Sunday 15 November 2015

Our first project

We promised and now we are fulfilling it

ಗುರುಕುಲ ಏಜ್ಯುಕೇಶನಲ್ ಟ್ರಸ್ಟ್(GET) ನ ಧ್ಯೇಯದಂತೆ ಎಲ್ಲರಿಗೂ ಅಧುನಿಕ ಶಿಕ್ಷಣ ನೀಡಬೇಕೆಂಬ ಉದ್ದೇಶದೋಂದಿಗೆ ಮೊದಲ ಹಂತವಾಗಿ Gurukula Institute of Information Technology (GIIT) ಎಂಬ Computer ಶಿಕ್ಷಣ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಿದೆ.
ಗುರುಕುಲ ಏಜ್ಯುಕೇಶನಲ್ ಟ್ರಸ್ಟ್(GET) ಮೊದಲೆ ನಿರ್ಧರಿಸಿದಂತೆ ಬರುವ ಜನವೇರಿ 2016 ರಂದು ಸ್ಥಾಪಿಸಲ್ಪಡುವ GIIT ಎಂಬ Computer ಶಿಕ್ಷಣ ಕೇಂದ್ರದಲ್ಲಿ 
ಮೊದಲನೇಯದಾಗಿ
• ಆಯ್ದ ಬಡ ವಿಧ್ಯಾವಂತ ವಿಧ್ಯಾರ್ಥಿಗಳಿಗೆ ಮತ್ತು ವಿಕಲಚೇತನರಿಗೆ ಉಚಿತವಾಗಿ Computer ಶಿಕ್ಷಣ ನೀಡುವದು
(T&C Apply) ಮತ್ತು Job Placement Cell ನ ಅಡಿ ಅಲ್ಲಿ ಶೇಕಡಾ ೧೦೦% ರಷ್ಟು ಉದ್ಯೋಗ ಕೊಡಿಸುವಲ್ಲಿ ಪ್ರಯತ್ನಿಸುವದು ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದು.
ಎರಡೆನೇಯದಾಗಿ
• Commerce, B.com ಓದಿದ ವಿಧ್ಯಾರ್ಥಿಗಳಿಗೆ ಪರಿಣಿತರಿಂದ Professional Tally ಬೋದನೆ ಮಾಡಿಸಿ ಜೊತೆಗೆ Personality Development, Spoken English, Soft Skills ಗಳ ತರಬೇತಿ ನೀಡಿ Job Placement Cell ನ ಅಡಿ ಉದ್ಯೋಗ ದೊರಕುವಂತೆ ಮಾಡುವದು.
ಮೂರನೇಯದಾಗಿ
• ಗ್ರಾಮೀಣ ವಿಧ್ಯಾರ್ಥಿಗಳಿಗೆ GIIT ನಲ್ಲಿ ವಿಷೆಶವಾದ Course ಗಳಿಗೇ ಶೇಕಡಾ 25% ರಷ್ಟು ಕಡಿತಗೋಳಿಸಲಾಗುವದು
ಮತ್ತು
ಮಹೀಳಾ ಸಬಲೀಕರಣದ ದೃಷ್ಟಿಯಿಂದ ವಿಧ್ಯಾರ್ಥಿನಿಯರಿಗೆ ಮತ್ತು ಮಹಿಳೆಯರಿಗೆ ಪ್ರತಿ Course ಗಳ ಮೇಲೆ ಕಡಿತಗೋಳಿಸಿ Computer ಶಿಕ್ಷಣ ಪಡೆಯುವಂತೆ ಪ್ರೋತ್ಸಾಹಿಸುವದು.
NOTE
• GIIT ಅಲ್ಲಿ Job Placement Cell ತೇರದು GIIT ಅಲ್ಲಿ Computer ಶಿಕ್ಷಣ ಪಡೆದ ವಿಧ್ಯಾರ್ಥಿಗಳಿಗೆ ಉದ್ಯೋಗ ಪಡೆಯುವಂತೆ ಮಾಡುವದು.
• GIIT ನಲ್ಲಿ computer ಶಿಕ್ಷಣ ಪಡೆದ ವಿಧ್ಯಾರ್ಥಿಗಳಿಗೆ ಗುರುಕುಲ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸುವದು.
• ಆಯ್ದ Course ಗಳಿಗೇ Bengaluru ನ Sent Johns School ನಲ್ಲಿ English Trainee ಅವರಿಂದ Spoken English and Soft Skills ನ ವಿಷೇಶ ಕಾರ್ಯಗಾರವಿರುತ್ತದೆ.
• ವಿಧ್ಯಾರ್ಥಿಗಳಿಗೆ ತಮಗೆ ಬೇಕಾದ Couse ಗಳನ್ನು ಆಯ್ಕೇ ಮಾಡಲು ಮತ್ತು ಕಲಿಯಲು ಇಷ್ಟವಿರುವ  Subject ಅನ್ನು ಆಯ್ಕೇ ಮಾಡಿಕೊಳ್ಳುವ ಅವಕಾಶವಿರುತ್ತದೆ.

Team Gurukual
Gurukulaedutrust@gmail

Moto of gurukula education trust

"ಶಿಕ್ಷಣದ ಮೂಲಕ ಉತ್ತಮ ಸಮಾಜ ನಿರ್ಮಾಣದ ಗುರಿಯೊಂದಿಗೆ", ನಮ್ಮ ಪಾರಂಪರಿಕ ಮೌಲ್ಯಗಳು,ನಾಡು-ನುಡಿ ಮತ್ತು ಸಂಸ್ಕೃತಿಗಳಿಗೆ ಬದ್ಧವಾಗಿ ಆಧುನಿಕ ಶಿಕ್ಷಣ ನೀಡುವುದೇ ನಮ್ಮ ಧ್ಯೇಯ.

ಮೋದಲ ಹಂತದಲ್ಲಿ : -

> ಆಯ್ದ ಬಡ ವಿಧ್ಯಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು.
> Computer ಶಿಕ್ಷಣ ನೀಡುವದು. ಮತ್ತು
ಆಯ್ದ ಬಡ ವಿಧ್ಯಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ Computer ಶಿಕ್ಷಣ ನೀಡುವ ಉದ್ದೇಶ ಹೋದಿರುತ್ತದೆ.
> Play Home & Baby Sitting ಗಳನ್ನು ಸ್ಥಾಪಿಸಿ, ಮಕ್ಕಳಿಗೆ ಆಧುನಿಕ ಶಿಕ್ಷಣಕ್ಕೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಜೋತೆಗೆ ಮಂತ್ರ, ಶ್ಲೋಕಗಳು, ಪುರಾಣ-ಪುಣ್ಯ ಕಥೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶ ಹೋಂದಿರುತ್ತದೆ.

ಎರಡನೇ ಹಂತವಾಗಿ : -

> ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸುವುದು.
> ಮಹಿಳಾ ಸಬಲೀಕರಣ ದೃಷ್ಟಿಯಿಂದ ಅತಿ ಕಡಿಮೆ ಶುಲ್ಕಕ್ಕೆ ಶಾಲಾ College ಗಳಲ್ಲಿ ಇರುವ ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯ ಒದಗಿಸುವ ಉದ್ದೇಶ ಹೋಂದಿದೆ.

ಮೂರನೆ ಹಂತವಾಗಿ : -

> ಪ್ರೌಢ ಶಾಲೆ ಮತ್ತು College ಗಳನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ.

>Team Gurukula
Gurukulaedutrust@gmail

Saturday 26 September 2015

About ಶಾಸ್ತ್ರೀಜಿ.

ಹೀಗೆ ಬದುಕಿದ್ದರು ನಮ್ಮ ಶಾಸ್ತ್ರೀಜಿ.
ಎರಡು ಘಂಟೆ ಯುದ್ಧ ಮುಂದುವರಿದಿದ್ದರೆ,ಭಾರತೀಯ ಸೇನೆ ಪಾಕಿಸ್ತಾನದ ಲಾಹೋರ್ ತನಕ ತನ್ನ ಅಧಿಪತ್ಯವನ್ನು ಸ್ಥಾಪಿಸುತ್ತಿತ್ತು.

ಎಚ್ಚೆತ್ತ ಪಾಕಿಸ್ತಾನ ಅಮೇರಿಕದ ಮುಂದೆ ಮಂಡಿಯೂರಿ ಕೂತಿತು.ಯುದ್ಧವನ್ನು ನಿಲ್ಲಿಸಲು ಭಾರತಕ್ಕೆ ಸೂಚಿಸುವಂತೇ ಗೋಗರೆಯಿತು.

ಆಗ ಅಮೇರಿಕದ ಗೋಧಿ ಭಾರತಕ್ಕೆ ಆಮದಾಗುತ್ತಿತ್ತು.ಆ ಗೋಧಿಯ ಗುಣಮಟ್ಟ ಹೇಗಿತ್ತೆಂದರೆ,ಪ್ರಾಣಿಗಳು ತಿನ್ನಲೂ ಅಸಾಧ್ಯವಾದದ್ದು.ಈ ಆಮದು ಒಪ್ಪಂದಕ್ಕೆ ಸಹಿ ಹಾಕಿದ್ದು ಜವಾಹರಲಾಲ್ ನೆಹರೂ.ಪಾಕಿಸ್ತಾನದ ಜೊತೆಗಿನ ಯುದ್ಧವನ್ನು ನಿಲ್ಲಿಸದಿದ್ದರೆ,ಗೋಧಿಯ ರಫ್ತನ್ನು ನಿಲ್ಲಿಸುತ್ತೇವೆಂಬ ಸೂಚನೆ ಅಮೇರಿಕದಿಂದ ಶಾಸ್ತ್ರೀಜಿಯವರಿಗೆ ಬಂತು.ಶಾಸ್ತ್ರೀಜಿಯವರಿಂದ ಬಂದ ಉತ್ತರ, “ನಿಲ್ಲಿಸಿ ತೊಂದರೆಯಿಲ್ಲ”

“ಹೊಟ್ಟೆಗೆ ಆಹಾರವಿಲ್ಲದಿದ್ದರೆ ಭಾರತೀಯರು ಸಾಯುತ್ತಾರೆ”ಅಮೇರಿಕದ ಕುಚೋದ್ಯ ಪ್ರತಿಕ್ರಿಯೆ..!!

“ದೊಡ್ಡು ಕೊಟ್ಟು ನಿಮ್ಮ ಕಳಪೆಗುಣಮಟ್ಟದ ಗೋಧಿಯನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳುವುದಕ್ಕಿಂತ,ಹಸಿವಿನಿಂದ ಸಾಯುವುದೇ ವಾಸಿ.ಇಂದಿನಿಂದ ನಿಮ್ಮ ಗೋಧಿ ನಮಗೆ ಬೇಕಿಲ್ಲ” ಶಾಸ್ತ್ರೀಜಿಯವರ ತೀಕ್ಷ್ಣ ಪ್ರತಿಕ್ರಿಯೆ.

ದೆಹಲಿಯ ರಾಮಲೀಲಾ ಮೈದಾನದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಶಾಸ್ತ್ರೀಜಿ ಮಾತನಾಡುತ್ತಾರೆ..

“ಪಾಕಿಸ್ತಾನದೊಂದಿಗೆ ಯುದ್ಧ ನಡೆಯುತ್ತಿದೆ.ಅಮೇರಿಕದಿಂದ ಗೋಧಿ ಆಮದಾಗುವುದು ನಿಂತಿದೆ.ದೇಶದ ಜನ ಸಹಕರಿಸಬೇಕಿದೆ.ಒಂದು..ನೀವು ನೇರವಾಗಿ ಸೇನೆಗೆ ಧನ ಅಥವಾ ಆಹಾರದ ಸಹಾಯವನ್ನು ಮಾಡಬಹುದು.ಎರಡು..ಪ್ರತಿ ಸೋಮವಾರ ನೀವು ಉಪವಾಸವೃತವನ್ನು ಆಚರಿಸಬಹುದು.ಇದರಿಂದ ದೇಶದ ಹಣಕಾಸಿನ ವ್ಯವಹಾರ ಸರಾಗವಾಗಿ ನಡೆಯಬಹುದು.ಇಲ್ಲದಿದ್ದರೆ ದೇಶ ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗಬಹುದು”

ಶಾಸ್ತ್ರೀಜಿಯವರ ಈ ಕರೆಗೆ ಇಡೀ ದೇಶ ಓಗೊಟ್ಟಿತು.ಹಲವರು ಸೇನೆಗೆ ಸಹಾಯ ಮಾಡಿದರು.ಲಕ್ಷಾಂತರ ಜನ ಸೋಮವಾರದ ಉಪವಾಸವನ್ನು ಆರಂಭಿಸಿದರು.ಸ್ವತಃ ಶಾಸ್ತ್ರೀಜಿಯವರೂ ಸೋಮವಾರದಂದು ಉಪವಾಸವೃತವನ್ನು ಕೈಗೊಂಡರು.

ಶಾಸ್ತ್ರೀಜಿಯವರ ಪತ್ನಿ,ಲಲಿತಾದೇವಿಯವರು ಅನಾರೋಗ್ಯಪೀಡಿತರಾಗಿದ್ದರು.ಮನೆಗೆಲಸಕ್ಕೆಂದು ಕೆಲಸದವಳೊಬ್ಬಳು ಬರುತ್ತಿದ್ದಳು.ಶಾಸ್ತ್ರೀಜಿಯವರು ಮಹಿಳೆಗೆ ನಾಳೆಯಿಂದ ಕೆಲಸಕ್ಕೆ ಬರಬೇಡ ಎಂದರು.ಆಕೆ”ಅಲ್ಲ,ನಿಮ್ಮ ಬಟ್ಟೆಯನ್ನು ತೊಳೆಯುವುದು,ಮನೆಯನ್ನು ಸ್ವಚ್ಛಗೊಳಿಸುವುದು,ನಿಮ್ಮ ಪತ್ನಿಯ ಆರೈಕೆಯನ್ನು ಯಾರು ಮಾಡಿಕೊಡುತ್ತಾರೆ ಸ್ವಾಮೀ”ಎಂದು ಕೇಳಿದಳು.

“ದೇಶಕ್ಕಾಗಿ ಇದು ಅನಿವಾರ್ಯವಮ್ಮಾ.ನಿನಗೆ ಕೊಡುವ ಸಂಬಳದ ಹಣವಾದರೂ ಉಳಿದೀತು.ದೇಶದ ಒಳಿತಿಗಾದೀತು” ಎಂದು ಹೇಳಿದರು.ನಂತರ ಮನೆಯ ಪ್ರತಿಯೊಂದು ಕೆಲಸವನ್ನೂ ಶಾಸ್ತ್ರೀಜಿಯವರೇ ನಿಭಾಯಿಸುತ್ತಿದ್ದರು.

ಶಾಸ್ತ್ರೀಜಿಯವರ ಮಕ್ಕಳಿಗೆ ಇಂಗ್ಲೀಷ್ ಹೇಳಿಕೊಡಲೆಂದು ಟ್ಯೂಟರ್ ಬರುತ್ತಿದ್ದರು.ಅವರನ್ನೂ ಕೆಲಸದಿಂದ ವಿಮುಕ್ತಗೊಳಿಸಿದರು.”ಮಕ್ಕಳು ಇಂಗ್ಲೀಷಿನಲ್ಲಿ ಫೇಲಾಗುತ್ತಾರೆ”ಟ್ಯೂಟರ್ ಹೇಳಿದ್ದಕ್ಕೆ ಶಾಸ್ತ್ರೀಜಿ,”ಆಗಲಿ ಬಿಡಿ ಇಂಗ್ಲೀಷ್ ನಮ್ಮ ಭಾಷೆಯಲ್ಲ.ಇಂಗ್ಲಿಷರು ಹಿಂದಿಯನ್ನು ಬರೆದರೆ ಅವರೂ ಫೇಲಾಗುತ್ತಾರೆ”ಎಂದರು.

ಒಂದು ದಿನ ಶಾಸ್ತ್ರೀಜಿಯವರ ಪತ್ನಿ,ಹರಿದುಹೋಗಿರುವ ಅವರ ಧೋತಿಯನ್ನು ನೋಡಿ “ಒಂದು ಹೊಸ ಧೋತಿಯನ್ನಾದರೂ ತೆಗೆದುಕೊಳ್ಳಬಾರದೇ?”ಎಂದು ಕೇಳುತ್ತಾರೆ.”ಅದನ್ನು ಕೊಳ್ಳಲು ಹಣವೆಲ್ಲಿದೆ..?ಬರುವ ಸಂಬಳವನ್ನೂ ಬಿಟ್ಟಾಗಿದೆ.ಮನೆಯ ಖರ್ಚುಗಳನ್ನು ಕಡಿಮೆ ಮಾಡು” ಎಂದಿದ್ದರು.
( http://fightforright.co )
ಅಕ್ಟೋಬರ್ ಎರಡು ಬರುತ್ತಿದೆ.ಶಾಸ್ತ್ರೀಜಿಯವರ ಜನ್ಮದಿನ.ನಿರ್ಲಕ್ಷ್ಯಕ್ಕೊಳಗಾಗಿರುವ ಸರಳ,ಸಜ್ಜನ ಮಹಾಪುರುಷನನ್ನು ನಾವಂದು ಸ್ಮರಿಸಬೇಕಿದೆ..

ಲೇಖಕರು:
ಪ್ರದೀಪ ಹೆಗಡೆ

Monday 21 September 2015

Chakravarti sulibele

ಒಂದೆರಡು ವರ್ಷಗಳ ಹಿಂದೆ ದೆಹಲಿಯಲ್ಲಿ ಸಿಕ್ಕ ಸಾಧುವೊಬ್ಬರು ‘ವಂದೇ ಮಾತರಂ’ನ್ನು ಮಂತ್ರವೆಂದು ಕರೆದು ಬಲು ಹೊತ್ತು ವಾರ್ತಾಲಾಪ ನಡೆಸಿದ್ದರು. ಮೊದಮೊದಲಿಗೆ ಶ್ರದ್ಧೆಯಿಂದಾಗಿ ಹಾಗೆ ಹೇಳುತ್ತಿದ್ದಾರೆಂದು ಭಾವಿಸಿದರೂ ಅವರು ಕೊಟ್ಟ ಕಾರಣ ಮಾತ್ರ ಅಪರೂಪದ್ದಾಗಿತ್ತು.

ಕೋ ಪ ಬಂದಾಗ ಏನು ಮಾಡಬೇಕು? ಈ ಪ್ರಶ್ನೆಗೆ ಒಂದು ಸಿದ್ಧ ಉತ್ತರವಿದೆ. ಹತ್ತರಿಂದ ಒಂದರವರೆಗೆ ಉಲ್ಟಾ ಲೆಕ್ಕ ಹಾಕಬೇಕು. ನಿಮ್ಮಲ್ಲಿ ಅನೇಕರು ಇದನ್ನು ಪ್ರಯೋಗಿಸಿ ಲಾಭ ಪಡಕೊಂಡಿರಬೇಕಲ್ಲವೆ? ಕೋಪ ಬಂದಾಕ್ಷಣ ಲೆಕ್ಕ ಹಾಕಬೇಕೆನ್ನುವ ಉಪಾಯವನ್ನು ಮರೆತು ಬಿಡಬಾರದಷ್ಟೇ. ಆಧುನಿಕ ಯುಗದ ಎಲ್ಲ ವ್ಯಕ್ತಿತ್ವ ವಿಕಸನ ತರಬೇತುದಾರರೂ ಇದನ್ನು ತಪ್ಪದೇ ಹೇಳಿಕೊಡುತ್ತಾರೆ. ನಾವೂ ಸಾವಿರಾರು ರೂಪಾಯಿ ಹಣ ತೆತ್ತು ಪಾಠ ಕೇಳುತ್ತೇವೆ. ಆದರೆ ನಮ್ಮ ಅಜ್ಜಿ ವಿಷ್ಣು ಸಹಸ್ರನಾಮ ಮತ್ತು ಲಲಿತಾ ಸಹಸ್ರನಾಮಗಳ ಮೂಲಕ ಇದೇ ಲಾಭ ಪಡೆಯುವ ಮಾತನಾಡಿದರೆ ಮೂಢನಂಬಿಕೆ ಎನ್ನುತ್ತೇವೆ; ವಿಪರ್ಯಾಸ!ನಮ್ಮ ಮನಸ್ಸಿನ ಭಾವನೆಗಳಿಗೆ ತಕ್ಕಂತೆ ಮಿದುಳು ಅಂಗಗಳಿಗೆ ಸಂದೇಶ ಕೊಡುತ್ತದೆ. ಅದಕ್ಕೆ ತಕ್ಕಂತೆ ಹಾರ್ಮೋನುಗಳು ಸ್ರವಿಸಲ್ಪಡುತ್ತವೆ. ಈ ಹಾರ್ಮೋನುಗಳ ಒಸರುವಿಕೆಗೆ ಪೂರಕವಾದ ಕ್ರಿಯೆ ನಡೆಯದಿದ್ದರೆ ಅವೇ ದೇಹಕ್ಕೆ ಹೊರೆಯಾಗಿ ಬಿಡುತ್ತವೆ.

ಪಟ್ಟಣಿಗರಿಗೆ ಮಾನಸಿಕ ಖಿನ್ನತೆ ಉಂಟಾಗುವ ಮುಖ್ಯಕಾರಣವೇ ಇದು. ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದವ ಕೋಪದಿಂದ ಕುದ್ದು ಹೋಗುತ್ತಿರುತ್ತಾನೆ. ಅದಕ್ಕೆ ಪೂರಕವಾದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಆದರೆ, ಅದು ಹೊಡೆದಾಟ-ಬಡಿದಾಟವಾಗಿಯೋ ಕೊನೆಯ ಪಕ್ಷ ಬೈಗುಳವಾಗಿಯೋ ಪರಿವರ್ತಿತವಾಗಿ ಬಿಟ್ಟರೆ ಹಾರ್ಮೋನುಗಳಲ್ಲಿ ರಾಸಾಯನಿಕಗಳು ತಮ್ಮ ಕೆಲಸ ಮುಗಿಸಿ ಲುಪ್ತವಾಗುತ್ತವೆ. ಅದ್ಯಾವುದೂ ಆಗದಿದ್ದಾಗ ಈ ರಾಸಾಯನಿಕಗಳು ಒಳಗೊಳಗೇ ಕ್ರಿಯೆ ನಡೆಸಲಾರಂಭಿಸುತ್ತವೆ. ನಿರಂತರವಾದ ಈ ಕ್ರಿಯೆಯಿಂದ ಮಿದುಳು ಘಾಸಿಗೊಂಡು ಖಿನ್ನತೆಆವರಿಸಿಬಿಡುತ್ತದೆ. ಆಮೇಲಿನದ್ದು ಗೋಳಿನ ಬದುಕೇ!ಈಗ ಹಳಬರು ಮಾಡುತ್ತಿದ್ದುದನ್ನು ಅನುಕರಿಸಿ ನೋಡಿ. ಗುರುವಿತ್ತ ಮಂತ್ರವನ್ನೋ, ಗಾಯತ್ರಿ-ಅಷ್ಟಾಕ್ಷರಿ-ಪಂಚಾಕ್ಷರಿಗಳನ್ನೋ ಅಥವಾ ಸ್ತೋತ್ರಗಳನ್ನೋ ಹೇಳಿಕೊಳ್ಳಲು ಶುರುಮಾಡಿ.

ಮಾನಸಿಕವಾಗಿ ನಡೆಯುವ ಈ ಕ್ರಿಯೆ ಹಾರ್ಮೋನುಗಳು ಸ್ರವಿಸಿದ್ದ ರಾಸಾಯನಿಕಗಳನ್ನು ಬಳಸಿಕೊಳ್ಳುತ್ತದೆ ಅಥವಾ ಮನಸ್ಸನ್ನು ಯಾವ ಹಂತಕ್ಕೊಯ್ಯುವುದೆಂದರೆ ಅನವಶ್ಯಕವಾಗಿ ದೇಹದೊಳಗೆ ರಾಸಾಯನಿಕಗಳು ಏರುಪೇರಾಗುವುದನ್ನು ತಡೆಯುತ್ತವೆ. ಇದನ್ನು ಈಚಿನ ನರವಿಜ್ಞಾನ ತಜ್ಞರೂ ಒಪ್ಪುತ್ತಾರೆ.ಮಂತ್ರಗಳನ್ನು ಹೇಳಿಕೊಳ್ಳುವುದರಿಂದ ರಾಸಾಯನಿಕಗಳು ಸ್ರವಿಸದಂತೆ ತಡೆಯುವುದು ಸಾಧ್ಯವಾದರೆ; ಸೂಕ್ತ ಮಂತ್ರಗಳ ಉಚ್ಚಾರದಿಂದ ಬೇಕಾದ ಹಾರ್ಮೋನುಗಳು ಒಸರುವಂತೆ ಮಾಡುವುದು ಕಷ್ಟವೇನು? ಖಂಡಿತ ಅಸಾಧ್ಯವಲ್ಲ! ಅದರಿಂದಾಗಿಯೇ ಕೆಲವು ಮಂತ್ರ ಸ್ತೋತ್ರಗಳ ಪಠಣದಿಂದ ದೇಹದಲ್ಲಿ ಬೆಂಕಿ ಹಚ್ಚಿದ ಅನುಭವವಾದರೆ, ಇನ್ನೂ ಕೆಲವೊಮ್ಮೆ ತಂಪಾಗಿ ಗಂಧ ಹಚ್ಚಿದ ಅನುಭೂತಿಯಾಗುತ್ತದೆ. ನಾವೂ ನಮಗೆ ಅರಿವಿಲ್ಲದಂತೆ ಕೆಲವೊಂದು ಮಂತ್ರಗಳ ಸೆಳೆತಕ್ಕೆ ಒಳಗಾಗಿಬಿಡುತ್ತೇವೆ.

ಪ್ರತಿನಿತ್ಯ ನಾಲ್ಕಾರು ಸ್ತೋತ್ರಗಳನ್ನು ಕೇಳುವ ಅಭ್ಯಾಸ ರೂಢಿ ಮಾಡಿಕೊಳ್ಳಿ. ಇವುಗಳಲ್ಲಿ ಯಾವುದೋ ಒಂದು ನಿಮ್ಮನ್ನು ಬಲುವಾಗಿ ಸೆಳೆಯುತ್ತದೆ. ಎಲ್ಲಿಯವರೆಗೆ ಅಂದರೆ ಅದನ್ನು ಕೇಳುತ್ತ ಹೋದಂತೆ ದೇಹದ ಅಂಗಾಂಗಗಳು ಅದಕ್ಕೆ ಸೂಕ್ತವಾಗಿ ಪ್ರತಿಸ್ಪಂದಿಸುವುದನ್ನು ಅನುಭವಿಸುತ್ತೀರಿ! ದೇಹ ತನಗೆ ಬೇಕಾದ್ದನ್ನು ಆಯ್ದುಕೊಳ್ಳುವ ಅತ್ಯದ್ಭುತ ವ್ಯವಸ್ಥೆ ರೂಪಿಸಿಕೊಂಡಿದೆ. ಆಯ್ಕೆಯನ್ನು ಮುಂದಿಡಬೇಕಾದ್ದು ನಮ್ಮ ಕರ್ತವ್ಯ ಅಷ್ಟೇ.ಮಂತ್ರಗಳ ಉಪಯೋಗ ಮತ್ತು ಲಾಭದ ಆಧಾರದ ಮೇಲೆ ಅದನ್ನು ಪರಾ, ಕಾಮ್ಯ ಮತ್ತು ಅಸವೆಂದು ಮೂರು ಭಾಗ ಮಾಡಬಹುದು. ಪರಾ ದೃಷ್ಟಿಯ ಮಂತ್ರಗಳು ಆಧ್ಯಾತ್ಮಿಕ ಔನ್ನತ್ಯವನ್ನು ತಂದುಕೊಡುತ್ತವೆ. ಇನ್ನು ಬಯಕೆಯನ್ನು ಹುದುಗಿಸಿಟ್ಟುಕೊಂಡು ಜಪಿಸಿದ ಮಂತ್ರಗಳು ಕಾಮ್ಯಮಂತ್ರಗಳೆನಿಸುತ್ತವೆ. ಹೆಸರೇ ಹೇಳುವಂತೆ ಶಸಗಳ ಹಿಂದೆ ಮಂತ್ರದ ಶಕ್ತಿ ಇದ್ದರೆ ಅದು ಅಸವಾಗುತ್ತದೆ!ಓಂಕಾರ ಮತ್ತು ಗಾಯತ್ರಿ ಮಂತ್ರಗಳು ಪರಾ ಮಂತ್ರಗಳೇ. ಅವುಗಳ ಜಪದಿಂದ ಮನಸ್ಸು ನಿಜಕ್ಕೂ ಶೂನ್ಯಗೊಂಡು ವಿಶ್ವಶಕ್ತಿಯೊಂದಿಗೆ ಏಕೀಭವಿಸಿ ಬಿಡುತ್ತದೆ. ಇನ್ನೂ ಕೆಲವು ಮಂತ್ರಗಳ ನಿರಂತರ ಜಪದಿಂದ ಕಾಮ್ಯ ಫಲಗಳು ಸಿದ್ಧಿಸುತ್ತವೆ.

ದಶರಥ ಪುತ್ರಕಾಮೇಷ್ಟಿ ನಡೆಸಿದ್ದು, ಪರ್ಜನ್ಯ ಜಪದಿಂದ ಮಳೆ ಪಡೆಯೋದು.. ಇವೆಲ್ಲ ಈ ಮಂತ್ರಗಳ ಸಹಾಯದಿಂದಲೇ. ಅನೇಕರಿಗೆ ಇದು ನಂಬಲು ಸಾಧ್ಯವಾಗದ ಗೊಡ್ಡು ಕಥೆ. ಇರಲಿ, ಋಷಿಗಳು ಹರಿಸಿದ ಪರಂಪರಾಗತ ಜ್ಞಾನದ ಕುರಿತಂತೆ ಅನುಮಾನ ಹಾಗೆಯೇ ಇರಲಿ. ನಾನೀಗ ನಮ್ಮ ನಡುವಿನ ಕೆಲವು ಸಂಗತಿಗಳನ್ನು ಹಂಚಿಕೊಳ್ಳುತ್ತೇನೆ. ಹಾಗೆ ಸುಮ್ಮನೆ ಅವಲೋಕಿಸಿ.ಕೆಲ ತಿಂಗಳ ಹಿಂದೆ ಗೂರ್ಖಾ ರೆಜಿಮೆಂಟಿನ ಕರ್ನಲ್ ಎಂ.ಎನ್.ರಾಯ್ ಭಯೋತ್ಪಾದಕರೊಂದಿಗೆ ಕಾದಾಡುವಾಗ ಹುತಾತ್ಮರಾದದ್ದು ನೆನಪಿದೆಯಾ? ಖಂಡಿತ ನಾನೂ ಮರೆತಿರುತ್ತಿದ್ದೆ. ಭಯೋತ್ಪಾದಕರ ದಾಳಿಗೆ ತುತ್ತಾಗಿ ತೀರಿಕೊಂಡವರನ್ನೆಲ್ಲ ನೆನಪಿಟ್ಟುಕೊಳ್ಳುವಷ್ಟು ಕೃತಜ್ಞರಾಗಿಲ್ಲ ನಾವಿನ್ನೂ. ಆದರೆ ಈ ಸಾವನ್ನು ನಮ್ಮ ಹೃದಯದಲ್ಲಿ ಹಸಿಯಾಗಿರುವಂತೆ ಮಾಡಿದ್ದು ಕರ್ನಲ್ ಸಾಹೇಬರ ಹನ್ನೊಂದರ ಮಗಳು ಅಲಕಾ ರಾಯ್. ಸಂಸ್ಕಾರಕ್ಕೆ ಸಿದ್ಧವಾಗಿದ್ದ ತಂದೆಯ ಶವದೆದುರಿಗೆ ಉಮ್ಮಳಿಸುತ್ತಿರುವ ದುಃಖವನ್ನು ತಡೆದು ಆ ಮಗು ಸೆಲ್ಯೂಟ್ ಹೊಡೆದು ‘ಹೋಕಿ ಹೊಯ್ನಾ’ ಎಂತು. ಅದರರ್ಥ ‘ಗೂರ್ಖಾ ಸೈನಿಕ ಹುಲಿ ಹೌದೋ ಅಲ್ಲವೋ?’ ಅಂತ. ನಾಲ್ಕಕ್ಷರದ ಆ ಘೋಷ ಆ ಮಗುವಿನ ಬಾಯಿಂದ ಹೊರಡುತ್ತಿದ್ದಂತೆ ಸುತ್ತಲಿದ್ದ ಸೈನಿಕರಲ್ಲಿ ಮಿಂಚಿನ ಸಂಚಾರವಾಯ್ತು. ‘ಹೋ ಹೋ’ ಎಂದು ಪ್ರತಿಕ್ರಿಯಿಸಿದರು. ಆಮೇಲೆ ಆವೇಶದ ಘೋಷಗಳು ಎಲ್ಲೆಡೆ ಮೊಳಗಲಾರಂಭಿಸಿದವು.ಹೇಗಿದೆ ಇದು? ಹನ್ನೊಂದರ ಬಾಲೆಗೆ ತಂದೆಯನ್ನು ಕಳೆದುಕೊಂಡ ದುಃಖವನ್ನು ತಾತ್ಕಾಲಿಕವಾಗಿಯಾದರೂ ಮರೆಯುವ ಶಕ್ತಿ ಕೊಟ್ಟಿದ್ದು ‘ನಾಲ್ಕಕ್ಷರ’. ಅಚ್ಚರಿಯಲ್ಲವೇನು? ಇದನ್ನೇ ಸೈನ್ಯ ‘ವಾರ್ ಕ್ರೈ’ ಅನ್ನುತ್ತೆ. ನೀವು ಬೇಕಿದ್ದರೆ ಅದನ್ನು ರಣೋದ್ಘೋಷ ಅಥವಾ ರಣಮಂತ್ರ ಅಂತ ಕರೀರಿ. ಅದು ಯುದ್ಧಭೂಮಿಯಲ್ಲಿ ಮಾಡಬೇಕಾದ ಕೆಲಸವನ್ನು ಮಾಡಿಯೇ ಮಾಡುತ್ತದೆ.

ಖಂಡಿತ ಹೌದು.‘ಜೈ ಬಜರಂಗ ಬಲಿ’ ಎಂದರಚುತ್ತ ಬಿಹಾರ ರೆಜಿಮೆಂಟಿನ ಸೈನಿಕರು ಮುಗಿಬಿದ್ದರೆಂದರೆ ಶತ್ರುಗಳ ಕತೆ ಮುಗಿದಂತೆಯೇ. ಸಿಖ್ಖರಿಗೆ ‘ಬೋಲೆ ಸೋನಿಹಾಲ್, ಸತ್ ಶ್ರೀಅಕಾಲ್’ ಅನ್ನೋದು ಯುದ್ಧದ ಮದವೇರಿಸುವ ಅಫೀಮಿನಂತೆ. ಮರಾಠಾ ರೆಜಿಮೆಂಟಿನ ಸೈನಿಕರಿಗೆ ಶಿವಾಜಿಯ ಜೈಕಾರವೇ ಯುದ್ಧೋನ್ಮಾದ ಹೆಚ್ಚಿಸಿದರೆ, ಲಡಾಖ್ ಸ್ಕೌಟ್ಸ್‌ನವರಿಗೆ ‘ಭಾರತ್ ಮಾತಾ ಕಿ ಜೈ’ ಕೇಳಿದರೆ ಸಾಕು ಯುದ್ಧ ಸನ್ನದ್ಧರಾಗುವ ರಾಸಾಯನಿಕಗಳು ದೇಹದೊಳಗೆ ಸ್ರವಿಸಲಾರಂಭಿಸುತ್ತವೆ!ನನಗೆ ಗೊತ್ತು, ಇದನ್ನು ಮಂತ್ರವೆಂದರೆ ಅನೇಕರು ಒಪ್ಪಲಾರರು. ಇದಕ್ಕೆ ಮಂತ್ರವೊಂದಕ್ಕೆ ಇರಬಹುದಾದ ಯಾವ ಸ್ವರೂಪಗಳೂ ಇಲ್ಲ. ಆದರೆ ಮಂತ್ರವೊಂದು ನಮ್ಮ ಮೇಲೆ ಮಾಡಬಹುದಾದ ದೀರ್ಘಕಾಲೀನ ಪರಿಣಾಮವನ್ನು ನಾವು ಇವುಗಳಿಂದ ಊಹಿಸಬಹುದು. ಈ ಉದ್ಘೋಷಗಳಿಗೆ ಉಚ್ಚರಿಸುವವ ಜೋಡಿಸುವ ಉತ್ಕಟ ಭಾವನೆಯೇ ಆತನನ್ನು ಕಲ್ಲುಬಂಡೆಯಾಗಿಸಿ ಬಿಡುತ್ತದೆ. ತನ್ನ ಪ್ರಾಣವನ್ನೂ ಪಣಕ್ಕಿಟ್ಟು ಕದನ ಭೂಮಿಯಲ್ಲಿ ಕಾದಾಡುವಂತೆ ಮಾಡಿಬಿಡುತ್ತದೆ.

ಹೀಗಿರುವಾಗ ಸಾವಿರಾರು ವರ್ಷಗಳ ಹಿಂದೆ ಋಷಿಗಳು ಕಂಡುಕೊಂಡ ಮಂತ್ರವೊಂದನ್ನು ಅಷ್ಟೇ ಶ್ರದ್ಧಾ ಭಾವನೆಯಿಂದ ಜಪಿಸಿದ್ದೇ ಆದಲ್ಲಿ ಅಪರೂಪದ ಸಿದ್ಧಿಗಳು ನಮ್ಮದೇಕಾಗಬಾರದು? ಇದೊಂದು ತರ್ಕಬದ್ಧ ಪ್ರಶ್ನೆ ಅಷ್ಟೇ. ಸೈನಿಕರ ಮಾತು ಬಿಡಿ. ‘ವಂದೇ ಮಾತರಂ’ ಎಂಬ ಎರಡೇ ಎರಡು ಪದಗಳನ್ನು ಮೈ ಚಳಿ ಬಿಟ್ಟು ಒಮ್ಮೆ ಉಚ್ಚಕಂಠದಿಂದ ಕೂಗಿ ನೋಡಿ. ಮೈಯ ರಕ್ತ ಬೆಚ್ಚಗಾಗಿ ಬಿಡುತ್ತದೆ. ಒಂದೆರಡು ವರ್ಷಗಳ ಹಿಂದೆ ದೆಹಲಿಯಲ್ಲಿ ಸಿಕ್ಕ ಸಾಧುವೊಬ್ಬರು ‘ವಂದೇ ಮಾತರಂ’ನ್ನು ಮಂತ್ರವೆಂದು ಕರೆದು ಬಲು ಹೊತ್ತು ವಾರ್ತಾಲಾಪ ನಡೆಸಿದ್ದರು. ಮೊದಮೊದಲಿಗೆ ಶ್ರದ್ಧೆಯಿಂದಾಗಿ ಹಾಗೆ ಹೇಳುತ್ತಿದ್ದಾರೆಂದು ಭಾವಿಸಿದರೂ ಅವರು ಕೊಟ್ಟ ಕಾರಣ ಮಾತ್ರ ಅಪರೂಪದ್ದಾಗಿತ್ತು.ಬಂಕಿಮಚಂದ್ರ ಚಟರ್ಜಿಯವರೇ ‘ವಂದೇ ಮಾತರಂ’ ಜನಕರೆಂಬುದರಲ್ಲಿ ಯಾರಿಗೂ ಅನುಮಾನವಿಲ್ಲ. ಆದರೆ ಬಂಕಿಮರು ಬ್ರಿಟಿಷರ ಕಚೇರಿಯಲ್ಲಿ ನೌಕರಿಯಲ್ಲಿದ್ದರೆಂಬುದು ಅನೇಕರಿಗೆ ಗೊತ್ತಿಲ್ಲ. ಈ ನೋವು ಅವರನ್ನು ಯಾವಾಗಲೂ ಬಾಧಿಸುತ್ತಿತ್ತು. ಒಳಗೆ ಉರಿಯುವ ದೇಶಭಕ್ತಿಯ ಬೆಂಕಿ, ಹೊರಗೆ ದಾಸ್ಯ ಕೂಪ. ಹಾಗೆ ನೋಡಿದರೆ ಸಾಕಷ್ಟು ತಪಸ್ಸು ನಡೆದಿತ್ತು. ಅದೊಮ್ಮೆ ಬಂಕಿಮರು ದಕ್ಷಿಣೇಶ್ವರದಲ್ಲಿ ಕಾಳಿಯ ಪೂಜೆ ಮಾಡಿಕೊಂಡಿದ್ದ ರಾಮಕೃಷ್ಣರನ್ನು ಭೇಟಿ ಮಾಡಿ ಕಾಲಿಗೆರಗಿದರಂತೆ. ಬಂಗಾಳಿಯಲ್ಲಿ ಬಂಕಿಮ ಚಂದ್ರನೆಂದರೆ ಬಾಗಿದ ಚಂದ್ರನೆಂಬ ಅರ್ಥ.

ವಿನೋದವಾಗಿ ರಾಮಕೃಷ್ಣರು ‘ಬಂಕಿಮ, ನೀನು ಯಾರಿಗೆ ಬಂಕಿಮ?’ ಎಂದರಂತೆ. ಕಾಲಿಗೆರಗಿ ಏಳುವ ವೇಳೆಗಾಗಲೇ ಬಂಕಿಮರ ಕಂಗಳಿಂದ ಅಶ್ರುಧಾರೆ ಹರಿಯಲಾರಂಭಿಸಿತು. ಅದೇ ಭಾವದಿಂದಲೇ ಅವರು ‘ಬ್ರಿಟಿಷರ ಬೂಟು ಕಾಲುಗಳಿಗೆ ಬಂಕಿಮ’ ಎಂದರು. ಆ ಕ್ಷಣಕ್ಕೆ ಭಾವಾವಸ್ಥೆಗೇರಿದ ರಾಮಕೃಷ್ಣರು ಬಂಕಿಮರ ಎದೆಮುಟ್ಟಿ ಹರಸಿ, ‘ನೀನುದೇಶಭಕ್ತ’ ಎಂದು ಮೂರ‍್ನಾಲ್ಕು ಬಾರಿ ಉಚ್ಚರಿಸಿದರು. ಅಷ್ಟರೊಳಗೆ ಬಂಕಿಮರ ಎದೆಗೆ ಹರಿಯಬೇಕಿದ್ದ ಶಕ್ತಿ ಮಂತ್ರರೂಪದಲ್ಲಿ ಹರಿದಾಗಿತ್ತು. ಅದೇ ‘ವಂದೇ ಮಾತರಂ’. ಹಾಗೆಂದು ಸಂತರು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಿದ್ದರೆ ನಾನಂತೂ ಮೈಯೆಲ್ಲಾ ಕಿವಿಯಾಗಿದ್ದೆ.‘ವಂದೇ ಮಾತರಂ’ ಮಂತ್ರ ಹೇಗಾಗಲು ಸಾಧ್ಯ? ನನ್ನ ಕಂಗಳ ಪ್ರಶ್ನೆ ಅರಿತ ಅವರು ಅದನ್ನು ‘ವಂದೇ ಮಾ ತಾರಾಂ’ ಎಂದು ಬಿಡಿಸಿಟ್ಟು ತಾರಾ ಎಂದರೆ ಅಭಯ ಪ್ರದಾತೆ ಕಾಳಿ ಎಂದ ಮೇಲಂತೂ ಮೈಮೇಲೆ ಮುಳ್ಳುಗಳೆದ್ದಿದ್ದವು.

ನಾರದರಿಂದ ರತ್ನಾಕರ ‘ಮರಾ’ ಮಂತ್ರ ಪಡೆದು ‘ರಾಮಾ’ರಾಧಕನಾಗಿ ವಾಲ್ಮೀಕಿಯಾದನೆನ್ನುವ ಕಥೆ ಒಪ್ಪುವುದೇ ಆದರೆ ತಾರಾದೇವಿಯ ಆರಾಧನೆ ಭಾರತಮಾತೆಯ ಪೂಜೆಗೆ ಶ್ರೇಷ್ಠ ಮಂತ್ರವೇಕಾಗಿರಬಾರದು?ಬಂಕಿಮರು ಈ ಮಂತ್ರದ ಜಾಡು ಹಿಡಿದು ಅದನ್ನು ವಿಸ್ತಾರಗೊಳಿಸಿದರು. ಪಲ್ಲವಿ-ಚರಣಗಳು ರಚನೆಯಾದವು. ಭಾರತಮಾತೆ ಅವರ ಕಣ್ಣೆದುರಿಗೆ ದುರ್ಗೆಯಾಗಿ, ಶತ್ರುಮರ್ದಕಳಾಗಿ ಕಂಗೊಳಿಸಿದಳು. ಬಂಕಿಮರು ಗೀತೆಗೆ ನಿಲ್ಲಲಿಲ್ಲ. ಈ ಮಂತ್ರದೊಂದಿಗೆ ಬೆಳೆಯಬೇಕಿದ್ದ ಶ್ರದ್ಧೆಯ ಭಾಗವನ್ನು ಪೂರ್ಣಗೊಳಿಸಲು ‘ಆನಂದಮಠ’ವೆಂಬ ಕಾದಂಬರಿಯನ್ನೇ ರಚಿಸಿ ಸಮಾಜದೆದುರಿಗಿಟ್ಟರು. ಇಡೀ ಕಾದಂಬರಿಯ ಸಾರಸಂಗ್ರಹವೇ ಗೀತೆಯಾಗಿತ್ತು.

ಆ ಗೀತೆಯನ್ನು ಸಾಂದ್ರಗೊಳಿಸಿ ಹಿಡಿದಿಟ್ಟರೆ ಅದು ಎರಡೇ ಪದವಾಯ್ತು- ‘ವಂದೇ ಮಾತರಂ’. ಹಾಗಂತ ಎಲ್ಲವೂ ಅಂದುಕೊಂಡಂತೆ ಏಕಾಏಕಿ ನಡೆಯಲಿಲ್ಲ. ಒಂದು ಹಂತದಲ್ಲಂತೂ ಹತಾಶರಾದ ಬಂಕಿಮರು ಪತ್ರಿಕೆಯ ಸಂಪಾದಕರೊಬ್ಬರಿಗೆ ಪತ್ರ ಬರೆದು ’ಆನಂದಮಠ ಬರೆದು ನಾನೇನು ಮಾಡಿಯೇನು? ಈ ಈರ್ಷ್ಯಾ ಪರವಶರೂ, ಆತ್ಮೋದರಪರಾಯಣರೂ ಆದ ಜನಕ್ಕೆ ಉನ್ನತಿ ಇಲ್ಲ. ‘ವಂದೇ ಉದರಂ’ ಎನ್ನಿ’ ಎಂದು ಆಕ್ರೋಶ ತೋಡಿಕೊಂಡಿದ್ದರು. ತಮಗಾದ ಮಂತ್ರದರ್ಶನ ವ್ಯರ್ಥವೇ ಎಂಬ ಭಾವನೆ ಅವರನ್ನು ಕಾಡಿರಲು ಸಾಕು. ಆದರೆ ಋಷಿರೂಪಿ ಬಂಕಿಮರು ಮಗಳ ಬಳಿ ‘ಮುಂದಿನ ಎರಡು-ಮೂರು ದಶಕಗಳ ನಂತರ ಬಂಗಾಲವಿಡೀ ಈ ಮಂತ್ರದಿಂದ ಹುಚ್ಚೆದ್ದು ಹೋಗುತ್ತದೆ’ ಎಂದು ದೃಢನಿಶ್ಚಯದಿಂದಲೇ ಹೇಳಿದ್ದರು.ಅಂದುಕೊಂಡದ್ದಕ್ಕಿಂತ ಹೆಚ್ಚೇ ಆಯಿತು. ಬಂಗಾಳವಷ್ಟೇ ಅಲ್ಲ, ಇಡೀ ದೇಶ ವಂದೇ ಮಾತರಂ ಅನುರಣನದಿಂದ ಕಂಪಿಸಲಾರಂಭಿಸಿತು.

ದಾಸ್ಯವನ್ನು ಕಿತ್ತೆಸೆಯುವ ಕಲ್ಪನೆಯಿಂದ ಸೃಜಿಸಲ್ಪಟ್ಟ ಮಂತ್ರ ಜನರ ಕಂಠಗಳಿಂದ ಮಾರ್ದನಿಸಿತು, ರಣಘೋಷವಾಯಿತು. ಬಾಲಕರಿಂದ ಹಿಡಿದು ಮುದುಕರವರೆಗೆ ಬ್ರಿಟಿಷರ ಲಾಠಿ ಏಟುಗಳಿಗೆ ಜನ ಎದೆಕೊಟ್ಟರು. ಮಂತ್ರದ ಘೋಷಣೆಯಾಗುತ್ತಿದ್ದಂತೆ ಕಾಳಿಯ ಆವೇಶ ಮೈ ಹೊಕ್ಕುತ್ತಿತ್ತು. ಏಟು ತಿನ್ನುವುದು ಬಿಡಿ, ನೇಣಿಗೇರುವಾಗಲೂ ನಗುನಗುತ್ತಲೇ ಇರುವುದು ಸಾಧ್ಯವಾಗುತ್ತಿತ್ತು. ಹೌದಲ್ಲ. ಮಂತ್ರ; ಅದನ್ನು ಸೃಜಿಸಿದವನ ಕಠಿಣ ತಪಸ್ಸು ಮತ್ತು ಉಚ್ಚರಿಸುವವನ ಅಖಂಡ ಶ್ರದ್ಧೆ ಇವೆಲ್ಲ ಒಂದಾದರೆ ಅನೂಹ್ಯವಾದುದು ಘಟಿಸಿಬಿಡುತ್ತದೆ. ಬಂಕಿಮರ ಉದಾಹರಣೆಯೇ ಇಷ್ಟು ರೋಚಕವಾದುದೂ, ಫಲಿತಾಂಶ ಕೊಡುವಂತಹುದೂ ಆಗಿರುವಾಗ ಇನ್ನು ಪ್ರಾಚೀನ ಋಷಿಗಳ ಕಾಣ್ಕೆಯ ಮಂತ್ರಗಳ ಶಕ್ತಿ ಎಂಥದ್ದಿರಬೇಡ? ಒಮ್ಮೆ ಮನಸ್ಸೊಳಗೆ ಹೊಕ್ಕು ಶ್ರದ್ಧೆ ಎಷ್ಟಿದೆಯೆಂದು ಲೆಕ್ಕ ಹಾಕಿ ನೋಡಬೇಕಷ್ಟೇ.ಹಾಂ! ದೆಹಲಿಯ ಆ ಸಾಧು ವಂದೇ ಮಾತರಂ ಬಗ್ಗೆ ಮಾತನಾಡುತ್ತ ಒಂದು ಮಂತ್ರ ಸೃಷ್ಟಿಯಾಗಿ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿತು, ಮತ್ತೊಂದು ಪ್ರಾಚೀನ ಮಂತ್ರ ವಿರೂಪಗೊಂಡು ದೇಶ ತುಂಡಾಯ್ತು ಅಂದರು. ನನ್ನ ಕಿವಿ ನೆಟ್ಟಗಾಯ್ತು. ಅವರು ‘ರಘುಪತಿ ರಾಘವ ರಾಜಾರಾಮ್ ಪತಿತ ಪಾವನ ಸೀತಾರಾಮ್’ ಎಂದೊಡನೆ ಮುಂದಿನ ಸಾಲು ನೆನೆದು ಒಮ್ಮೆ ಬೆಚ್ಚಿ ಬೀಳುವಂತಾಯ್ತು.ಮಂತ್ರಗಳು ಮಾನವ ಸಂವೇದನೆಗಳ ಮೇಲೆ ಮಾಡುವ ಇಷ್ಟೆಲ್ಲ ಪ್ರಭಾವ ಅರಿತ ನಂತರವೂ ಸಾಧುಗಳ ಮಾತಿಗೆ ಎದುರಾಡುವ ಶಕ್ತಿ ನನಗಿರಲಿಲ್ಲ.

(ಲೇಖಕರು ಖ್ಯಾತ ವಾಗ್ಮಿ, ಚಿಂತಕರು)

Saturday 12 September 2015

Hindu Dharma

ಹಿಂದೂ ಪುರಾಣಗಳ ಪ್ರಕಾರ ಕಶ್ಯಪ ಋಷಿಗಳು ತನ್ನ
ಮಗನಿಗಾಗಿ ಸುಂದರವಾದ ಕಾಶ್ಮೀರವನ್ನು ನಿರ್ಮಿಸಿ
ಕೊಟ್ಟಿದ್ದರಂತೆ. ಕ್ಷತ್ರಿಯ ಗುಣವುಳ್ಳ ಮಗನಾದ ನೀಲ ತನಗೆ
ರಾಜ್ಯವೊಂದರ ರಾಜನಾಗುವ ಆಸೆ ಎಂದಾಗ ಅಪ್ಪನಿಗೆ
ಇಲ್ಲ ಎನ್ನಲಾಗುವುದಿಲ್ಲ. ಸ್ವರ್ಗಕ್ಕಿಂತಲೂ ಮಿಗಿಲಾದ
ಕಾಶ್ಮೀರವನ್ನು ಕಾಶ್ಯಪ ಋಷಿಗಳು ಮುದದಿಂದ ತನ್ನ
ಮುದ್ದಿನ ಮಗನಿಗೆ ನಿರ್ಮಿಸಿ ಕೊಟ್ಟು ಸನಾತನ ಹಿಂದೂ
ಧರ್ಮದ ಭರತ ಖಂಡಕ್ಕೆ ಹೊಸ ಹೊನ್ನ ಕಳಸ ಕಟ್ಟುತ್ತಾರೆ.
ಹೀಗೆ ಹಿಂದೂ ಧರ್ಮದ ತೊಟ್ಟಿಲಾಗಿ, ಧರ್ಮಕ್ಕೆ ಉತ್ಥಾನದ
ಮೆಟ್ಟಿಲಾಗಿ ವಿಶ್ವದ ಕಣ್ಮನ ಸೆಳೆಯುತ್ತದೆ ಕಾಶ್ಮೀರ.
ಆಸ್ತಿಕರಿಗೆ ಅಮರಾವತಿಯಾಗಿ, ಪ್ರಕೃತಿ ಪ್ರಿಯರಿಗೆ ರಮಣೀಯ
ತೋಟವಾಗಿ, ಪ್ರೇಮಿಗಳಿಗೆ ಪ್ರೇಮ ಕಾಶ್ಮೀರವಾಗಿ
ಕಂಗೊಳಿಸಿತ್ತು. ಕಳಿಂಗ ದೇಶದ ಕಾನಿಷ್ಕನ ಆಡಳಿತದಲ್ಲಿ ಭೌದ್ಧ
ಧರ್ಮದ ಶಾಂತಿಯ ತೋಟವಾಗಿತ್ತು. ಆದರೂ ಭಾರತದ
ಹೆಮ್ಮೆಯ ಮುಕುಟವಾಗಿತ್ತು .
೧೩೪೯ ಹದಿಮೂರನೇ ಶತಮಾನದ ಕಾಲಮಾನದಲ್ಲಿ ಸಹಮೀರ್
ಅನ್ನುವ ಮುಸಲ್ಮಾನ ದೊರೆಯೊಬ್ಬನ ಅತಿಕ್ರಮಣದಿಂದ
ತತ್ತರಿಸಿ ಹೋಗುತ್ತದೆ ಪುಣ್ಯ ಭೂಮಿ ಕಾಶ್ಮೀರ.
ಹಿಂದೂಗಳ ಪವಿತ್ರ ಭೂಮಿಯನ್ನು ಗೆದ್ದುಕೊಂಡಿದ್ದು
ಅಲ್ಲದೆ ಎಗ್ಗಿಲ್ಲದೆ ಹಿಂದುಗಳನ್ನು ಮುಸಲ್ಮಾನ ಧರ್ಮಕ್ಕೆ
ಮತಾಂತರಿಸುವುದಕ್ಕೆ ಸುರುವಿಟ್ಟುಕೊಳ್ಳುತ್ತಾನೆ. ಅರಬ್
ದೇಶಗಳಿಂದ ನೂರಾರು ಮುಕ್ರಿಗಳನ್ನು ತರಿಸಿ ಧರ್ಮ
ಪ್ರಚಾರದ ಅಪದಂಧೆಯನ್ನು ವಹಿಸಿಕೊಡುತ್ತಾನೆ.
ಮುನ್ನೂರಕ್ಕೂ ಅಧಿಕ ದೇವಸ್ಥಾನಕ್ಕೆ ಬೆಂಕಿ ಇಡುತ್ತಾನೆ.
ಅಮೂಲ್ಯವಾದ ಶಿಲ್ಪಕಲೆಗಳನ್ನು ಹಾಳುಗೆಡಿಸುತ್ತಾನೆ.
ಹಿಂದೂ ಹೆಣ್ಣು ಮಕ್ಕಳ ಬಲತ್ಕಾರವೇ ಇವನ
ಕಾಯಕವಾಗುತ್ತದೆ. ಅನೇಕ ಸಂಸ್ಕೃತದ ಪಾಠ ಶಾಲೆಗಳು ,
ವೇಧಾಧ್ಯನ ಕೇಂದ್ರಗಳು, ಹಿಂದೂಗಳ ಪವಿತ್ರ
ಪುರಾಣಗಳಿಗೆ ಬೆಂಕಿ ಇಡುತ್ತಾನೆ.
ಪ್ರಜೆಗಳಿಗೆ ಎರಡು ಆಯ್ಕೆಗಳನ್ನು ಇಡುತ್ತಾನೆ ಮುಸ್ಲಿಂ
ಧರ್ಮವನ್ನು ಸ್ವೀಕರಿಸುವುದು ಅಥವಾ ಸಾಯುವುದು.
ಅನೇಕ ಮಂದಿ ಹಿಂದೂಗಳು ಅರಬ್ ದೇಶಕ್ಕೆ
ಗುಲಾಮರನ್ನಾಗಿ ಮಾರಾಟ ಮಾಡುತ್ತಾನೆ. ಹಿಂದುಗಳಿಗೆ
ಗೋ ಮಾಂಸ ತಿನ್ನುವಂತೆ ಕಟ್ಟಾಜ್ಞೆಯನ್ನು
ಹೊರಡಿಸುತ್ತಾನೆ.
ರಾಜನ ಹಿಂಸೆ ತಡೆಯಲಾರದೆ ಅತ್ತ ಊರು ಬಿಡಲಾರದೆ
ಅದೆಷ್ಟೋ ಕುಟುಂಬಗಳು ಮುಸ್ಲಿಂ ಧರ್ಮವನ್ನು
ಸ್ವೀಕರಿಸುತ್ತವೆ. ಅದೆಷ್ಟೋ ಕುಟುಂಬಗಳು ಊರು
ಬಿಡುತ್ತವೆ. ಹೀಗೆ ಹಿಂದೂಗಳ ಪುಣ್ಯ ಭೂಮಿಯಾಗಿದ್ದ
ಕಾಶ್ಮೀರದಲ್ಲಿ ಹಿಂದೂ ಧರ್ಮ ಅಳಿದು ಹೋಗಿ ಮುಸ್ಲಿಂ
ಬಾಹುಳ್ಯ ಪಡೆದುಕೊಳ್ಳುತ್ತದೆ. ಶಾಂತಿಯ
ತೋಟವಾಗಿದ್ದ ಕಾಶ್ಮೀರ ಯಮನ ಶೈಮಿನಿಯಾಗುತ್ತದೆ
.ಧರೆಯನ್ನು ಧರಿಸುವುದೇ ಧರ್ಮ ಆದರೆ ಅಂತಹ ಧರೆಯನ್ನು
ಅಪಗೆಡಿಸಿದರೆ ಧರೆ ತನ್ನದೇ ಆದ ರೀತಿಯಲ್ಲಿ ಪಾಠ
ಕಲಿಸಿಕೊಡುತ್ತದೆ. ಪ್ರಕೃತಿ ಕಲಿಸಿಕೊಟ್ಟ ಪಾಠವನ್ನು ಮನನ
ಮಾಡಿಕೊಂಡರೆ ಬದುಕಿ ಉಳಿಯುತ್ತೇವೆ ಇಲ್ಲವಾದರೆ
ಅಂತಹ ಧರೆ ದೆಸಗೆಟ್ಟು ನಿರ್ನಾಮದ ಹಾದಿ ಹಿಡಿಯುತ್ತದ

Wednesday 2 September 2015

About Hindu Dharma

ಪ್ರಣವ ಮಂತ್ರವನ್ನು ಜಪಿಸುತ್ತಿದ್ದಾನೆ ಸೂರ್ಯ !

ಹಲವು ವರ್ಷಗಳ ನಿರಂತರ ಅಧ್ಯಯನದಿಂದ ವಿಜ್ಞಾನಿಗಳು ಶೋಧಿಸಿದ ವೈಜ್ಞಾನಿಕ ಸತ್ಯ..!!
ಜಗತ್ಪ್ರಸಿದ್ಧ ವೈಜ್ಞಾನಿಕ ಸಂಸ್ಥೆ NASA ಹಲವು ಸಂಶೋಧನೆಗಳ ನಂತರ

ಸೂರ್ಯನಿಂದ ಪ್ರತಿಕ್ಷಣವೂ ಹೊರಹೊಮ್ಮುವ ಧ್ವನಿಯನ್ನು ರೆಕಾರ್ಡ್ ಮಾಡಿತು. ಆ ಧ್ವನಿಯನ್ನು ಕೇಳಿದ ವಿಜ್ಞಾನಿಗಳಿಗೆ ಅಚ್ಚರಿ…!! ಆ ಧ್ವನಿ ಯಾವುದು ಅಂತೀರಾ..? ವೇದಗಳಲ್ಲಿ ಗುಣಗಾನ ಮಾಡಲಾಗಿರುವ , ಸನಾತನ ಧರ್ಮದ ಪವಿತ್ರ ಮಂತ್ರ, ಓಂಕಾರ…!!
ಇನ್ನೂ ಅಚ್ಚರಿಯೆಂದರೆ , ಸಾಮಾನ್ಯ ಮನುಷ್ಯ ೨೦ ಮೆಗಾ ಹರ್ಟ್ಸಿನಿಂದ ೨೦೦೦೦ ಮೆಗಾಹರ್ಟ್ಸ್ ಧ್ವನಿಯನ್ನಷ್ಟೇ ಕೇಳಬಲ್ಲ. ಅದಕ್ಕಿಂತ ಹೆಚ್ಚು ಅಥವಾ ಕಡಿಮೆ ಶಬ್ದವನ್ನು ಮನುಷ್ಯ ಗ್ರಹಿಸಲಾರ ಎಂದು ವಿಜ್ಞಾನ ತಿಳಿಸುತ್ತದೆ.ಆದರೆ ಸೂರ್ಯನಿಂದ ಬರುವ ಈ ಓಂಕಾರನಾದವನ್ನು ನಮ್ಮ ಋಷಿಮುನಿಗಳು ಅರಿತಿದ್ದಾದರೂ ಹೇಗೆ..?ವೇದಗಳಲ್ಲಿ ಕೊಂಡಾಡಿದ್ದು ಹೇಗೆ..? ಓಂಕಾರವನ್ನು ಮಹಾಮಂತ್ರವೆಂದು ಸ್ವೀಕರಿಸಿದ್ದು ಹೇಗೆ..? ಮುಂತಾದ ಪ್ರಶ್ನೆಗಳು ವಿಜ್ಞಾನಿಗಳನ್ನೂ ಕಾಡುತ್ತಿದೆ..!!

ನಮ್ಮ ಋಷಿಗಳ ಪ್ರಕಾರ , ಪರಮಾತ್ಮನನ್ನು ಸೇರಲು ಸುಲಭ ಸಾಧನವೆಂದರೆ ಓಂಕಾರ. ಓಂಕಾರವೇ ಪರಮಾತ್ಮನ ನಿಜವಾದ ಹೆಸರು.”ಓಮಿತ್ಯೇಕಾಕ್ಷರಂ ಬ್ರಹ್ಮ”. ಮಹರ್ಷಿ ಪತಂಜಲಿ ತಿಳಿಸುವಂತೇ “ತಸ್ಯ ವಾಚಕಃ ಪ್ರಣವಃ” .ಪ್ರಣವವೆಂದರೆ “ಓಂಕಾರ”

ಸೂರ್ಯನಿಂದ ಓಂಕಾರನಾದ ಬರಲು ಕಾರಣವಾದರೂ ಏನು..? ಇದಕ್ಕೆ ಉತ್ತರ ಗೀತೆಯಲ್ಲಿದೆ..
ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ ಹೇಳುತ್ತಾನೆ-

“ಅರ್ಜುನ , ನಿನಗಿಂದು ಯಾವ ವಿದ್ಯೆಯನ್ನು ನಾನು ಉಪದೇಶಿಸಿದೆನೋ ಈ ವಿದ್ಯೆಯನ್ನು ನಿನಗಿಂತಲೂ ಮೊದಲು ಸೂರ್ಯನಿಗೆ ಉಪದೇಶಿಸಿದ್ದೆ. ಅಂದಿನಿಂದ ಸೂರ್ಯ ನಿರಂತರವಾಗಿ ಓಂಕಾರವನ್ನು ಜಪಿಸುತ್ತ ಲೋಕವನ್ನು ಬೆಳಗುತ್ತಿದ್ದಾನೆ .ಕೇವಲ ಸೂರ್ಯನಷ್ಟೇ ಅಲ್ಲ. ಸಮಸ್ತ ಬ್ರಹ್ಮಾಂಡವೂ ಓಂಕಾರದಲ್ಲೇ ಅಧೀನವಾಗಿದೆ” ಅಂದರೆ ವಿಜ್ಞಾನಿಗಳು ಕಂಡುಹಿಡಿದ ಸತ್ಯ ಋಷಿ-ಮುನಿಗಳಿಗೆ , ಕೃಷ್ಣನಿಗೆ ತಿಳಿದಿತ್ತು..!!ಋಷಿಗಳು ಕೇವಲ ಕಿವಿಯಿಂದ ಕೇಳಲು ಸಾಧ್ಯವಿಲ್ಲವೆಂದಿದ್ದರು , ಧ್ಯಾನದಿಂದ ಸಾಧ್ಯವೆಂದಿದ್ದರು. ವಿಜ್ಞಾನಿಗಳು ಆಧುನಿಕ ಯಂತ್ರಗಳನ್ನು ಉಪಯೋಗಿಸಿ ಕಂಡುಹಿಡಿದಿದ್ದಾರಷ್ಟೇ…!!

ಯಾವಾಗ ನಾವು ಓಂ…ಎಂದು ಜೋರಾಗಿ ಉಚ್ಚರಿಸುತ್ತೇವೋ ಆಗ ನಮ್ಮ ಮನಸ್ಸಿನಲ್ಲಿರುವ ದುಗುಡ-ದುಮ್ಮಾನಗಳು ಖಾಲಿಯಾಗುತ್ತವೆ. ಓಂಕಾರದ ಜಪ ತೀವ್ರವಾಗುತ್ತಿದ್ದಂತೇ , ಬ್ರಹ್ಮಾಂಡದಲ್ಲಿರುವ ಓಂಕಾರ ಹಾಗೂ ಸಾಧಕನ ಓಂಕಾರನಾದಗಳ ಸಮ್ಮಿಲನವಾಗುತ್ತದೆ. ಆ ಸಮಯದಲ್ಲಿ ಸಾಧಕನ ಮನಸ್ಸು ಧ್ಯಾನದಲ್ಲಿ ಕಳೆದುಹೋಗುತ್ತದೆ. ಈ ಅವಸ್ಥೆಯಲ್ಲಿ ಮನಸ್ಸು ಚೇತನದೊಂದಿಗೆ ಸೇರಿಕೊಳ್ಳುತ್ತದೆ.

ಈ ಲಿಂಕನ್ನು ತಪ್ಪದೇ ನೋಡಿ…
www.youtube.com/watch?v=TfoRAdDolqA
www.youtube.com/watch?v=XRTpFSQ-b3U