Wednesday, 17 February 2016
Tuesday, 9 February 2016
Gurukula educational trust
Gurukula Institute of Information Technology a computer education center in KOPPAL .
#gurukula_educational_trust
gurukulaedutrust@gmail.com
9036666837
Tuesday, 17 November 2015
Sunday, 15 November 2015
Our first project
We promised and now we are fulfilling it
ಗುರುಕುಲ ಏಜ್ಯುಕೇಶನಲ್ ಟ್ರಸ್ಟ್(GET) ನ ಧ್ಯೇಯದಂತೆ ಎಲ್ಲರಿಗೂ ಅಧುನಿಕ ಶಿಕ್ಷಣ ನೀಡಬೇಕೆಂಬ ಉದ್ದೇಶದೋಂದಿಗೆ ಮೊದಲ ಹಂತವಾಗಿ Gurukula Institute of Information Technology (GIIT) ಎಂಬ Computer ಶಿಕ್ಷಣ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಿದೆ.
ಗುರುಕುಲ ಏಜ್ಯುಕೇಶನಲ್ ಟ್ರಸ್ಟ್(GET) ಮೊದಲೆ ನಿರ್ಧರಿಸಿದಂತೆ ಬರುವ ಜನವೇರಿ 2016 ರಂದು ಸ್ಥಾಪಿಸಲ್ಪಡುವ GIIT ಎಂಬ Computer ಶಿಕ್ಷಣ ಕೇಂದ್ರದಲ್ಲಿ
ಮೊದಲನೇಯದಾಗಿ
• ಆಯ್ದ ಬಡ ವಿಧ್ಯಾವಂತ ವಿಧ್ಯಾರ್ಥಿಗಳಿಗೆ ಮತ್ತು ವಿಕಲಚೇತನರಿಗೆ ಉಚಿತವಾಗಿ Computer ಶಿಕ್ಷಣ ನೀಡುವದು
(T&C Apply) ಮತ್ತು Job Placement Cell ನ ಅಡಿ ಅಲ್ಲಿ ಶೇಕಡಾ ೧೦೦% ರಷ್ಟು ಉದ್ಯೋಗ ಕೊಡಿಸುವಲ್ಲಿ ಪ್ರಯತ್ನಿಸುವದು ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದು.
ಎರಡೆನೇಯದಾಗಿ
• Commerce, B.com ಓದಿದ ವಿಧ್ಯಾರ್ಥಿಗಳಿಗೆ ಪರಿಣಿತರಿಂದ Professional Tally ಬೋದನೆ ಮಾಡಿಸಿ ಜೊತೆಗೆ Personality Development, Spoken English, Soft Skills ಗಳ ತರಬೇತಿ ನೀಡಿ Job Placement Cell ನ ಅಡಿ ಉದ್ಯೋಗ ದೊರಕುವಂತೆ ಮಾಡುವದು.
ಮೂರನೇಯದಾಗಿ
• ಗ್ರಾಮೀಣ ವಿಧ್ಯಾರ್ಥಿಗಳಿಗೆ GIIT ನಲ್ಲಿ ವಿಷೆಶವಾದ Course ಗಳಿಗೇ ಶೇಕಡಾ 25% ರಷ್ಟು ಕಡಿತಗೋಳಿಸಲಾಗುವದು
ಮತ್ತು
ಮಹೀಳಾ ಸಬಲೀಕರಣದ ದೃಷ್ಟಿಯಿಂದ ವಿಧ್ಯಾರ್ಥಿನಿಯರಿಗೆ ಮತ್ತು ಮಹಿಳೆಯರಿಗೆ ಪ್ರತಿ Course ಗಳ ಮೇಲೆ ಕಡಿತಗೋಳಿಸಿ Computer ಶಿಕ್ಷಣ ಪಡೆಯುವಂತೆ ಪ್ರೋತ್ಸಾಹಿಸುವದು.
NOTE
• GIIT ಅಲ್ಲಿ Job Placement Cell ತೇರದು GIIT ಅಲ್ಲಿ Computer ಶಿಕ್ಷಣ ಪಡೆದ ವಿಧ್ಯಾರ್ಥಿಗಳಿಗೆ ಉದ್ಯೋಗ ಪಡೆಯುವಂತೆ ಮಾಡುವದು.
• GIIT ನಲ್ಲಿ computer ಶಿಕ್ಷಣ ಪಡೆದ ವಿಧ್ಯಾರ್ಥಿಗಳಿಗೆ ಗುರುಕುಲ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸುವದು.
• ಆಯ್ದ Course ಗಳಿಗೇ Bengaluru ನ Sent Johns School ನಲ್ಲಿ English Trainee ಅವರಿಂದ Spoken English and Soft Skills ನ ವಿಷೇಶ ಕಾರ್ಯಗಾರವಿರುತ್ತದೆ.
• ವಿಧ್ಯಾರ್ಥಿಗಳಿಗೆ ತಮಗೆ ಬೇಕಾದ Couse ಗಳನ್ನು ಆಯ್ಕೇ ಮಾಡಲು ಮತ್ತು ಕಲಿಯಲು ಇಷ್ಟವಿರುವ Subject ಅನ್ನು ಆಯ್ಕೇ ಮಾಡಿಕೊಳ್ಳುವ ಅವಕಾಶವಿರುತ್ತದೆ.
Team Gurukual
Gurukulaedutrust@gmail
Moto of gurukula education trust
"ಶಿಕ್ಷಣದ ಮೂಲಕ ಉತ್ತಮ ಸಮಾಜ ನಿರ್ಮಾಣದ ಗುರಿಯೊಂದಿಗೆ", ನಮ್ಮ ಪಾರಂಪರಿಕ ಮೌಲ್ಯಗಳು,ನಾಡು-ನುಡಿ ಮತ್ತು ಸಂಸ್ಕೃತಿಗಳಿಗೆ ಬದ್ಧವಾಗಿ ಆಧುನಿಕ ಶಿಕ್ಷಣ ನೀಡುವುದೇ ನಮ್ಮ ಧ್ಯೇಯ.
ಮೋದಲ ಹಂತದಲ್ಲಿ : -
> ಆಯ್ದ ಬಡ ವಿಧ್ಯಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು.
> Computer ಶಿಕ್ಷಣ ನೀಡುವದು. ಮತ್ತು
ಆಯ್ದ ಬಡ ವಿಧ್ಯಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ Computer ಶಿಕ್ಷಣ ನೀಡುವ ಉದ್ದೇಶ ಹೋದಿರುತ್ತದೆ.
> Play Home & Baby Sitting ಗಳನ್ನು ಸ್ಥಾಪಿಸಿ, ಮಕ್ಕಳಿಗೆ ಆಧುನಿಕ ಶಿಕ್ಷಣಕ್ಕೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಜೋತೆಗೆ ಮಂತ್ರ, ಶ್ಲೋಕಗಳು, ಪುರಾಣ-ಪುಣ್ಯ ಕಥೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶ ಹೋಂದಿರುತ್ತದೆ.
ಎರಡನೇ ಹಂತವಾಗಿ : -
> ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸುವುದು.
> ಮಹಿಳಾ ಸಬಲೀಕರಣ ದೃಷ್ಟಿಯಿಂದ ಅತಿ ಕಡಿಮೆ ಶುಲ್ಕಕ್ಕೆ ಶಾಲಾ College ಗಳಲ್ಲಿ ಇರುವ ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯ ಒದಗಿಸುವ ಉದ್ದೇಶ ಹೋಂದಿದೆ.
ಮೂರನೆ ಹಂತವಾಗಿ : -
> ಪ್ರೌಢ ಶಾಲೆ ಮತ್ತು College ಗಳನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ.
>Team Gurukula
Gurukulaedutrust@gmail
Saturday, 26 September 2015
About ಶಾಸ್ತ್ರೀಜಿ.
ಹೀಗೆ ಬದುಕಿದ್ದರು ನಮ್ಮ ಶಾಸ್ತ್ರೀಜಿ.
ಎರಡು ಘಂಟೆ ಯುದ್ಧ ಮುಂದುವರಿದಿದ್ದರೆ,ಭಾರತೀಯ ಸೇನೆ ಪಾಕಿಸ್ತಾನದ ಲಾಹೋರ್ ತನಕ ತನ್ನ ಅಧಿಪತ್ಯವನ್ನು ಸ್ಥಾಪಿಸುತ್ತಿತ್ತು.
ಎಚ್ಚೆತ್ತ ಪಾಕಿಸ್ತಾನ ಅಮೇರಿಕದ ಮುಂದೆ ಮಂಡಿಯೂರಿ ಕೂತಿತು.ಯುದ್ಧವನ್ನು ನಿಲ್ಲಿಸಲು ಭಾರತಕ್ಕೆ ಸೂಚಿಸುವಂತೇ ಗೋಗರೆಯಿತು.
ಆಗ ಅಮೇರಿಕದ ಗೋಧಿ ಭಾರತಕ್ಕೆ ಆಮದಾಗುತ್ತಿತ್ತು.ಆ ಗೋಧಿಯ ಗುಣಮಟ್ಟ ಹೇಗಿತ್ತೆಂದರೆ,ಪ್ರಾಣಿಗಳು ತಿನ್ನಲೂ ಅಸಾಧ್ಯವಾದದ್ದು.ಈ ಆಮದು ಒಪ್ಪಂದಕ್ಕೆ ಸಹಿ ಹಾಕಿದ್ದು ಜವಾಹರಲಾಲ್ ನೆಹರೂ.ಪಾಕಿಸ್ತಾನದ ಜೊತೆಗಿನ ಯುದ್ಧವನ್ನು ನಿಲ್ಲಿಸದಿದ್ದರೆ,ಗೋಧಿಯ ರಫ್ತನ್ನು ನಿಲ್ಲಿಸುತ್ತೇವೆಂಬ ಸೂಚನೆ ಅಮೇರಿಕದಿಂದ ಶಾಸ್ತ್ರೀಜಿಯವರಿಗೆ ಬಂತು.ಶಾಸ್ತ್ರೀಜಿಯವರಿಂದ ಬಂದ ಉತ್ತರ, “ನಿಲ್ಲಿಸಿ ತೊಂದರೆಯಿಲ್ಲ”
“ಹೊಟ್ಟೆಗೆ ಆಹಾರವಿಲ್ಲದಿದ್ದರೆ ಭಾರತೀಯರು ಸಾಯುತ್ತಾರೆ”ಅಮೇರಿಕದ ಕುಚೋದ್ಯ ಪ್ರತಿಕ್ರಿಯೆ..!!
“ದೊಡ್ಡು ಕೊಟ್ಟು ನಿಮ್ಮ ಕಳಪೆಗುಣಮಟ್ಟದ ಗೋಧಿಯನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳುವುದಕ್ಕಿಂತ,ಹಸಿವಿನಿಂದ ಸಾಯುವುದೇ ವಾಸಿ.ಇಂದಿನಿಂದ ನಿಮ್ಮ ಗೋಧಿ ನಮಗೆ ಬೇಕಿಲ್ಲ” ಶಾಸ್ತ್ರೀಜಿಯವರ ತೀಕ್ಷ್ಣ ಪ್ರತಿಕ್ರಿಯೆ.
ದೆಹಲಿಯ ರಾಮಲೀಲಾ ಮೈದಾನದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಶಾಸ್ತ್ರೀಜಿ ಮಾತನಾಡುತ್ತಾರೆ..
“ಪಾಕಿಸ್ತಾನದೊಂದಿಗೆ ಯುದ್ಧ ನಡೆಯುತ್ತಿದೆ.ಅಮೇರಿಕದಿಂದ ಗೋಧಿ ಆಮದಾಗುವುದು ನಿಂತಿದೆ.ದೇಶದ ಜನ ಸಹಕರಿಸಬೇಕಿದೆ.ಒಂದು..ನೀವು ನೇರವಾಗಿ ಸೇನೆಗೆ ಧನ ಅಥವಾ ಆಹಾರದ ಸಹಾಯವನ್ನು ಮಾಡಬಹುದು.ಎರಡು..ಪ್ರತಿ ಸೋಮವಾರ ನೀವು ಉಪವಾಸವೃತವನ್ನು ಆಚರಿಸಬಹುದು.ಇದರಿಂದ ದೇಶದ ಹಣಕಾಸಿನ ವ್ಯವಹಾರ ಸರಾಗವಾಗಿ ನಡೆಯಬಹುದು.ಇಲ್ಲದಿದ್ದರೆ ದೇಶ ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗಬಹುದು”
ಶಾಸ್ತ್ರೀಜಿಯವರ ಈ ಕರೆಗೆ ಇಡೀ ದೇಶ ಓಗೊಟ್ಟಿತು.ಹಲವರು ಸೇನೆಗೆ ಸಹಾಯ ಮಾಡಿದರು.ಲಕ್ಷಾಂತರ ಜನ ಸೋಮವಾರದ ಉಪವಾಸವನ್ನು ಆರಂಭಿಸಿದರು.ಸ್ವತಃ ಶಾಸ್ತ್ರೀಜಿಯವರೂ ಸೋಮವಾರದಂದು ಉಪವಾಸವೃತವನ್ನು ಕೈಗೊಂಡರು.
ಶಾಸ್ತ್ರೀಜಿಯವರ ಪತ್ನಿ,ಲಲಿತಾದೇವಿಯವರು ಅನಾರೋಗ್ಯಪೀಡಿತರಾಗಿದ್ದರು.ಮನೆಗೆಲಸಕ್ಕೆಂದು ಕೆಲಸದವಳೊಬ್ಬಳು ಬರುತ್ತಿದ್ದಳು.ಶಾಸ್ತ್ರೀಜಿಯವರು ಮಹಿಳೆಗೆ ನಾಳೆಯಿಂದ ಕೆಲಸಕ್ಕೆ ಬರಬೇಡ ಎಂದರು.ಆಕೆ”ಅಲ್ಲ,ನಿಮ್ಮ ಬಟ್ಟೆಯನ್ನು ತೊಳೆಯುವುದು,ಮನೆಯನ್ನು ಸ್ವಚ್ಛಗೊಳಿಸುವುದು,ನಿಮ್ಮ ಪತ್ನಿಯ ಆರೈಕೆಯನ್ನು ಯಾರು ಮಾಡಿಕೊಡುತ್ತಾರೆ ಸ್ವಾಮೀ”ಎಂದು ಕೇಳಿದಳು.
“ದೇಶಕ್ಕಾಗಿ ಇದು ಅನಿವಾರ್ಯವಮ್ಮಾ.ನಿನಗೆ ಕೊಡುವ ಸಂಬಳದ ಹಣವಾದರೂ ಉಳಿದೀತು.ದೇಶದ ಒಳಿತಿಗಾದೀತು” ಎಂದು ಹೇಳಿದರು.ನಂತರ ಮನೆಯ ಪ್ರತಿಯೊಂದು ಕೆಲಸವನ್ನೂ ಶಾಸ್ತ್ರೀಜಿಯವರೇ ನಿಭಾಯಿಸುತ್ತಿದ್ದರು.
ಶಾಸ್ತ್ರೀಜಿಯವರ ಮಕ್ಕಳಿಗೆ ಇಂಗ್ಲೀಷ್ ಹೇಳಿಕೊಡಲೆಂದು ಟ್ಯೂಟರ್ ಬರುತ್ತಿದ್ದರು.ಅವರನ್ನೂ ಕೆಲಸದಿಂದ ವಿಮುಕ್ತಗೊಳಿಸಿದರು.”ಮಕ್ಕಳು ಇಂಗ್ಲೀಷಿನಲ್ಲಿ ಫೇಲಾಗುತ್ತಾರೆ”ಟ್ಯೂಟರ್ ಹೇಳಿದ್ದಕ್ಕೆ ಶಾಸ್ತ್ರೀಜಿ,”ಆಗಲಿ ಬಿಡಿ ಇಂಗ್ಲೀಷ್ ನಮ್ಮ ಭಾಷೆಯಲ್ಲ.ಇಂಗ್ಲಿಷರು ಹಿಂದಿಯನ್ನು ಬರೆದರೆ ಅವರೂ ಫೇಲಾಗುತ್ತಾರೆ”ಎಂದರು.
ಒಂದು ದಿನ ಶಾಸ್ತ್ರೀಜಿಯವರ ಪತ್ನಿ,ಹರಿದುಹೋಗಿರುವ ಅವರ ಧೋತಿಯನ್ನು ನೋಡಿ “ಒಂದು ಹೊಸ ಧೋತಿಯನ್ನಾದರೂ ತೆಗೆದುಕೊಳ್ಳಬಾರದೇ?”ಎಂದು ಕೇಳುತ್ತಾರೆ.”ಅದನ್ನು ಕೊಳ್ಳಲು ಹಣವೆಲ್ಲಿದೆ..?ಬರುವ ಸಂಬಳವನ್ನೂ ಬಿಟ್ಟಾಗಿದೆ.ಮನೆಯ ಖರ್ಚುಗಳನ್ನು ಕಡಿಮೆ ಮಾಡು” ಎಂದಿದ್ದರು.
( http://fightforright.co )
ಅಕ್ಟೋಬರ್ ಎರಡು ಬರುತ್ತಿದೆ.ಶಾಸ್ತ್ರೀಜಿಯವರ ಜನ್ಮದಿನ.ನಿರ್ಲಕ್ಷ್ಯಕ್ಕೊಳಗಾಗಿರುವ ಸರಳ,ಸಜ್ಜನ ಮಹಾಪುರುಷನನ್ನು ನಾವಂದು ಸ್ಮರಿಸಬೇಕಿದೆ..
ಲೇಖಕರು:
ಪ್ರದೀಪ ಹೆಗಡೆ

