Saturday 22 August 2015

Hindu dharma

ದೇವರು ಒಬ್ಬನೆ!

ದೇವರು ಒಬ್ಬನೆ ಎಂದು ಸನಾತನವೂ ಹೇಳಿದೆ. ಅನ್ಯ ಧರ್ಮಿಯರು ಹಿಂದುಗಳಿಗೆ ನೂರಾರು ದೇವರು ಎಂದು ತಮಾಷೆ ಮಾಡಿ ನಗುವುದನ್ನು ನೋಡಿದರೆ ನಮಗೂ ನಗು ಬರುತ್ತದೆ.

ದು.ಬು.ಗಳಿಗೂ ನಗುಬರುತ್ತದೆ.ನಾವು ನಗುವ ರಹಸ್ಯವೇ ಬೇರೆ.ದು.ಬು.ಜೀ( ದುರ್ಬುದ್ಧಿ ಜೀವಿಗಳು) ನಗುವ ವಿಚಾರವೇ ಬೇರೆ. ದು ಬು ಜೀ ಗಳು ಅನ್ಯಧರ್ಮಗಳವರು ಹೇಳಿದ್ದು ಸರಿಯಾಗಿದೆ, ಹಿಂದುಗಳಲ್ಲಿ ಮೂರ್ಖ ನಂಬಿಕೆಗಳಿವೆ ಎಂದು ನಗುತ್ತಾರೆ.ಆದರೆ ನಮ್ಮ ನಗು ಹಾಗಲ್ಲ. ‘ಎಲವೋ ಮೂರ್ಖ ಮಾನವರೇ.. ನೀವು ದೇವರನ್ನು ಕುರುಡರಾಗಿ ನಂಬುವ ಕಾರಣ ನಿಮಗೆ ಒಬ್ಬನಾಗಿಯೇ ಕಾಣುತ್ತಾನೆ.ನಾವು ಒಳಗಣ್ಣು ತೆರೆದು ನೋಡಿಯೇ ದೇವರ ಹಲವು ರೂಪಗಳನ್ನು ಕಾಣುತ್ತೇವೆ.ದೇವರ ಬಗ್ಗೆ ನಿಮಗೇನೂ ತಿಳಿಯದು ಅದಕ್ಕಾಗಿಯೇ ನಮಗೆ ನಗುಬರುತ್ತದೆ.’
ದೇವರೆಂದರೆ ಏನು ಎಂಬುದಕ್ಕೆ ಅವರಲ್ಲಿ ಸರಿಯಾದ ಉತ್ತರ ಸಿಗದು. ಉತ್ತರ ನಮ್ಮಲ್ಲಿದೆ. ಹಲವು ಚೈತನ್ಯಗಳ ಒಂದು ಸಂಘಟಿತ ರೂಪವೇ ವಿಶ್ವರೂಪದರ್ಶನ ಮಾಡಿಸಿದ ದೇವದೇವೋತ್ತಮ ಭಗವಂತ.ಅದನ್ನು ವಿಷ್ಣುವೆನ್ನಿ ಶಿವನೆಂದುಕೊಳ್ಳಿ, ಬ್ರಹ್ಮ ಎಂದು ಬೇಕಾದರೂ ಕರೆದುಕೊಳ್ಳಿ.ಅಥವಾ ಅಲ್ಲಾಹು, ಜೀಸಸ್ ಎಂದು ಬೇಕಾದರೂ ಕರೆಯಿರಿ. ಇದನ್ನು ಒಳಹೊಕ್ಕು ನೋಡಿದರೆ ಅಲ್ಲಿ(explore ಮಾಡಿದಾಗ) ಅಲ್ಲಿ ನಮಗೆ ಭಗವಂತನ ಅನೇಕ ಶಕ್ತಿ ಸ್ವರೂಪಗಳು ಕಾಣುತ್ತದೆ. ವಿಘ್ನವಿನಾಶಕ, ರೋಗ ನಿವಾರಕ,ವಿದ್ಯಾ ಪ್ರದಾಯಕ, ಮಂಗಲ ಕಾರಕ, ಬಾಧಾನಿವಾರಕ, ಶತ್ರು ಸಂಹಾರಕ, ಕೋಶ ರಕ್ಷಕಿಯಾದ ದುರ್ಗಾ ಮಾತೆ, ಭೂ ನಿಧಿ ರಕ್ಷಕ ನಾಗದೇವರು, ಮೃತ್ಯು ದೋಷ ನಿವಾರಕ ಮೃತ್ಯುಂಜಯ ಇತ್ಯಾದಿ ಸಹಸ್ರ ಸಹಸ್ರ. ಶಕ್ತಿಸ್ವರೂಪಗಳು ಕಾಣುತ್ತವೆ.ನಮಗೆ ಬೇಕಾದ ಶಕ್ತಿ ಚೈತನ್ಯಗಳನ್ನು ಉಪಾಸನೆ ಮಾಡುತ್ತೇವೆ. ಆದರೆ ಕೊನೆಗೆ ಎಲ್ಲಾ ಆರಾಧನೆಯನ್ನು ‘ ಪ್ರದ್ಯುಮ್ನಾನಿರುದ್ಧ ಸಂಕರ್ಷಣ ಮೂರ್ತಿಯಾದ ಭಗವಾನ್ ವಾಸುದೇವನಿಗೆ ಅರ್ಪಿಸುತ್ತೇವೆ.
ಹೇಗೆ ದೂರದಿಂದ ನೋಡಿದಾಗ ದೇಶದ ಪ್ರಧಾನ ಮಂತ್ರಿ ಮಾತ್ರ ಕಾಣುತ್ತಾನೋ ಹಾಗೆಯೇ ದೂರದಿಂದ ಒಬ್ಬನೇ ದೇವರು ಕಾಣುವುದು. ಪ್ರಧಾನ ಮಂತ್ರಿಯ ಒಳಹೊಕ್ಕು ನೋಡಿದರೆ ಗ್ರಾಮ ಪಂಚಾಯತಿಯವರೆಗೆ ಕಾಣುತ್ತದೆ. ಯಾವಾಗ ಹೊರಗಿನಿಂದ ಮಾತ್ರ ನೋಡಿ ಒಬ್ಬನೇ ದೇವರು ಎಂದು ಕಾಣುತ್ತಾರೋ ಅವರಿಗೆ ಮತಾಂಧತೆ ಬರುತ್ತದೆ.ಈಗ ಹಾಗೆಯೇ ಆಗಿದೆ.ಅದಕ್ಕಾಗಿ ಮತಾಂತರವೂ ಆಗುವುದು. ವ್ಯಕ್ತಿ ತನಗೆ ಬೇಕಾದ ಶಕ್ತಿಗೆ ಅಂತಹ ಶಕ್ತಿಸ್ವರೂಪ ಪಡೆಯಲು ದೇವ ಒಳಗಿನ ಆ ಚೈತನ್ಯಗಳನ್ನು ಉಪಾಸಿಸುತ್ತಾನೆಯೇ ಹೊರತು ಬೇಧಭಾವದಿಂದಲ್ಲ. ಆಗ ಹೊರಗಿನವರು ಅಂದರೆ ಅನ್ಯ ಧರ್ಮೀಯರು ಇದರೊಳಗೆ ಬೇಧಭಾವಗಳಿವೆ ಎಂದು ತಪ್ಪಾಗಿ ತಿಳಿದುಕೊಂಡರು.
ಸ್ವಾತ್ವಿಕವೂ ಬೇಕು, ರಾಜಸವೂ ಬೇಕು,ತಾಮಸವೂ ಬೇಕು.ಇದು ಮೂರು ಗುಣ ಚೈತನ್ಯಗಳು. ಸಾತ್ವಿಕವು ಪ್ರೀತಿ ಪ್ರೇಮಾದರಗಳಿಗೆ ಬೇಕು.ರಾಜಸವು ಒಂದು ವ್ಯವಸ್ಥೆಯನ್ನು ನಿಭಾಯಿಸಲು( ಆಡಳಿತ) ಬೇಕು.ತಾಮಸವು ಈ ಆಡಳಿತದಲ್ಲಿನ ದುಷ್ಪ್ರವೃತ್ತಿಯನ್ನು ನಿಯಂತ್ರಿಸಲು ಬೇಕು.ಒಟ್ಟಿನಲ್ಲಿ ಇದು ಚತುರೋಪಾಯಗಳಾದ ಸಾಮ, ದಾನ, ಬೇಧ, ದಂಡೋಪಾಯಗಳ ನಿರ್ವಹಣೆಗೆ ಬೇಕು.ಈ ಚತುರೋಪಾಯಗಳೊಳಗೆ ನೂರಾರು ಉಪ ಭಾಗಗಳಿವೆ.ಎಲ್ಲದಕ್ಕೂ ಅಭಿಮಾನಿ ದೇವತೆಗಳಿದ್ದಾರೆ.ಹಾಗಾಗಿ ಅನ್ಯ ಮತೀಯತಿಗೆ ನೂರಾರು ದೇವತಾ ಪೂಜಕರಾಗಿ ಹಿಂದುಗಳು ಕಾಣುವುದು.ಉದಾಹರಣೆಗೆ ಒಂದು ಪಡಿತರ ಚೀಟಿ ಬೇಕಾದರೆ ಪ್ರಧಾನ ಮಂತ್ರಿಯನ್ನೇ ಕೇಳುವುದಲ್ಲ.ಅದಕ್ಕೆ ಸಂಬಂಧಿಸಿದ ಗ್ರಾಮ ತಾಲೂಕ ಮಟ್ಟದ ಆಡಳಿತಗಳಿವೆ. ಅವರನ್ನೇ ಕೇಳಬೇಕು.ಇದಕ್ಕೆಲ್ಲ ಮೂಲ ಪ್ರಧಾನ ಮಂತ್ರಿ. ನಾವು ಬಿಂಬದೊಳಗೆ ದೇವರನ್ನು ಆವಾಹಿಸಿ ಪೂಜಿಸುವ ಸುಲಭೋಪಾಯ ಅರಿತವರು.ಅವರು ಬಿಂಬವಿಲ್ಲದೆ ಏಕೋಪಾಸನೆಗೆ ಹೊರಟವರು.ಆದರೆ ಅವರು ಇದರಲ್ಲಿ ಏಕಾಗ್ರತೆಯನ್ನು ಪಡೆಯಲಾಗದೆ ಸೋಲುತ್ತಾರೆ.ಯಾವಾಗಲೂ ನೆಮ್ಮದಿ ಸಿಗದಿದ್ದಾಗ ತಾಮಸ ಪ್ರವೃತ್ತಿಗೆ ಹೋಗುವುದು.ಇವರಿಗೆ ನೆಮ್ಮದಿ ಸಿಗುತ್ತಿಲ್ಲ.
ಈ ವಿಚಾರಗಳು ನಮ್ಮ ಜನರಲ್ಲಿ ಅನೇಕರಿಗೆ ಗೊತ್ತಿರುವುದಿಲ್ಲ.ಹಾಗಾಗಿ ದು.ಬು.ಜಿಯಾಗಿಯೋ, ಮತಾಂತರಗೊಂಡೋ ನೆಮ್ಮದಿಯ ಹುಡುಕಾಟ ಮಾಡುತ್ತಾರೆ. ಅದಕ್ಕಾಗಿ ನಮ್ಮಲ್ಲಿ ಜಾತ್ರೆ ಉತ್ಸವಾದಿಗಳು, ಹರಿಕತೆ ಪ್ರವಚನಾದಿಗಳು, ತುಳುನಾಡಿನ ಭೂತ ಕೋಲ,ನಾಗಾರಾಧನೆ ಇತ್ಯಾದಿಗಳು ಜನರಲ್ಲಿ ದೇವರ ಬಗೆಗಿನ ಜಾಗೃತಿಗಾಗಿ ಹುಟ್ಟಿಕೊಂಡವು.ಜತೆಗೆ ಮಾನಸಿಕ ನೆಮ್ಮದಿಯೂ ಲಭಿಸುತ್ತದೆ.ನೆಮ್ಮದಿ ಸಿಕ್ಕರೆ ಯಾರೂ ತಾಮಸಿಗಳಾ ಗುವುದಿಲ್ಲ.ದುಃಖಿತರೂ ಆಗುವುದಿಲ್ಲ. ಆದ್ದರಿಂದ ದೇವನೊಬ್ಬನೇ ಎಂದು ನಮಗಾರೂ ಹೇಳಬೇಕಾಗಿಲ್ಲ.ನಾವು ಅವರಿಗೆ ಚೈತನ್ಯ ಸ್ವರೂಪಗಳು ಸಾವಿರಾರು ಎಂದು ಹೇಳಿಕೊಡಬೇಕು.

ಪ್ರಕಾಶ್ ಅಮ್ಮಣ್ಣಾಯ.

Monday 17 August 2015

ನಾಗರ ಪಂಚಮಿ

ನಾಗರ ಪಂಚಮಿಯ ಮಾಹಿತಿ ಮತ್ತು ಮಹತ್ವ.

ನಾಗ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ ಮತ್ತು ಈ ಹಬ್ಬವು ಅಣ್ಣ -ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂದು ಪ್ರತೀತಿ ಇದೆ.

ನಾಗ ಪಂಚಮಿ ಕಥೆ 

ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬಳು ತಂಗಿ ಮತ್ತು ಅವಳಿಗೆ ನಾಲ್ಕು ಜನ ಅಣ್ಣಂದಿರು ಇದ್ದರು. ಮನೆಯವರೆಲ್ಲಾ ಸೇರಿ ಒಟ್ಟಿಗೆ ನಾಗರ ಪಂಚಮಿಯಂದು ಪೂಜಾ ಕಾರ್ಯಕ್ರಮದಲ್ಲಿ ತೊಡಗಿದ್ದರು. ಆ ಸಮಯದಲ್ಲಿ ಅಲ್ಲಿಗೆ ನಾಗರಹಾವೊಂದು ರಭಸದಿಂದ ಬಂದು ನಾಲ್ಕು ಜನ ಅಣ್ಣಂದಿರನ್ನು ಬಲಿ ತೆಗೆದುಕೊಂಡಿತು. ನಂತರ ಆ ತಂಗಿಯು ಅಣ್ಣಂದಿರನ್ನು ಕಳೆದುಕೊಂಡ ನೋವನ್ನು ತಡೆಯಲಾರದೆ ಆ ನಾಗರಹಾವಿಗೆ ಹೇಳಿದಳು, ನನ್ನ ನಾಲ್ಕು ಜನ ಅಣ್ಣಂದಿರಲ್ಲಿ ಒಬ್ಬರನ್ನಾದರೂ ಬದುಕಿಸಿಕೊಡು, ನಾನು ಯಾರನ್ನು ಅಣ್ಣ ಎಂದು ಕರೆಯಲಿ ಎಂದು ಕಣ್ಣೀರಿಟ್ಟಳು. ತದ ನಂತರ ಆ ನಾಗರ ಹಾವು ಆಕೆಯ ಮಾತಿಗೆ ಕಿವಿಗೊಟ್ಟು ಅಣ್ಣಂದಿರ ಬಳಿ ಬಂದು ಒಬ್ಬ ಅಣ್ಣನನ್ನು ಪ್ರಾಣಾಪಾಯದಿಂದ ಕಾಪಾಡಿತು. ನಂತರ ಅಣ್ಣ - ತಂಗಿ ಇಬ್ಬರು ಸೇರಿ ನಾಗರಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಪುರಾಣ

ಜನಮೇಜಯ ರಾಜ ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ಸರ್ಪವೊಂದು ಕಾರಣವೆಂದು ತಿಳಿದು, ಭೂಲೋಕದಲ್ಲಿ ಸರ್ಪಸಂಕುಲವನ್ನು ನಿರ್ನಾಮ ಮಾಡಲು 'ಸರ್ಪಯಜ್ಞ'ವನ್ನುಆರಂಭಿಸುತ್ತಾನೆ. ಆ ಸಂದರ್ಭದಲ್ಲಿ ಸರ್ಪಗಳ ದೂರದ ಬಂಧುವಾದ ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಕೊಂಡನು. ಜನಮೇಜಯ ರಾಜನು ‘ವರವನ್ನು ಕೇಳು’ ಎಂದು ಹೇಳಿದಾಗ, ಆಸ್ತಿಕನು ಪ್ರಾಣಿಹಿಂಸೆ ಮಹಾಪಾಪ, ನೀನು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂಬ ವರವನ್ನು ಕೇಳಿಕೊಂಡನು. ಜನಮೇಜಯನು ಆಸ್ತಿಕನ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸಿದ ದಿನ ಪಂಚಮಿಯಾಗಿತ್ತು.

ನಾಗ ಪಂಚಮಿಯ ವೈಶಿಷ್ಟ್ಯ 

ನಾಗರಪಂಚಮಿ - ಸಾತ್ತ್ವಿಕತೆ ಗ್ರಹಿಸಲು ಉಪಯುಕ್ತ ಕಾಲ. ಪಂಚಪ್ರಾಣಗಳೇ ಪಂಚನಾಗಗಳಾಗಿವೆ. ನಾಗರಪಂಚಮಿಯ ದಿನದಲ್ಲಿ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾಗಿದೆ. ಈ ದಿನದಂದು ಶೇಷನಾಗ ಮತ್ತು ಶ್ರೀವಿಷ್ಣುವಿಗೆ ಮುಂದಿನಂತೆ ಪ್ರಾರ್ಥನೆ ಮಾಡಬೇಕು - ‘ತಮ್ಮ ಕೃಪೆಯಿಂದ ಈ ದಿನದಂದು ಶಿವ ಲೋಕದಿಂದ ಪ್ರಕ್ಷೇಪಿತವಾಗುವ ಲಹರಿಗಳು ನನ್ನಿಂದ ಹೆಚ್ಚೆಚ್ಚು ಗ್ರಹಣವಾಗಲಿ. ನನ್ನ ಆಧ್ಯಾತ್ಮಿಕ ಪ್ರಗತಿಗೆ ಎದುರಾಗುವ ಎಲ್ಲ ಅಡಚಣೆಗಳೂ ನಾಶವಾಗಲಿ. ದೇವತೆಗಳ ಶಕ್ತಿಯು ನನ್ನ ಪಂಚಪ್ರಾಣಗಳಲ್ಲಿ ಸಂಗ್ರಹವಾಗಿ ಅದು ಈಶ್ವರ ಪ್ರಾಪ್ತಿಗಾಗಿ ಮತ್ತು ರಾಷ್ಟ್ರ ರಕ್ಷಣೆಗಾಗಿ ಉಪಯೋಗವಾಗಲಿ. ನನ್ನ ಪಂಚಪ್ರಾಣದ ಶುದ್ಧಿಯಾಗಲಿ.’
ನಾಗದೇವತೆಯು ಸಂಪೂರ್ಣ ಬ್ರಹ್ಮಾಂಡದ ಕುಂಡಲಿನಿಯಾಗಿದ್ದಾನೆ. ಪಂಚಪ್ರಾಣವೆಂದರೆ ಪಂಚಭೌತಿಕ ತತ್ತ್ವದಿಂದ ಉಂಟಾದ ಶರೀರದ ಸೂಕ್ಷ್ಮರೂಪವಾಗಿದೆ. ಸ್ಥೂಲ ದೇಹವು ಪ್ರಾಣಹೀನವಾಗಿದೆ ಮತ್ತು ಸ್ಥೂಲ ದೇಹದಲ್ಲಿ ಚಲಿಸುವ ಪ್ರಾಣವಾಯುವು ಪಂಚಪ್ರಾಣದಿಂದ ಬರುತ್ತದೆ.

ಉಪವಾಸದ ಮಹತ್ವ 

ನಾಗರಪಂಚಮಿಯಂದು ಮಾಡಿದ ಉಪವಾಸದ ಮಹತ್ವವೆಂದರೆ ೫ ಯುಗಗಳ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ದೇವಿಯಿದ್ದಳು. ಸತ್ಯೇಶ್ವರನು ಅವಳ ಸಹೋದರನಾಗಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತ್ಯು ಹೊಂದಿದನು. ಆಗ ಸಹೋದರನ ಮೃತ್ಯುವಿನ ಶೋಕದಲ್ಲಿ ಸತ್ಯೇಶ್ವರಿಯು ಆಹಾರವನ್ನು ಸ್ವೀಕರಿಸಲಿಲ್ಲ. ಆದುದರಿಂದ ಆ ದಿನ ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. ‘ಸಹೋದರನಿಗೆ ಅಖಂಡ ಆಯುಷ್ಯವು ದೊರಕಲಿ, ಅನೇಕ ಆಯುಧಗಳು ಪ್ರಾಪ್ತವಾಗಲಿ ಮತ್ತು ಅವನು ಪ್ರತಿಯೊಂದು ದುಃಖ ಮತ್ತು ಸಂಕಟ ಗಳಿಂದ ಪಾರಾಗಲಿ’ ಎನ್ನುವುದು ಸಹ ಈ ಉಪವಾಸದ ಹಿಂದಿನ ಕಾರಣವಾಗಿದೆ.
ನಾಗರಪಂಚಮಿಯ ಹಿಂದಿನ ದಿನ ಪ್ರತಿಯೊಬ್ಬ ಸಹೋದರಿಯು ದೇವರಲ್ಲಿ ಮೊರೆ ಇಡುವುದರಿಂದ ಅವಳ ಸಹೋದರನಿಗೆ ಲಾಭವಾಗುತ್ತದೆ ಮತ್ತು ಅವನ ರಕ್ಷಣೆಯಾಗುತ್ತದೆ. ಸತ್ಯೇಶ್ವರಿಗೆ ಅವಳ ಸಹೋದರನು ನಾಗರೂಪದಲ್ಲಿ ಕಂಡನು. ಆಗ ಅವಳು ಆ ನಾಗರೂಪವನ್ನು ತನ್ನ ಸಹೋದರನೆಂದು ಭಾವಿಸಿದಳು. ಆಗ ನಾಗದೇವನು, ನನ್ನನ್ನು ಸಹೋದರನೆಂದು ಭಾವಿಸಿ ಪೂಜೆ ಮಾಡಿದ ಸಹೋದರಿಯ ರಕ್ಷಣೆಯನ್ನು ನಾನು ಮಾಡುವೆನು ಎಂದು ಅವಳಿಗೆ ವಚನ ನೀಡಿದನು. ಆದುದರಿಂದಲೇ ಆ ದಿನ ಪ್ರತಿಯೊಬ್ಬ ಸ್ತ್ರೀಯು ನಾಗನ ಪೂಜೆ ಮಾಡಿ ನಾಗರಪಂಚಮಿಯನ್ನು ಆಚರಿಸುತ್ತಾಳೆ.

ನಾಗನ ಮಹಾತ್ಮೆ 

೧. ‘ಶೇಷನಾಗನು ಪಾತಾಳದಲ್ಲಿ ವಾಸಿಸುತ್ತಾನೆ. ಅವನು ತನ್ನ ಹೆಡೆಯ ಮೇಲೆ ಪೃಥ್ವಿಯನ್ನು ಧರಿಸಿದ್ದಾನೆ. ಅವನಿಗೆ ಸಹಸ್ರ ಹೆಡೆಗಳಿವೆ. ಪ್ರತಿಯೊಂದು ಹೆಡೆಯ ಮೇಲೆ ಒಂದು ಮಾಣಿಕ್ಯವಿದೆ. ಅವನು ಶ್ರೀವಿಷ್ಣುವಿನ ತಮೋಗುಣದಿಂದ ಉತ್ಪನ್ನವಾಗಿದ್ದಾನೆ. ಪ್ರತಿಯೊಂದು ಕಲ್ಪದ ಅಂತ್ಯದಲ್ಲಿ ಶ್ರೀವಿಷ್ಣು ಮಹಾಸಾಗರದಲ್ಲಿ ಶೇಷಾಸನದ ಮೇಲೆ ಪವಡಿಸಿರುತ್ತಾನೆ.
ತ್ರೇತಾಯುಗದಲ್ಲಿ ಶ್ರೀವಿಷ್ಣು ರಾಮನ ಅವತಾರವನ್ನು ಎತ್ತಿದಾಗ, ಶೇಷನು ಲಕ್ಷ್ಮಣನ ಅವತಾರವನ್ನು ಎತ್ತಿದ್ದನು. ದ್ವಾಪರ ಮತ್ತು ಕಲಿಯುಗದ ಸಂಧಿಕಾಲದಲ್ಲಿ ಕೃಷ್ಣನ ಅವತಾರವಾದಾಗ ಶೇಷನು ಬಲರಾಮನಾಗಿದ್ದನು.
೨. ‘ಶ್ರೀಕೃಷ್ಣನು ಯಮುನಾ ನದಿಯ ಆಳದಲ್ಲಿದ್ದ ಕಾಲಿಯಾ ನಾಗನನ್ನು ಮರ್ದನ ಮಾಡಿದನು. ಆ ದಿನವು ಶ್ರಾವಣ ಶುಕ್ಲ ಪಂಚಮಿಯಾಗಿತ್ತು.
೩. ‘ನಾಗಗಳಲ್ಲಿನ ಶ್ರೇಷ್ಠನಾದ ‘ಅನಂತ’ನೇ ನಾನು’, ಎಂದು ಗೀತೆಯಲ್ಲಿ (೧೦.೨೯) ಶ್ರೀಕೃಷ್ಣ ತನ್ನ ವಿಭೂತಿಯನ್ನು ಹೇಳುತ್ತಾನೆ.
"ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್| ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ, ಕಾಲಿಯಂ ತಥಾ"|| ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಭತ್ತು ಜಾತಿಯ ನಾಗಗಳ ಆರಾಧನೆಯನ್ನು ಮಾಡುತ್ತಾರೆ. ಇದರಿಂದ ಸರ್ಪಭಯ ಇರುವುದಿಲ್ಲ ಮತ್ತು ವಿಷದಿಂದ ತೊಂದರೆಯಾಗುವುದಿಲ್ಲ.’

ಪೂಜೆ ಸಂಪಾದಿಸಿ

ನಾಗರಪಂಚಮಿಯ ದಿನ ಅರಿಶಿನ ಅಥವಾ ರಕ್ತಚಂದನದಿಂದ ಮಣೆಯ ಮೇಲೆ ನವನಾಗಗಳ ಆಕೃತಿಗಳನ್ನು ಬಿಡಿಸಿ ಅವುಗಳ ಪೂಜೆಯನ್ನು ಮಾಡಿ ಹಾಲು ಮತ್ತು ಅರಳಿನ ನೈವೇದ್ಯವನ್ನು ಅರ್ಪಿಸಬೇಕು. ನವನಾಗಗಳು ಪವಿತ್ರಕಗಳ ಒಂಬತ್ತು ಪ್ರಮುಖ ಗುಂಪುಗಳಾಗಿವೆ. ಪವಿತ್ರಕಗಳೆಂದರೆ ಸೂಕ್ಷ್ಮಾತಿಸೂಕ್ಷ್ಮ ದೈವೀಕಣಗಳು (ಚೈತನ್ಯ ಕಣಗಳು).
ಭಾವಾರ್ಥ: ‘ಜಗತ್ತಿನಲ್ಲಿನ ಎಲ್ಲ ಜೀವಜಂತುಗಳು ಜಗತ್ತಿನ ಕಾರ್ಯಕ್ಕಾಗಿ ಪೂರಕವಾಗಿವೆ. ನಾಗರಪಂಚಮಿಯ ದಿನ ನಾಗಗಳ ಪೂಜೆಯಿಂದ ‘ಭಗವಂತನು ಅವುಗಳ ಮೂಲಕ ಕಾರ್ಯವನ್ನು ಮಾಡುತ್ತಿದ್ದಾನೆ’, ಎಂಬ ವಿಶಾಲ ದೃಷ್ಟಿಕೋನವನ್ನಿಡಲು ಕಲಿಯುವುದಿರುತ್ತದೆ.’ - ಪ.ಪೂ. ಪರಶುರಾಮ ಪಾಂಡೇ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.
ನಿಷೇಧ: ನಾಗರಪಂಚಮಿಯ ದಿನ ಏನನ್ನೂ ಹೆಚ್ಚಬಾರದು, ಕೊಯ್ಯಬಾರದು, ಕರಿಯಬಾರದು, ಒಲೆಯ ಮೇಲೆ ತವೆಯನ್ನು ಇಡಬಾರದು ಮುಂತಾದ ನಿಯಮಗಳನ್ನು ಪಾಲಿಸಬೇಕು. ಈ ದಿನ ಭೂಮಿಯನ್ನು ಅಗೆಯಬಾರದು.

Friday 14 August 2015

ವಂದೇ ಮಾತರಂ

ತುಂಬಾ ಜನರಿಗೆ ವಂದೇ ಮಾತರಂ ಅಂದರೆ ಏನು ಅಂತಾ ಅರ್ಥ ತಿಳಿದಿಲ್ಲ.
Just Read here

ವಂದೇ ಮಾತರಮ್
ಪಶ್ಚಿಮ ಬಂಗಾಳದ ಪ್ರಮುಖ ಲೇಖಕ ಮತ್ತು ಕವಿ ಬಂಕಿಮ ಚಂದ್ರ ಚಟರ್ಜಿರು ರಚಿಸಿದ ವಂದೇ ಮಾತರಂ ಬ್ರಿಟಿಷರ ಕಾಲದಲ್ಲಿ ರಾಷ್ಟ್ರದ ಜನತೆಗೆ ಸ್ವಾತಂತ್ರ್ಯದ ಜಾಗೃತಿಯನ್ನುಂಟು ಮಾಡಿದ ಕೃತಿ. ರಾಷ್ಟ್ರಗೀತೆಯಾಗುವ ಎಲ್ಲ ಅಂಶ,ಅರ್ಹತೆಗಳಿದ್ದರೂ, ರವೀಂದ್ರನಾಥ ಟಾಗೋರ್ ರ 'ಜನಗಣ ಮನ' ಕೃತಿಗೆ ಆ ಪಟ್ಟ ದೊರಕಿತು. ವಂದೇ ಮಾತರಂ ಎಂದರೆ, ತಾಯಿಯನ್ನು ನಮಸ್ಕರಿಸುತ್ತೇನೆ ಎಂದರ್ಥ. ಇದನ್ನು ರಾಷ್ಟ್ರೀಯ ಗಾನ ಎಂದು ಕರೆಯಲಾಗುತ್ತದೆ. ಇದು ಬಂಗಾಲಿಮತ್ತು ಸಂಸ್ಕೃತ ಭಾಷೆಗಳಲ್ಲಿದೆ. ಬಂಕಿಮರು ೧೮೮೨ರಲ್ಲಿ ಬರೆದ "ಆನಂದ ಮಠ" ಎಂಬ ಕೃತಿಯ ಭಾಗವಾಗಿದ್ದ ಈ ಗೀತೆ ಅತ್ಯಂತ ಜನಪ್ರಿಯತೆ ಗಳಿಸಿತು. ಇದನ್ನು ೧೮೯೬ರಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಅಧಿವೇಶನದಲ್ಲಿ ರವೀಂದ್ರನಾಥ ಟಾಗೋರ್ ಅವರು ಹಾಡಿದರು. ಭಾರತವು ಸ್ವತಂತ್ರವಾದ ನಂತರ ೧೯೫೦ರಲ್ಲಿ ಈ ಗೀತೆಯ ಮೊದಲ ಎರಡು ಪದ್ಯ ಭಾಗಗಳಿಗೆ ಭಾರತೀಯ ಗಣರಾಜ್ಯದ ರಾಷ್ಟ್ರೀಯ ಗಾನ ಎಂಬ ಅಧಿಕೃತ ಮನ್ನಣೆಯನ್ನು ನೀಡಲಾಯಿತು.

ಸಂಪೂರ್ಣ ಗೀತೆ.
ವಂದೇ ಮಾತರಂ!
ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ!
ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂ ಫುಲ್ಲ ಕುಸುಮಿತ ದ್ರುಮದಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ, ಸುಖದಾಂ ವರದಾಂ ಮಾತರಂ!

ಕೋಟಿ ಕೋಟಿ ಕಂಠ ಕಲಕಲ ನಿನಾದ ಕರಾಲೇ
ಕೋಟಿ ಕೋಟಿ ಭುಜೈರ್ದೃತಕರಕರಾವಲೇ ಕೇ ಬಲೇ ಮಾ ತುಮಿ ಅಬಲೇ
ಬಹುಬಲ ಧಾರಿಣೀಂ ನಮಾಮಿ ತಾರಿಣೀಂ ರಿಪುದಲ ವಾರಿಣೀಂ ಮಾತರಂ!

ತುಮಿ ವಿದ್ಯಾ ತುಮಿ ಧರ್ಮ ತುಮಿ ಹೃದೀ ತುಮಿ ಮರ್ಮ ತ್ವಂ ಹೀ ಪ್ರಾಣಹ ಶರೀರಾ ಬಹುತೇ
ತುಮೀ ಮಾ ಶಕ್ತಿ ಹೃದಯೇ, ತುಮೀ ಮಾ ಭಕ್ತಿ ತೊಮಾರಿ ಪ್ರತಿಮಾ ಗಡಿ ಮಂದಿರ ಮಂದಿರೇ

ತ್ವಂ ಹೀ ದುರ್ಗಾ ದಶ ಪ್ರಹಾರಣ ಧಾರಿಣೀ ಕಮಲಾ ಕಮಲಾದಳ ವಿಹಾರಿಣೀ
ವಾಣೀ ವಿದ್ಯಾ ದಾಯಿನೀ ನಮಾಮಿ ತ್ವಂ ನಮಾಮಿ ಕಮಲಂ ಅಮಲಂ ಅತುಲಂ
ಸುಜಲಾಂ ಸುಫಲಾಂ ಮಾತರಂ ವಂದೇ ಮಾತರಂ!

ಶ್ಯಾಮಲಂ ಸರಳಂ ಸುಶ್ಮಿತಂ ಭೂಷಿತಾಂ ಧರಣೀಂ ಭರಣೀಂ ಮಾತರಂ!

Happy Independence Day

ನನ್ನ ದೇಶ ಭಾರತ ಇನ್ನೂರು ವರ್ಷಗಳ ಕಾಲ ಬ್ರಿಟೀಷರ ಕೈಲಿತ್ತೇನೋ ನಿಜ.ಆದರೆ ಅವರು ಬಿಟ್ಟು ಹೋದ ಮೇಲೆ ನಮ್ಮ ಸ್ವಂತ ಬಲದಿಂದ ಇಂದು ಜಗತ್ತಿನ ಬಲಿಷ್ಠ ರಾಷ್ಟ್ರಗಳ ಜತೆ ವೇದಿಕೆ ಹಂಚಿಕೊಳ್ಳುತಿರುವ ಗತ್ತು ಇದೆಯಲ್ಲಾ ಆ ಕಾರಣಕ್ಕೇ 'ಮೇರೆ ಭಾರತ್ ಮಹಾನ್' ಅಂತಾ ಎದೆ ತಟ್ಟಿಕೊಂಡು ಹೇಳೋಣ.ಸ್ವಾತಂತ್ರ್ಯದ ನಂತರದ ದಿನಗಳಲ್ಲಿ ಮುತ್ಸದ್ಧಿ ಅಂಬೇಡ್ಕರ್ ವರ ದೂರದೃಷ್ಠಿಯಿಂದ ರಚಿತವಾದ ನಮ್ಮ ಸಂವಿಧಾನ,ವಯಕ್ತಿಕ ಏನೇ ಇರಲಿ ಸಂಸದೀಯ ವ್ಯವಸ್ಥೆಗೆ ಶಿಸ್ತಿನ ಸಂಯಮ ಮೆರೆದು ದೇಶಕ್ಕೆ ಪಂಚವಾರ್ಷಿಕ ಯೋಜನೆ ರೂಪಿಸಿದ ಪಂ.ನೆಹರು,ಪ್ರಧಾನಿಯಂತಹ ಪೀಠಾಧೀಶರಾದರೂ ಪಾರುಪತ್ಯ ತೋರದೆ "ಜೈ ಜವಾನ್ ಜೈ ಕಿಸಾನ್" ಘೋಷಿಸಿ ಕ್ಷಿರಕ್ರಾಂತಿಗೆ ಚಾಲನೆ ಕೊಟ್ಟ ಸರಳ ಜೀವಿ ಲಾಲ್ ಬಹದ್ದೂರ್ ಶಾಸ್ತ್ರಿ,ಹೆಣ್ಮಕಳೆಂದ್ರೆ ತೊಟ್ಟಿಲು ತೂಗಬೇಕು ಅಷ್ಟೇ ಅನ್ನೋ ಕಾಲದಲ್ಲಿ ಪ್ರಧಾನಿ ಪಟ್ಟದ ಗಟ್ಟಿತನ ತೋರಿ ದೇಶದ ಬ್ಯಾಂಕುಗಳನ್ನೆಲ್ಲಾ ರಾಷ್ಟ್ರೀಕರಣಗೊಳಿಸೀ,ಅಲ್ಲಿವರೆಗೆನ ಪಂಚವಾರ್ಷಿಕ ಯೋಜನೆಗಳೆಲ್ಲಾ ಕೃಷಿ ಕೈಗಾರಿಕೆ ನೀರಾವರಿಗೆ ಪ್ರಾಶಸ್ತ್ಯ ಕೊಡೊದನ್ನು ಸ್ವಲ್ಪ ತಡೆದು ಸಾಮಾಜಿಕ ಅಂಶಗಳಿಗೆ ಒತ್ತು ಕೊಟ್ಟು 'ಗರೀಬಿ ಹಟಾವೋ' ಎಂದ ಇಂದಿರಾ ಜಿ,ವಯಸ್ಸು ವೃದ್ಧಾಪ್ಯಕ್ಕೆ ಸಮೀಪವಿದ್ದರೂ ಆಡಳಿತ ನಡೆಸಿ ಆಡಳಿತ ಸುಧಾರಣೆಗಳಿಗೆ ಸ್ವಾಗತ ಕೋರಿದ ಮುರಾರ್ಜಿ ದೇಸಾಯಿ,
ರೈತನ ಮಗನಾಗಿಯೂ ಪ್ರಧಾನಿ ಯಾದ ಚರಣ್ ಸಿಂಗ್,ಹಠಾತ್ ಪ್ರಧಾನಿಯಾದರೂ ಮಾಹಿತಿ ತಂತ್ರಜ್ಞಾನಕ್ಕೆ ಮುನ್ನುಡಿ ಬರೆದ ರಾಜೀವ್ ಗಾಂಧೀ,ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲು ಮಂಡಲ ಆಯೋಗ ರಚಿಸಿದ ವಿ.ಪಿ.ಸಿಂಗ್,ರಾಜಕೀಯ ಜೀವನದಲ್ಲಿ ಒಮ್ಮಿಂದಲೇ ಪ್ರಧಾನಿಯಾದ ಚಂದ್ರಶೇಖರ್,ದೇಶದ ಅರ್ಥವ್ಯವಸ್ಥೆಯನ್ನು ಜಾಗತಿಕ ವಲಯಕ್ಕೆ ತೆರೆದಿಟ್ಟ ಪಿ.ವಿ.ನರಸಿಂಹರಾವ್,ಕನ್ನಡ ಮಣ್ಣಿನವರಾದರೂ ಭಾರತ ಮುನ್ನೆಡೆಸಿದ ದೇವೇಗೌಡ್ರು,ಸಭ್ಯಸ್ಥರಾಗಿ ಸಕ್ರಿಯವಾಗಿದ್ದ ಐ.ಕೆ.ಗುಜ್ರಾಲ್,ದೇಶದ ನಾಲ್ಕೂ ದಿಕ್ಕುಗಳನ್ನು ಸೇರಿಸಿ 'ಸುವರ್ಣ ಸಾಧನೆ'ಗೈದ ಅಟಲ್ ಜೀ,ಮಾತು ಮೌನವಾಗಿದ್ದರೂ ಅಮೇರಿಕಾದ ಅಣು ತಂದ ಮನ್ಮೋಹನ್ ಸಿಂಗ್,ಅಧಿಕಾರ ಹಿಡಿದು ಇನ್ನು ಅಂಬೆಗಾಲಿಡುತ್ತಿರುವಾಗಲೇ ಜಗತ್ತು ಬೆರಗಾಗುವಂತಹ ಸಾಧನೆ ಮಾಡುತ್ತಿರುವ ಮೋದಿ ಸೇರಿ ನಮ್ಮ ಎಲ್ಲಾ  ಪ್ರಧಾನಿಗಳು   ಕೇವಲ 68 ವರ್ಷಗಳಲ್ಲಿ ದೇಶವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.1980ರ ದಶಕದಲ್ಲಿ ಬಾಹ್ಯಾಕಾಶ ಶೋಧನೆಗೆ cray -x ಸೂಪರ್ ಕಂಪ್ಯೂಟರ್ ಕೊಡಿ ಅಂದಾಗ ಅಮೇರಿಕಾ 'ಭಾರತೀಯರಿಗೆ ಅದರ ಬಳಕೆಯೇ ಗೊತ್ತಾಗಲ್ಲ'ಅಂತಾ ನಿರಾಕರಿಸಿದ್ದನೇ ಚಾಲೆಂಜ್ ಆಗಿ ತೆಗೆದುಕೊಂಡ ನನ್ನ ದೇಶ "ಪರಮ್ 10000" ಅನ್ನೋ ಸೂಪರ್ ಕಂಪ್ಯೂಟರ್ ತಯಾರಿಸಿ ಅಮೇರಿಕಾ ಕಂಪ್ಯೂಟರ್ ಒಂದು ಉಪಗ್ರಹ ಉಡಾಯಿಲು 16 ನಿಮಿಷ ತೆಗೆದುಕೊಂಡರೆ ನಮ್ಮ ಪರಮ್ ಕೇವಲ 4 ನಿಮಿಷ ತೆಗೆದುಕೊಳ್ಳುತ್ತೆ.ಜಗತ್ತಿನ ದೇಶಗಳಲ್ಲಿ ಕೆಲವು ಕ್ರೌರ್ಯ ತುಂಬಿಕೊಂಡು ಬಾಹ್ಯಕಾಶವನ್ನೂ ಬಾಂಬ್ ವಲಯ ಮಾಡುವ ದುರಾಲೋಚನೆಯಲ್ಲಿದ್ರೆ ನನ್ನ ದೇಶದ ಉಡಾವಣೆಗಳು ಅಲ್ಲೂ ಶಾಂತಿ ಸ್ಥಾಪಿಸುವ ಉದ್ದೇಶವುಳ್ಳವು! ನನ್ನ ದೇಶವನ್ನು ಜಾತಿಯಾಧಾರವಾಗಿ ಹೊಡೆಯುವ ಮುನ್ನ,ಮತದ ಬೇಗುದಿಗೆ ನನ್ನ ಭಾರತ ಮಾತೆಯನ್ನು ನೂಕುವ ಮುನ್ನ,ಶಾಂತಿಯಿಂದ ಯೋಚಿಸಿ ನೋಡಿ ನನ್ನಮ್ಮ ಯಾವ ಜಾತಿಯ ಮಕ್ಕಳಿಗೂ ಮಲತಾಯಿ ಧೋರಣೆ ಮಾಡಿಲ್ಲ.ನಮ್ಮನ್ನು ಒಕ್ಕಲೆಬ್ಬಿಸುತ್ತಿರುವರು 'ಅರ್ಧನಾಲೇಜ್ ಶ್ವರರೇ'!
'ಆ ಮತ ಈ ಮತ ನೂಕಥ,
ನಮ್ಮದೊಂದೇ ಮನುಜ ಮತ ಎದೆ ತಟ್ಟಿ ಹೇಳು ನಾನು ಭಾರತೀಯ ಅಂತಾ...!
ನನ್ನ ದೇಶದ 68ನೇ ಹುಟ್ಟು ಹಬ್ಬದ ಶುಭಾಯಗಳು ತಮಗೆಲ್ಲಾ.
     - ಷಣ್ಮುಖ ಹೂಗಾರ್.

Wednesday 12 August 2015

Bayalu daari film song.

ಎಲ್ಲಿರುವೆ,ಮನವ ಕಾಡುವ ರೂಪಸಿಯೇ
ಬಯಕೆಯಾ,ಬಳ್ಳಿಯಾ,ನಗುವ ಹೂವಾದ ಪ್ರೇಯಸಿಯೇ
ಬಯಕೆಯಾ,ಬಳ್ಳಿಯಾ,ನಗುವ ಹೂವಾದ ಪ್ರೇಯಸಿ
ನೀನು,ಎಲ್ಲಿರುವೆ, ಮನವ ಕಾಡುವ ರೂಪಸಿಯೇ

ತೇಲುವ ಈ ಮೂಡದ ಮೇಲೆ, ನೀನಿಂತ ಹಾಗಿದೆ
ನಸುನಗುತ, ನಲಿನಲಿದು, ನನ್ನ ಕೂಗಿದಂತಿದೆ
ಸೇರುವ ಬಾ ಆಗಸದಲ್ಲಿ, ಎಂದು ಹೇಳಿದಂತಿದೆ
ತನುವೆಲ್ಲ,ಹಗುರಾಗಿ,ತೇಲಾಡುವಂತಿದೆ,ಹಾಡುವಂತಿದೆ

ಚೆಲುವೆ, ಎಲ್ಲಿರುವೆ ಮನವ ಕಾಡುವ ರೂಪಸಿಯೇ
ಬಯಕೆಯಾ,ಬಳ್ಳಿಯಾ ನಗುವ ಹೂವಾದ ಪ್ರೇಯಸಿಯೇ
ಬಯಕೆಯಾ,ಬಳ್ಳಿಯಾ ನಗುವ ಹೂವಾದ ಪ್ರೇಯಸಿ
ನೀನು,ಎಲ್ಲಿರುವೆ ಮನವ ಕಾಡುವ ರೂಪಸಿಯೇ

ಕಣ್ಣಲ್ಲೇ ಒಲವಿನ ಗೀತೆ,ನೀನು ಹಾಡಿದಂತಿದೆ
ನಿನ್ನಾಸೆ, ಅತಿಯಾಗಿ,ತೂರಾಡುವಂತಿದೆ
ಹಗಲಲ್ಲು ಚಂದ್ರನ ಕಾಣೋ, ಭಾಗ್ಯನನ್ನದಾಗಿದೆ
ಚಂದ್ರಿಕೆಯ, ಚೆಲುವಿಂದ, ಬಾಳು ಭವ್ಯವಾಗಿದೆ,ಭವ್ಯವಾಗಿದೆ

ನಲ್ಲೇ,ಎಲ್ಲಿರುವೆ, ಮನವ ಕಾಡುವ ರೂಪಸಿಯೇ
ಬಯಕೆಯಾ,ಬಳ್ಳಿಯಾ,ನಗುವ ಹೂವಾದ ಪ್ರೇಯಸಿಯೇ
ಬಯಕೆಯಾ,ಬಳ್ಳಿಯಾ,ನಗುವ ಹೂವಾದ ಪ್ರೇಯಸಿ
ನೀನು,ಎಲ್ಲಿರುವೆ ಮನವ ಕಾಡುವ ರೂಪಸಿಯೇ

Tuesday 11 August 2015

Jocks

ಒಮ್ಮೆ TVವರದಿಗಾರನೊಬ್ಬ ರೈತನ Live ಸಂದರ್ಶನ ಮಾಡುತ್ತಿದ್ದ.
ವರದಿಗಾರ: ನಿವು ಕುರಿಗೆ ಯೇನು ತಿನ್ನಿಸ್ತೀರಿ?
ರೈತ: ಬಿಳಿಕುರಿಗೋ? ಕರೆ ಕುರಿಗೋ?

ವರದಿಗಾರ: ಬಿಳಿ.
ರೈತ: ಹುಲ್ಲು....

ವರದಿಗಾರ: ಮತ್ತೆ ಕರೇದಕ್ಕೆ?
ರೈತ: ಅದಕ್ಕೂ ಹುಲ್ಲು...

ವರದಿಗಾರ: ನೀವು ಈ ಕುರಿಗಳನ್ನಾ ಯೆಲ್ಲಿ ಕಟ್ತೀರಿ?
ರೈತ: ಕರೇದನ್ನೋ? ಬಿಳೇದನ್ನೋ?

ವರದಿಗಾರ: ಬಿಳೇದು...
ರೈತ: ಹೊರಗಿನ ಕೋಣೆಯಲ್ಲಿ..

ವರದಿಗಾರ: ಕರೇದನ್ನಾ..?
ರೈತ: ಅದನ್ನೂ ಹೊರಗಿನ ಕೋಣೆಯಲ್ಲಿಯೇ...

ವರದಿಗಾರ: ಮತ್ತೆ ಅವುಗಳಿಗೆ ಸ್ನಾನಾ ಮಾಡ್ಸೋದು ಹೇಗೆ?
ರೈತ: ಕರೇದಕ್ಕೋ? ಬಿಳೇದಕ್ಕೋ...?

ವರದಿಗಾರ: ಬಿಳೇದಕ್ಕೆ...
ರೈತ: ನೀರಿನಿಂದ...

ವರದಿಗಾರ: ಕರೇದಕ್ಕೆ...?
ರೈತ: ಅದಕ್ಕೂ ನೀರಿಂದಲೇ...

ವರದಿಗಾರನಿಗೆ ಕೋಪ ನೆತ್ತಿಗೇರಿತು, ಕಿರುಚವಂತೇ ಹೇಳಿದ: ಮೂರ್ಖ! ಯೆರಡಕ್ಕೂ ವಂದೇರೀತಿ ಮಾಡೋದು ಅಂದ್ಮೇಲೆ ಪದೇ ಪದೇ ಕರೇದೊ ಬಿಳೇದೋ ಅಂತಾ ಯಾಕಯ್ಯಾ ಕೇಳ್ತಿದ್ದೆ?😡😡
ರೈತ: ಯಾಕಂದ್ರೆ... ಕಪ್ಪು ಕುರಿ ನಂದು....

ವರದಿಗಾರ: ಮತ್ತೆ ಬಿಳೇದು...?
ರೈತ: ಅದೂ...ನಂದೇ!...😜😜

ವರದಿಗಾರ ಮೂರ್ಛೆಹೋದ!!!
😩😫😩😫😩😫😩
ಪ್ರಜ್ಞೆ ಬಂದಮೇಲೆ ರೈತ ಹೇಳಿದ, ಈಗ ಗೂತ್ತಾಯ್ತಾ? TVಲಿ ನೀವು ಅದೇ ಅದೇ ಸಮಾಚಾರಾನಾ ಮತ್ತೆ ಮತ್ತೆ ತಿರ್ಗಾ ಮುರ್ಗಾ ತೋರ್ಸೀ ತೋರ್ಸೀ ನಮ್ತಲೇ ತಿಂತೀರಲ್ಲಾ ಆವಾಗಾ ನಮ್ಗೂ ಹೀಗೇ ಬೇಜಾರಾಗತ್ತೆ...!

My Photography

My photography

Sunday 9 August 2015

Learn English

Cutlery (ಚಾಕು ಚೂರಿ ಇತ್ಯಾದಿ):

1. Fork = ಮುಳ್ಳು ಚಮಚ
2. Knife = ಚೂರಿ
3. Spoon = ಚಮಚ
4. Bowl =ಬಟ್ಟಲು
5. Platter = ಹರಿವಾಣ

Cooking Techniques (ಆಹಾರ ತಯಾರಿಸುವ ವಿಧಾನಗಳು):

1. Simmer = ಮೆಲ್ಲಗೆ ಕುದಿಸುವ
2. Boil = ಕುದಿಸು
3. Roast = ಹುರಿದ
4. Fry = ಕರಿಯುವುದು

Food Vocabulary:

1. Rich food = ಸಮೃದ್ಧ ಆಹಾರ
2. Greasy/Oily food = ಯಾವುದರಲ್ಲಿ ಎಣ್ಣೆ ಅಂಶ ಹೆಚ್ಚಾಗಿರುತ್ತದೊ
3. Junk food = ಇಂತಹ ತಿಂಡಿ ಅದು ಶರೀರಕ್ಕೆ ಹಾನಿಕಾರಕ.ಹೆಚ್ಚಾಗಿ ಮಾರುಕಟ್ಟೆಯಲ್ಲಿ ದೊರಕುತ್ತದೆ.
4. Healthy food = ಯಾವ ತಿಂಡಿ ಆರೋಗ್ಯಕ್ಕೆ ಒಳ್ಳೆಯದೊ
5. Unhealthy food = ಯಾವ ತಿಂಡಿ ಆರೋಗ್ಯಕ್ಕೆ ಒಳ್ಳೆಯದಲ್ಲವೊ
6. Savoury food = ಉಪ್ಪಿನ ಆಹಾರ
7. Fried food = ಕರಿದ ತಿಂಡಿ

Types of diet:

1. Vegetarian diet = ಸಸ್ಯಹಾರಿ ಆಹಾರ
2. Non-vegetarian diet = ಮಾಂಸಹಾರಿ ಆಹಾರ
3. Liquid diet = ಇದರಲ್ಲಿ ಕೇವಲ ಜ್ಯೂಸ್, ಸೂಪ್, ನೀರು ಇತ್ಯಾದಿ ತೆಗೆದುಕೊಳ್ಳಬೇಕು/ಇದರಲ್ಲಿ ಪತ್ಯ ಪದಾರ್ಥ ಇರಲಿ
4. Nutritious diet = ಪೌಷ್ಟಿಕ ಆಹಾರ
5. Low-fat Diet = ಇದರಲ್ಲಿ ತೂಕ ಹೆಚ್ಚಿಸುವ ಪದಾರ್ಥ ಕಡಿಮೆ ಇರುವ
6. Low-salt Diet = ಇದರಲ್ಲಿ ಉಪ್ಪು ಕಡಿಮೆ ಇರುವ
7. Salt-free Diet = ಯಾವುದರಲ್ಲಿ ಉಪ್ಪಿನಂಶ ಇರುವುದಿಲ್ಲವೊ
8. Sugar-free diet = ಇಂತಹ ಆಹಾರ ಅದರಲ್ಲಿ ಸಕ್ಕರೆ ಇರುವುದಿಲ್ಲವೊ
9. Low calorie diet = ಕಡಿಮೆ ಕಾಲೋರಿ ಇರುವ ತಿಂಡಿ

About indian army

೧)ಒ೦ದು ವೇಳೆ
ಭಾರತವೆನಾದ್ರು ಪಾಕಿಸ್ತಾನದ ಮೇಲೆ ದಾಳಿ
ಮಾಡಿದ್ರೆ ೨೫ ಕೋಟಿ ಭಾರತಿಯ
ಮುಸ್ಲಿಂರು ಪಾಕಿಸ್ತಾನದ ಜೊತೆ ಕೂಡಿ
ಪುನಃ ಭಾರತದ ಮೇಲೆ ಹೋರಾಡ್ತಿವಿ
(ಅಸಾದುದ್ದಿನ್ ಓವೈಸಿ.ಸ೦ಸದ.ಎಮ್ ಐ ಎಮ್)

೨)ಹೈದರಾಬಾದಿನಲ್ಲಿ ಮುಸ್ಲಿಂರ ಸ೦ಖ್ಯೆ
೫೦% ದಾಟಿದೆ
ನಾವು ಬಹುಸ೦ಖ್ಯಾತರು ನಾವು ರಾಮನವಮಿ,ಹನುಮ
ಜಯ೦ತಿಗೆ ನಿರ್ಬ೦ದಿಸುವ೦ತೆ ಆಡಳಿತ ಮೇಲೆ
ಒತ್ತಡ ಹೇರುತ್ತೆವೆ ಚಾರ್ಮಿನಾರ್
ಪಕ್ಕದಲ್ಲಿರುವ ಲಕ್ಷ್ಮಿ ಮ೦ದಿರ ನಿರ್ನಾಮ
ಮಾಡ್ತೀವಿ --(ಅಕ್ಬರುದ್ದಿನ್ ಓವೈಸಿ)

೩)ಹಿ೦ದು ನಾಯಕರು ನಮ್ಮ ಟೋಪಿ
ಎಷ್ಟೋ ಸಲ ಬೇಕಾದರೂ ಧರಿಸಲಿ
ನಾವು ಎ೦ದು ಹಣೆಗೆ ತಿಲಕ ಇಡೊದಿಲ್ಲ,
ಹಿ೦ದುಗಳು ನಮ್ಮ ನಮಾಜ್ಗೆ
ಗೌರವಿಸಿದರೂ ನಾವು "ವ೦ದೆ ಮಾತರ೦"
ಗೌರವಿಸಲ್ಲ ಏಕೆಂದರೆ ಇಸ್ಲಾಂನಲ್ಲಿ
ಜಾತ್ಯಾತತೆ ಮತ್ತು ರಾಷ್ಟ್ರಪ್ರೇಮ ನಿಷಿದ್ಧ
(ಅಜ೦ ಖಾನ್..ಸಮಾಜವಾದಿ ಪಕ್ಷ)

೪) ನಮಗೆ ೧೫ ನಿಮಿಷ ಕೊಡಿ ಇ ದೇಶದಲ್ಲಿರುವ
ಅಷ್ಟು ಹಿ೦ದುಗಳನ್ನ ಮುಗಿಸಿಬಿಡ್ತಿವಿ(
ಅಕ್ಬರುದ್ದಿನ್ ಓವೈಸಿ.ಸ೦ಸದ)

೫) ನಮ್ಮ ಶಕ್ತಿ ಎದುರು ಹಿ೦ದುಗಳಿಗೆ
ಒ೦ದೇ ಒ೦ದು ರಾಮ ಮ೦ದಿರ
ಕಟ್ಟಿಸಲು ಸಾಧ್ಯವಾಗ್ತಿಲ್ಲ
(ಮೌಲಾನಾ ಸೈಯ್ಯದ್ ಬುಕಾರಿ..ದೆಹಲಿ
ಜಾಮಾ ಮಸೀದಿ)

ರಾಮ ಮ೦ದಿರ ಭೂಮಿಯಲ್ಲಿ ಅಕ್ರಮವಾಗಿ
ಕಟ್ಟಿಸಿದ್ದ ಮಸೀದಿ ಕೆಡೆಯೊದಕ್ಕೆನೆ ೫೦ ವರ್ಷ
ತೆಗೆದುಕೊಂಡೆವಲ್ಲ ಇನ್ನೂ ರಾಮ ಮ೦ದಿರ
ಕಟ್ಟಿ ಸೊಕೆ ೫೦೦ ವರ್ಷ ತಗೊಂಡ್ರು ಏನ್
ಆಶ್ಚರ್ಯವಿಲ್ಲ ಬಿಡಿ!!!!!!

ರಾಮ ಮ೦ದಿರ ಕಟ್ಟಿಸೊಕೆ ಕೆ೦ದ್ರ ಸರಕಾರ,
ನ್ಯಾಯಾಲಯ ಬಿಟ್ಟು ಬಿಡಿ ಅವರಿಂದ
ಇದು ಆಗೊ ಕೆಲಸ ಅಲ್ಲ ಸ್ವತಂತ್ರ
ಸಿಕ್ಕು ೬೭ ವರ್ಷವಾದ್ರು ನಮ್ಮ ರಾಮ
ಮ೦ದಿರದ ಕೇಸ್ ಪೈಲ್ ಕೋರ್ಟಿನಲ್ಲಿ
ಬಿದ್ದು ಧೂಳು ಹಿಡಿದಿದೆ
ರಾಮ ಮ೦ದಿರ ನಿರ್ಮಾಣ ಶಾ೦ತಿ ಮೂಲಕ
ಸಿಗೋದು ಮರೆತು ಬಿಡಿ ಹೋರಾಟದ ಮೂಲಕ
ಸಿದ್ದರಾಗಿ...

ಪಕ್ಷ ಬಿಡಿ ಜಾತಿ ಬಿಡಿ ಧರ್ಮಕ್ಕಾಗಿ ಸಿದ್ದರಾಗಿ
ನಿಮ್ಮ ಜಾತಿ ಉಳಿಬೇಕಾ ಹಾಗಾದರೆ ನಿಮ್ಮ
ಸಮಾಜ ಉಳಿಬೇಕು, ನಿನ್ನ ಸಮಾ ಜ
ಉಳಿಬೇಕಾ ಹಾಗಾದರೆ ನಿಮ್ಮ ಧರ್ಮ ಉಳಿಸಿಕೊ
ಧರ್ಮ ಉಳಿದರೆ ನಿನ್ನ ಜಾತಿ ನಿನ್ನ ಪಕ್ಷ,ಅದೆ
ಇಲ್ಲ ಅ೦ದ್ರೆ ನಿನ್ನ ಪಕ್ಷಕ್ಕೆಲ್ಲಿ ಕಿಮ್ಮತ್ತು
Plz share ಮಾಡಿ....ನಾನು ಎಸ್ಸಿ ನಾನು ಕುರುಬ, ಗಾಣಿಗ,ಬ್ರಾಹ್ಮಣ,ಲಿಂಗಾಯತ ಇತರ ಯಾವುದೇ ಜಾತಿಯನ್ನದೆ ನಾನು ಹಿಂದೂ ಧರ್ಮಿಯನೆಂದು ಹೋರಾಡಿದರೆ ಮಾತ್ರ ಈ ದೇಶ ಈ ಉಳಿಯುವುದು , ಧರ್ಮವೆ ಉಳಿಯದಿದ್ರೆ ನಿಮ್ಮ ಈ ಜಾತಿಗಳು ಉಳಯುತದೆಯೆ ? ಬ ನ್ನಿ ಹಿಂದೂ ರಾಷ್ಟ್ರದ ನಿರ್ಮಾಣಕ್ಕಾಗಿ ಸಹಕರಿಸಿ !
ಜೈ ಶಿವಾಜಿ
ಜೈ ಮುತಾಲಿಕ್ ಜೀ
🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩 ಜೈ ಹಿಂದೂರಾಷ್ಟ್ರ 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩👍👍👍👍👍 ರಾಷ್ಟ್ರೀಯವಾದವೆ ಕೋಮುವಾದ ಎನ್ನುವುದಾದರೆ ನಾನೊಬ್ಬ ಹಿಂದೂ 🚩🚩🚩 ರಾಷ್ಟೀಯವಾದಿ :

Hindu

‪#‎ಮೃತ್ಯುಂಜಯ_ಮಹಾಮಂತ್ರ‬ 
ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಮ್ । 
ಉರ್ವಾರುಕಮಿವ ಬಂಧನಾನ್ಮತ್ಯೋರ್ಮುಕ್ಷೀಯ ಮಾಮೃತಾತ್ ॥

ಅರ್ಥ : 
ತ್ರಿಕಾಲಗಳಲ್ಲೂ ಸಮಾನ ರೂಪವಾದ ಜ್ಞಾನವುಳ್ಳ ರುದ್ರರೂಪಿ ಪರಮೇಶ್ವರನನ್ನು , ಎಲ್ಲವನ್ನೂ ಸುಗಂಧಗೊಳಿಸುವ ಈಶ್ವರನನ್ನು , ಶರೀರ ಮತ್ತು ಆತ್ಮಬಲವನ್ನು ಹೆಚ್ಚಿಸುವ ಪರಮಾತ್ಮನನ್ನು ನಾವು ನಿತ್ಯವೂ ಪೂಜಿಸುವೆವು . ಅವನ ಅನುಗ್ರಹದಿಂದ ಸೌತೆಕಾಯಿ ಅಥವಾ ಕರ್ಬೂಜದ ಹಣ್ಣಿನಂತೆ ( ಕರ್ಬೂಜವು ಪಕ್ವವಾಗಿ ಅಮೃತ ಅಂದರೆ ಅತ್ಯಂತ ಮಧುರವಾಗಿ ಆಗುತ್ತದೆ , ಅದರಂತೆ ) ಬಂಧನದಿಂದ ( ಸೌತೆಕಾಯಿ ಅಥವಾ ಕರ್ಬೂಜವು ಹಣ್ಣಾದ ಮೇಲೆ ಬಳ್ಳಿಯ ಬಂಧನದಿಂದ ತಾನಾಗಿಯೇ ಬೇರ್ಪಡುವಂತೆ ) ಮೃತ್ಯುವಿನಿಂದ ನಾನು ಮುಕ್ತನಾಗಬೇಕು , ಮೋಕ್ಷ ಸುಖದಿಂದ ನಾನು ಬಿಡುಗಡೆ ಹೊಂದಬಾರದು....