Saturday 12 September 2015

Hindu Dharma

ಹಿಂದೂ ಪುರಾಣಗಳ ಪ್ರಕಾರ ಕಶ್ಯಪ ಋಷಿಗಳು ತನ್ನ
ಮಗನಿಗಾಗಿ ಸುಂದರವಾದ ಕಾಶ್ಮೀರವನ್ನು ನಿರ್ಮಿಸಿ
ಕೊಟ್ಟಿದ್ದರಂತೆ. ಕ್ಷತ್ರಿಯ ಗುಣವುಳ್ಳ ಮಗನಾದ ನೀಲ ತನಗೆ
ರಾಜ್ಯವೊಂದರ ರಾಜನಾಗುವ ಆಸೆ ಎಂದಾಗ ಅಪ್ಪನಿಗೆ
ಇಲ್ಲ ಎನ್ನಲಾಗುವುದಿಲ್ಲ. ಸ್ವರ್ಗಕ್ಕಿಂತಲೂ ಮಿಗಿಲಾದ
ಕಾಶ್ಮೀರವನ್ನು ಕಾಶ್ಯಪ ಋಷಿಗಳು ಮುದದಿಂದ ತನ್ನ
ಮುದ್ದಿನ ಮಗನಿಗೆ ನಿರ್ಮಿಸಿ ಕೊಟ್ಟು ಸನಾತನ ಹಿಂದೂ
ಧರ್ಮದ ಭರತ ಖಂಡಕ್ಕೆ ಹೊಸ ಹೊನ್ನ ಕಳಸ ಕಟ್ಟುತ್ತಾರೆ.
ಹೀಗೆ ಹಿಂದೂ ಧರ್ಮದ ತೊಟ್ಟಿಲಾಗಿ, ಧರ್ಮಕ್ಕೆ ಉತ್ಥಾನದ
ಮೆಟ್ಟಿಲಾಗಿ ವಿಶ್ವದ ಕಣ್ಮನ ಸೆಳೆಯುತ್ತದೆ ಕಾಶ್ಮೀರ.
ಆಸ್ತಿಕರಿಗೆ ಅಮರಾವತಿಯಾಗಿ, ಪ್ರಕೃತಿ ಪ್ರಿಯರಿಗೆ ರಮಣೀಯ
ತೋಟವಾಗಿ, ಪ್ರೇಮಿಗಳಿಗೆ ಪ್ರೇಮ ಕಾಶ್ಮೀರವಾಗಿ
ಕಂಗೊಳಿಸಿತ್ತು. ಕಳಿಂಗ ದೇಶದ ಕಾನಿಷ್ಕನ ಆಡಳಿತದಲ್ಲಿ ಭೌದ್ಧ
ಧರ್ಮದ ಶಾಂತಿಯ ತೋಟವಾಗಿತ್ತು. ಆದರೂ ಭಾರತದ
ಹೆಮ್ಮೆಯ ಮುಕುಟವಾಗಿತ್ತು .
೧೩೪೯ ಹದಿಮೂರನೇ ಶತಮಾನದ ಕಾಲಮಾನದಲ್ಲಿ ಸಹಮೀರ್
ಅನ್ನುವ ಮುಸಲ್ಮಾನ ದೊರೆಯೊಬ್ಬನ ಅತಿಕ್ರಮಣದಿಂದ
ತತ್ತರಿಸಿ ಹೋಗುತ್ತದೆ ಪುಣ್ಯ ಭೂಮಿ ಕಾಶ್ಮೀರ.
ಹಿಂದೂಗಳ ಪವಿತ್ರ ಭೂಮಿಯನ್ನು ಗೆದ್ದುಕೊಂಡಿದ್ದು
ಅಲ್ಲದೆ ಎಗ್ಗಿಲ್ಲದೆ ಹಿಂದುಗಳನ್ನು ಮುಸಲ್ಮಾನ ಧರ್ಮಕ್ಕೆ
ಮತಾಂತರಿಸುವುದಕ್ಕೆ ಸುರುವಿಟ್ಟುಕೊಳ್ಳುತ್ತಾನೆ. ಅರಬ್
ದೇಶಗಳಿಂದ ನೂರಾರು ಮುಕ್ರಿಗಳನ್ನು ತರಿಸಿ ಧರ್ಮ
ಪ್ರಚಾರದ ಅಪದಂಧೆಯನ್ನು ವಹಿಸಿಕೊಡುತ್ತಾನೆ.
ಮುನ್ನೂರಕ್ಕೂ ಅಧಿಕ ದೇವಸ್ಥಾನಕ್ಕೆ ಬೆಂಕಿ ಇಡುತ್ತಾನೆ.
ಅಮೂಲ್ಯವಾದ ಶಿಲ್ಪಕಲೆಗಳನ್ನು ಹಾಳುಗೆಡಿಸುತ್ತಾನೆ.
ಹಿಂದೂ ಹೆಣ್ಣು ಮಕ್ಕಳ ಬಲತ್ಕಾರವೇ ಇವನ
ಕಾಯಕವಾಗುತ್ತದೆ. ಅನೇಕ ಸಂಸ್ಕೃತದ ಪಾಠ ಶಾಲೆಗಳು ,
ವೇಧಾಧ್ಯನ ಕೇಂದ್ರಗಳು, ಹಿಂದೂಗಳ ಪವಿತ್ರ
ಪುರಾಣಗಳಿಗೆ ಬೆಂಕಿ ಇಡುತ್ತಾನೆ.
ಪ್ರಜೆಗಳಿಗೆ ಎರಡು ಆಯ್ಕೆಗಳನ್ನು ಇಡುತ್ತಾನೆ ಮುಸ್ಲಿಂ
ಧರ್ಮವನ್ನು ಸ್ವೀಕರಿಸುವುದು ಅಥವಾ ಸಾಯುವುದು.
ಅನೇಕ ಮಂದಿ ಹಿಂದೂಗಳು ಅರಬ್ ದೇಶಕ್ಕೆ
ಗುಲಾಮರನ್ನಾಗಿ ಮಾರಾಟ ಮಾಡುತ್ತಾನೆ. ಹಿಂದುಗಳಿಗೆ
ಗೋ ಮಾಂಸ ತಿನ್ನುವಂತೆ ಕಟ್ಟಾಜ್ಞೆಯನ್ನು
ಹೊರಡಿಸುತ್ತಾನೆ.
ರಾಜನ ಹಿಂಸೆ ತಡೆಯಲಾರದೆ ಅತ್ತ ಊರು ಬಿಡಲಾರದೆ
ಅದೆಷ್ಟೋ ಕುಟುಂಬಗಳು ಮುಸ್ಲಿಂ ಧರ್ಮವನ್ನು
ಸ್ವೀಕರಿಸುತ್ತವೆ. ಅದೆಷ್ಟೋ ಕುಟುಂಬಗಳು ಊರು
ಬಿಡುತ್ತವೆ. ಹೀಗೆ ಹಿಂದೂಗಳ ಪುಣ್ಯ ಭೂಮಿಯಾಗಿದ್ದ
ಕಾಶ್ಮೀರದಲ್ಲಿ ಹಿಂದೂ ಧರ್ಮ ಅಳಿದು ಹೋಗಿ ಮುಸ್ಲಿಂ
ಬಾಹುಳ್ಯ ಪಡೆದುಕೊಳ್ಳುತ್ತದೆ. ಶಾಂತಿಯ
ತೋಟವಾಗಿದ್ದ ಕಾಶ್ಮೀರ ಯಮನ ಶೈಮಿನಿಯಾಗುತ್ತದೆ
.ಧರೆಯನ್ನು ಧರಿಸುವುದೇ ಧರ್ಮ ಆದರೆ ಅಂತಹ ಧರೆಯನ್ನು
ಅಪಗೆಡಿಸಿದರೆ ಧರೆ ತನ್ನದೇ ಆದ ರೀತಿಯಲ್ಲಿ ಪಾಠ
ಕಲಿಸಿಕೊಡುತ್ತದೆ. ಪ್ರಕೃತಿ ಕಲಿಸಿಕೊಟ್ಟ ಪಾಠವನ್ನು ಮನನ
ಮಾಡಿಕೊಂಡರೆ ಬದುಕಿ ಉಳಿಯುತ್ತೇವೆ ಇಲ್ಲವಾದರೆ
ಅಂತಹ ಧರೆ ದೆಸಗೆಟ್ಟು ನಿರ್ನಾಮದ ಹಾದಿ ಹಿಡಿಯುತ್ತದ

No comments:

Post a Comment