲೈಫ್ ಟ್ರೀ - ಕಲಾಂ ಅವರು ಬರೀ ವಿಜ್ಞಾನಿಯಲ್ಲದೆ ಒಳ್ಳೆಯ ಕವಿಯೂ ಆಗಿದ್ದಾರೆ. ದಿ ಲೈಫ್ ಟ್ರೀ ಅವರ ಕವನ ಸಂಕಲನವಾಗಿದ್ದು ವಿಜ್ಞಾನ ಮತ್ತು ಸಾಹಿತ್ಯವನ್ನು ಒಂದು ಮಾಡುವ ಪುಸ್ತಕ ಇದು. ಇವರ ಕವನಗಳು ಇವರ ದೇಶಭಕ್ತಿ ಹಾಗು ಮಾತೃಭಕ್ತಿಯನ್ನು ತೋರಿಸುತ್ತದೆ ಮತ್ತು ದೇವರ ಮೇಲೆ ಇವರಿಗಿರುವ ಶ್ರದ್ಧಾ ಭಕ್ತಿಯನ್ನು ತೋರಿಸುತ್ತದೆ.[೧೧]
ಚಿಲ್ರೆನ್ ಆಸ್ಕ್ ಕಲಾಂ-ಮಕ್ಕಳು ಕಲಾಂರವರಿಗೆ ಬರೆದ ಪತ್ರಗಳ ಪ್ರಶ್ನೆಗಳಿಗೆ ಪ್ರತ್ಯುತ್ತರ ಪತ್ರಗಳ ಸಂಕಲನ ಈ ಪುಸ್ತಕ. ಇದರಲ್ಲಿ ಮಕ್ಕಳ ವಿಷಯಗಳು, ಭಾರತೀಯತೆ, ವಿದ್ಯಾಭ್ಯಾಸ, ಸಾಮಾನ್ಯ ವಿಷಯಗಳು, ವಿಜ್ಞಾನ ಮತ್ತು ಆಧ್ಯಾತ್ಮದ ಬಗ್ಗೆ ಮಕ್ಕಳಿಗೆ ತಿಳಿಸುತ್ತದೆ.

ಕಲಾಂ ಮೇಷ್ಟ್ರು, ವಿಶೇಷ ಕಾಳಜಿ ವಹಿಸಿ, ಭಾರತದ ಮಕ್ಕಳಿಗಾಗಿಯೇ ರಚಿಸಿದ ಬಹು ಅಮೂಲ್ಯ ಕೃತಿ. ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ಭಾರತದೇಶದ ಮಕ್ಕಳಿಗಾಗಿಯೇ ರಚಿಸಿದ, ಒಂದು ಅಪರೂಪದ ಪುಸ್ತಕವನ್ನು ಪ್ರಕಟಿಸಿದ್ದಾರೆ. ಅದನ್ನು ರಚಿಸಿದವರು. ಪ್ರೊ. ಎಚ್. ಆರ್. ರಾಮಕೄಷ್ಣರಾಯರು.

FRIENDSHIP

ಮನೆ ತುಂಬಾ ಮಕ್ಕಳು..
ಕಿತ್ತು 
ತಿನ್ನುವ ಬಡತನ...
ಹಸಿವು...

ಬದುಕಿನ
ನಿಜವಾದ ಬಣ್ಣವನ್ನು ಪರಿಚಯ ಮಾಡಿಸುವದೇ ಈ ಹಸಿವು... !

ಹೆಂಡತಿಗೆ ಸಹಿಸಲಾಗಲಿಲ್ಲ...

"ನಿಮ್ಮ 
ಸ್ನೇಹಿತ ಶ್ರೀಕೃಷ್ಣ..
ಈಗ ರಾಜನಾಗಿದ್ದಾನೆ...

ಹೋಗಿ..
ಒಮ್ಮೆ ಭೇಟಿಯಾಗಿ ಬನ್ನಿ..."

ಸುಧಾಮನಿಗೆ ಸಂಕೋಚವಾಯಿತು...

"ಹೇಗೆ ಹೋಗಲಿ.. ?

ಆತ ಚಕ್ರವರ್ತಿ...
ಶ್ರೀಮಂತ..
ಲೋಕವೇ ಅವನನ್ನು ಪೂಜಿಸುತ್ತಿದೆ...

ನನ್ನ 
ವೇಷ ಭೂಷಣಕ್ಕೂ ಅವನ ಭೇಟಿಯಾಗುವ ಯೋಗ್ಯತೆ ಇಲ್ಲ...

ನಾವು ಸಣ್ಣವರಿದ್ದಾಗ ಸ್ನೇಹವಿತ್ತು...

ಈಗ
ಆತನಿಗೆ ನನ್ನ ನೆನಪು ಇದೆಯೋ.. ಇಲ್ಲವೋ ಗೊತ್ತಿಲ್ಲ..."...

ಸುಧಾಮನ ಮಡದಿ ಬಿಡಲಿಲ್ಲ..

"ಸ್ನೇಹಕ್ಕೆ 
ಅಂತಸ್ತು... ಶ್ರೀಮಂತಿಕೆ..ಇವುಗಳ ಅಗತ್ಯವೇ ಇಲ್ಲ..

ಸ್ನೇಹಕ್ಕೆ 
ಕೇವಲ ಭಾವನೆ.. ನೆನಪುಗಳು... ಹೃದಯ ಶ್ರೀಮಂತಿಕೆ ಸಾಕು..
ಹೋಗಿ ಬನ್ನಿ..."

ಸುಧಾಮನಿಗೆ ಮತ್ತೆ ಸಂಕೋಚ..

"ಖಾಲಿ ಕೈಯ್ಯಲ್ಲಿ ಹೇಗೆ ಹೋಗಲಿ ?....

ಏನಾದರೂ 
ತೆಗೆದುಕೊಂಡು ಹೋಗಲು ನಮ್ಮ ಬಳಿ ಏನೂ ಇಲ್ಲವಲ್ಲ.."....

ಮಡದಿ ಹಠವಾದಿ...

ಮನೆಯ ಡಬ್ಬಗಳನ್ನೆಲ್ಲ ಹುಡುಕಾಡಿದಳು..

ಎರಡು ಮುಷ್ಟಿ "ಅವಲಕ್ಕಿ" ಸಿಕ್ಕಿತು... !

ಅವನ 
ಪಂಚೆಯ ತುದಿಗೆ ಅದನ್ನು ಕಟ್ಟಿ..

"ಹೋಗಿ ಬನ್ನಿ...
ಶ್ರೀಕೃಷ್ಣ ಕೇಳಿದರೆ ಇದನ್ನು ಕೊಡಿ...

ಅರ್ಥವಾಗುವ ಮನಸ್ಸಿಗೆ 
ಹೃದಯಕ್ಕೆ
ವಸ್ತುಸ್ಥಿತಿಯನ್ನು ಹೇಳುವ ಅಗತ್ಯವಿರುವದಿಲ್ಲ... ಅರ್ಥವಾಗುತ್ತದೆ..."...

ಸುಧಾಮ 
ಬಲು ದೂರ ನಡೆದು..
ಬಳಲಿ.. ಬೆಂಡಾಗಿ..
ಹಸಿವೆಯಿಂದ
ಶ್ರೀಕೃಷ್ಣನ ಮನೆಯ ದ್ವಾರದ ಬಳಿ ಬಂದ....

ದ್ವಾರ ಪಾಲಕ ಒಳಗೆ ಬಿಡಲಿಲ್ಲ...

"ನಾನು
ಶಿಕೃಷ್ಣನ ಗೆಳೆಯ...
ಬಾಲ್ಯ ಸ್ನೇಹಿತ..."....

ದ್ವಾರ ಪಾಲಕ ನಕ್ಕ... !

ಬಡತನಕ್ಕೆ 
ಕಣ್ಣೀರು...
ಹಸಿವೆಯನ್ನು ಬಿಟ್ಟು...
ಸುಲಭವಾಗಿ ಮತ್ತೆ ಯಾವುದೂ ದಕ್ಕುವದಿಲ್ಲ...

"ಪುಣ್ಯಾತ್ಮ...
ಒಳಗೆ ಹೋಗಿ ಶ್ರೀಕೃಷ್ಣನಿಗೆ "ಸುಧಾಮ ಬಂದಿದ್ದಾನೆ" ಅಂತಾದರೂ ಹೇಳು...

ಆತನಿಗೆ ನೆನಪು ಇಲ್ಲವಾದಲ್ಲಿ ತಿರುಗಿ ಹೋಗುವೆ... "....

ದ್ವಾರಪಾಲಕ
ಒಳಗೆ ಹೋಗಿ ಕೃಷ್ಣನಿಗೆ ಸುಧಾಮನ ಹೆಸರು ಹೇಳಿದ..

ಕೃಷ್ಣ
ಓಡೋಡಿ ದ್ವಾರದವರೆಗೆ ಬಂದ...

ತನ್ನ ಬಾಲ್ಯದ ಗೆಳೆಯನನ್ನು ತಬ್ಬಿಕೊಂಡ..

ಕಣ್ಣಲ್ಲಿ ನೀರು ಇಳಿಯುತ್ತಿತ್ತು...

ಸುಧಾಮನನ್ನು
ಒಳಗೆ ಕರೆತಂದು ತಾನು ಕುಳಿತುಕೊಳ್ಳುವ ಆಸನದಲ್ಲಿ ಕುಳ್ಳಿರಿಸಿದ...

ಅವನ ಪಾದ ತೊಳೆದ..
ಬಿಸಿಲಲ್ಲಿ 
ಬರಿಗಾಲಲ್ಲಿ ನಡೆದು ಬೊಬ್ಬೆಗುಳ್ಳೆಗಳಾಗಿದ್ದ ಗೆಳೆಯನ ಕಾಲುಗಳನ್ನು ನೋಡಿ ಮರುಗಿದ...
ದುಃಖಿಸಿದ...

ತಮ್ಮ ಬಾಲ್ಯದ ತುಂಟಾಟಗಳನ್ನು ನೆನಪಿಸಿದ...

ಹರಟಿದ... ನಗಿಸಿದ...
ಒಂದು
ಕ್ಷಣಕ್ಕಾದರೂ ಸುಧಾಮನ ನೋವುಗಳನ್ನು ಮರೆಸಿದ... !

ಹೊಟ್ಟೆ ತುಂಬಾ ಮೃಷ್ಟಾನ್ನ ಭೋಜನ ಬಡಿಸಿದ...

"ಗೆಳೆಯಾ...
ನನಗಾಗಿ ಏನು ತಂದಿರುವೆ...?..".... 

ಸುಧಾಮ 
ನಾಚಿ.. ಸಂಕೋಚದ ಮುದ್ದೆಯಾದ..

ಎಲ್ಲಿಯ ಶ್ರೀಕೃಷ್ಣ.. !
ಆವನ ಅರಮನೆಯ ವೈಭವ... ಮೃಷ್ಟಾನ್ನ ಭೋಜನ..!

ಎಲ್ಲಿಯ 
ಕುಚೇಲ
ಸುಧಾಮನ ಎರಡು ಹಿಡಿ ಮುಷ್ಟಿಯ ಒಣ ಅವಲಕ್ಕಿ ?...

ಕೃಷ್ಣ ಬಿಡಲಿಲ್ಲ...

ಪಂಚೆಯ ತುದಿಯಲ್ಲಿ ಕಟ್ಟಿದ ಅವಲಕ್ಕಿ ಕಾಣಿಸಿತು...

ಗಂಟು ಬಿಚ್ಚಿ...
ಅವಲಕ್ಕಿಯನ್ನು ಬಾಯಲ್ಲಿ ಹಾಕಿಕೊಂಡು ಬಾಯಿ ಚಪ್ಪರಿಸಿದ...

ಸುಧಾಮನ ಕಣ್ಣಲ್ಲಿ 
ನೀರಿಳಿಯುತ್ತಿತ್ತು..

ಒಂದೆರಡು ದಿನ ಅಲ್ಲಿದ್ದು 
ಶ್ರೀಕೃಷ್ಣನಿಂದ ಬಿಳ್ಕೊಟ್ಟು ಮನೆಯ ಕಡೆ ಹೊರಟ..

ಮನೆಯ 
ಬಳಿ ಬಂದಾಗ ಅವನ ಮನೆ ಅಲ್ಲಿರಲಿಲ್ಲ...
ದೊಡ್ಡ ಅರಮನೆಯಿತ್ತು...

ಅವನ ಮಕ್ಕಳು ಒಳ್ಳೆಯ ಉಡುಪುಗಳನ್ನು ಧರಿಸಿ ಅಪ್ಪನನ್ನು ಸ್ವಾಗತಿಸಿದರು..

ಮಡದಿ
ರೇಷ್ಮೆ ಸೀರೆ ಉಟ್ಟು... ಮೈ ತುಂಬಾ ಆಭರಣ ಧರಿಸಿ ನಗು ನಗುತ್ತಾ ಸ್ವಾಗತಿಸಿದಳು....

ಕೃಷ್ಣನ ಭೇಟಿಯಲ್ಲಿ
ಸುಧಾಮನಿಗೆ ನಾಲಿಗೆ ಕಟ್ಟಿತ್ತು...

ಸಹಾಯ ಕೇಳಿರಲಿಲ್ಲ...

ಆದರೆ 
ಶ್ರಿಕೃಷ್ಣ 
ತನ್ನ ಗೆಳೆಯನನ್ನು..

ಗೆಳೆತನವನ್ನು ಮರೆತಿರಲಿಲ್ಲ...

ಒಮ್ಮೆ
ಶುರುವಾದ ಸ್ನೇಹಕ್ಕೆ "ಮರೆವು" ಎನ್ನುವದು ಇರುವದಿಲ್ಲ...

ದೂರ..
ಹತ್ತಿರ...
ಮಾತು.. ಮೌನ 
ಎಲ್ಲವನ್ನೂ ಮೀರಿದ ಭಾವ ಸಂಬಂಧ ಇದು.. !
:::::::::::::::::::

ನಮ್ಮ

ಪ್ರತಿ ಮಾತಿನಲ್ಲಿ...
ಮೌನದಲ್ಲಿ... 
ಪವಿತ್ರವಾದ ಸ್ನೇಹ ಪರಿಮಳವಿರಲಿ....

ನಮ್ಮ ಪ್ರತಿ ಸಂಬಂಧಗಳಲ್ಲಿ "ಭಾವನೆಗಳಿರಲಿ"...

ನಮ್ಮ
ಪ್ರತಿಯೊಂದು ಸಂಬಂಧಗಳು
ಭಾವ
ಭಾಂಧವ್ಯಗಳಾಗಲಿ..
ಅವುಗಳನ್ನು ನಿಭಾಯಿಸುವ ಶಕ್ತಿ ನಮಗಿರಲಿ...

ನಮ್ಮ
ಪ್ರತಿಯೊಂದೂ ಸಂಬಂಧಗಳಲ್ಲಿ ಒಬ್ಬ ನಗುವ ಗೆಳೆಯನಿರಲಿ....

She ask a question

ಒಂದು ಸ್ತ್ರೀಯ ಸರಳವಾದ ಪ್ರಶ್ನೆ:-
************************

ದೇಹ ನನ್ನದು
ಆದರೆ ಅರಶಿಣ ನಿಮ್ಮ ಹೆಸರಿನಲ್ಲಿ...

ಕೈ ನನ್ನದು
ಆದರೆ ಮದರಂಗಿ ನಿಮ್ಮ ಹೆಸರಿನಲ್ಲಿ...

ಬೈತಲೆ ನನ್ನದು
ಆದರೆ ಸಿಂಧೂರ ನಿಮ್ಮ ಹೆಸರಿನಲ್ಲಿ...

ಹಣೆ ನನ್ನದು
ಆದರೆ ಕುಂಕುಮ ನಿಮ್ಮ ಹೆಸರಿನಲ್ಲಿ...

ಮೂಗು ನನ್ನದು
ಆದರೆ ಮೂಗುತಿ ನಿಮ್ಮ ಹೆಸರಿನಲ್ಲಿ...

ಕೊರಳು ನನ್ನದು
ಆದರೆ ಮಾಂಗಲ್ಯ ನಿಮ್ಮ ಹೆಸರಿನಲ್ಲಿ...

ಕೈ ನನ್ನದು
ಆದರೆ ಬಳೆಗಳು ನಿಮ್ಮ ಹೆಸರಿನಲ್ಲಿ...

ಕಾಲು ನನ್ನದು
ಆದರೆ ಕಾಲ್ಗೆಜ್ಜೆ ನಿಮ್ಮ ಹೆಸರಿನಲ್ಲಿ...

ಬೆರಳು ನನ್ನದು
ಆದರೆ ಉಂಗುರ ನಿಮ್ಮ ಹೆಸರಿನಲ್ಲಿ...

ದೊಡ್ಡವರ ಪಾದಗಳಿಗೆ ನಮಸ್ಕಾರ ನಾನು ಮಾಡುವೆ
ಆದರೆ ಅವರ ಶುಭ ಹಾರೈಕೆ "ದೀರ್ಘ ಸುಮಂಗಲಿಯಾಗಿರು"
ಅಂತ ಹೇಳುವುದು ನಿಮ್ಮ ಹೆಸರಿನಲ್ಲಿ...

ಮಗು ನನ್ನದು / ರಕ್ತ ನನ್ನದು / ಹಾಲು ನನ್ನದು
ಆದರೆ ಮಗು ಸಹ ನಿಮ್ಮ ಹೆಸರಿನಲ್ಲಿ...

ಹೀಗೆ ಎಲ್ಲವೂ ನಿಮ್ಮ ಹೆಸರಿನೊಂದಿಗೆ ಬೆರೆತುಕೊಂಡಿವೆ.

ನಮ್ರತೆಯಿಂದ ಕೇಳುತ್ತಿದ್ದೇನೆ,
"ಒಟ್ಟಿನಲ್ಲಿ ನಿಮ್ಮ ಬಳಿ ಏನಿದೆ ನನ್ನ ಹೆಸರಿನಲ್ಲಿ?"