Friday 14 August 2015

Happy Independence Day

ನನ್ನ ದೇಶ ಭಾರತ ಇನ್ನೂರು ವರ್ಷಗಳ ಕಾಲ ಬ್ರಿಟೀಷರ ಕೈಲಿತ್ತೇನೋ ನಿಜ.ಆದರೆ ಅವರು ಬಿಟ್ಟು ಹೋದ ಮೇಲೆ ನಮ್ಮ ಸ್ವಂತ ಬಲದಿಂದ ಇಂದು ಜಗತ್ತಿನ ಬಲಿಷ್ಠ ರಾಷ್ಟ್ರಗಳ ಜತೆ ವೇದಿಕೆ ಹಂಚಿಕೊಳ್ಳುತಿರುವ ಗತ್ತು ಇದೆಯಲ್ಲಾ ಆ ಕಾರಣಕ್ಕೇ 'ಮೇರೆ ಭಾರತ್ ಮಹಾನ್' ಅಂತಾ ಎದೆ ತಟ್ಟಿಕೊಂಡು ಹೇಳೋಣ.ಸ್ವಾತಂತ್ರ್ಯದ ನಂತರದ ದಿನಗಳಲ್ಲಿ ಮುತ್ಸದ್ಧಿ ಅಂಬೇಡ್ಕರ್ ವರ ದೂರದೃಷ್ಠಿಯಿಂದ ರಚಿತವಾದ ನಮ್ಮ ಸಂವಿಧಾನ,ವಯಕ್ತಿಕ ಏನೇ ಇರಲಿ ಸಂಸದೀಯ ವ್ಯವಸ್ಥೆಗೆ ಶಿಸ್ತಿನ ಸಂಯಮ ಮೆರೆದು ದೇಶಕ್ಕೆ ಪಂಚವಾರ್ಷಿಕ ಯೋಜನೆ ರೂಪಿಸಿದ ಪಂ.ನೆಹರು,ಪ್ರಧಾನಿಯಂತಹ ಪೀಠಾಧೀಶರಾದರೂ ಪಾರುಪತ್ಯ ತೋರದೆ "ಜೈ ಜವಾನ್ ಜೈ ಕಿಸಾನ್" ಘೋಷಿಸಿ ಕ್ಷಿರಕ್ರಾಂತಿಗೆ ಚಾಲನೆ ಕೊಟ್ಟ ಸರಳ ಜೀವಿ ಲಾಲ್ ಬಹದ್ದೂರ್ ಶಾಸ್ತ್ರಿ,ಹೆಣ್ಮಕಳೆಂದ್ರೆ ತೊಟ್ಟಿಲು ತೂಗಬೇಕು ಅಷ್ಟೇ ಅನ್ನೋ ಕಾಲದಲ್ಲಿ ಪ್ರಧಾನಿ ಪಟ್ಟದ ಗಟ್ಟಿತನ ತೋರಿ ದೇಶದ ಬ್ಯಾಂಕುಗಳನ್ನೆಲ್ಲಾ ರಾಷ್ಟ್ರೀಕರಣಗೊಳಿಸೀ,ಅಲ್ಲಿವರೆಗೆನ ಪಂಚವಾರ್ಷಿಕ ಯೋಜನೆಗಳೆಲ್ಲಾ ಕೃಷಿ ಕೈಗಾರಿಕೆ ನೀರಾವರಿಗೆ ಪ್ರಾಶಸ್ತ್ಯ ಕೊಡೊದನ್ನು ಸ್ವಲ್ಪ ತಡೆದು ಸಾಮಾಜಿಕ ಅಂಶಗಳಿಗೆ ಒತ್ತು ಕೊಟ್ಟು 'ಗರೀಬಿ ಹಟಾವೋ' ಎಂದ ಇಂದಿರಾ ಜಿ,ವಯಸ್ಸು ವೃದ್ಧಾಪ್ಯಕ್ಕೆ ಸಮೀಪವಿದ್ದರೂ ಆಡಳಿತ ನಡೆಸಿ ಆಡಳಿತ ಸುಧಾರಣೆಗಳಿಗೆ ಸ್ವಾಗತ ಕೋರಿದ ಮುರಾರ್ಜಿ ದೇಸಾಯಿ,
ರೈತನ ಮಗನಾಗಿಯೂ ಪ್ರಧಾನಿ ಯಾದ ಚರಣ್ ಸಿಂಗ್,ಹಠಾತ್ ಪ್ರಧಾನಿಯಾದರೂ ಮಾಹಿತಿ ತಂತ್ರಜ್ಞಾನಕ್ಕೆ ಮುನ್ನುಡಿ ಬರೆದ ರಾಜೀವ್ ಗಾಂಧೀ,ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲು ಮಂಡಲ ಆಯೋಗ ರಚಿಸಿದ ವಿ.ಪಿ.ಸಿಂಗ್,ರಾಜಕೀಯ ಜೀವನದಲ್ಲಿ ಒಮ್ಮಿಂದಲೇ ಪ್ರಧಾನಿಯಾದ ಚಂದ್ರಶೇಖರ್,ದೇಶದ ಅರ್ಥವ್ಯವಸ್ಥೆಯನ್ನು ಜಾಗತಿಕ ವಲಯಕ್ಕೆ ತೆರೆದಿಟ್ಟ ಪಿ.ವಿ.ನರಸಿಂಹರಾವ್,ಕನ್ನಡ ಮಣ್ಣಿನವರಾದರೂ ಭಾರತ ಮುನ್ನೆಡೆಸಿದ ದೇವೇಗೌಡ್ರು,ಸಭ್ಯಸ್ಥರಾಗಿ ಸಕ್ರಿಯವಾಗಿದ್ದ ಐ.ಕೆ.ಗುಜ್ರಾಲ್,ದೇಶದ ನಾಲ್ಕೂ ದಿಕ್ಕುಗಳನ್ನು ಸೇರಿಸಿ 'ಸುವರ್ಣ ಸಾಧನೆ'ಗೈದ ಅಟಲ್ ಜೀ,ಮಾತು ಮೌನವಾಗಿದ್ದರೂ ಅಮೇರಿಕಾದ ಅಣು ತಂದ ಮನ್ಮೋಹನ್ ಸಿಂಗ್,ಅಧಿಕಾರ ಹಿಡಿದು ಇನ್ನು ಅಂಬೆಗಾಲಿಡುತ್ತಿರುವಾಗಲೇ ಜಗತ್ತು ಬೆರಗಾಗುವಂತಹ ಸಾಧನೆ ಮಾಡುತ್ತಿರುವ ಮೋದಿ ಸೇರಿ ನಮ್ಮ ಎಲ್ಲಾ  ಪ್ರಧಾನಿಗಳು   ಕೇವಲ 68 ವರ್ಷಗಳಲ್ಲಿ ದೇಶವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.1980ರ ದಶಕದಲ್ಲಿ ಬಾಹ್ಯಾಕಾಶ ಶೋಧನೆಗೆ cray -x ಸೂಪರ್ ಕಂಪ್ಯೂಟರ್ ಕೊಡಿ ಅಂದಾಗ ಅಮೇರಿಕಾ 'ಭಾರತೀಯರಿಗೆ ಅದರ ಬಳಕೆಯೇ ಗೊತ್ತಾಗಲ್ಲ'ಅಂತಾ ನಿರಾಕರಿಸಿದ್ದನೇ ಚಾಲೆಂಜ್ ಆಗಿ ತೆಗೆದುಕೊಂಡ ನನ್ನ ದೇಶ "ಪರಮ್ 10000" ಅನ್ನೋ ಸೂಪರ್ ಕಂಪ್ಯೂಟರ್ ತಯಾರಿಸಿ ಅಮೇರಿಕಾ ಕಂಪ್ಯೂಟರ್ ಒಂದು ಉಪಗ್ರಹ ಉಡಾಯಿಲು 16 ನಿಮಿಷ ತೆಗೆದುಕೊಂಡರೆ ನಮ್ಮ ಪರಮ್ ಕೇವಲ 4 ನಿಮಿಷ ತೆಗೆದುಕೊಳ್ಳುತ್ತೆ.ಜಗತ್ತಿನ ದೇಶಗಳಲ್ಲಿ ಕೆಲವು ಕ್ರೌರ್ಯ ತುಂಬಿಕೊಂಡು ಬಾಹ್ಯಕಾಶವನ್ನೂ ಬಾಂಬ್ ವಲಯ ಮಾಡುವ ದುರಾಲೋಚನೆಯಲ್ಲಿದ್ರೆ ನನ್ನ ದೇಶದ ಉಡಾವಣೆಗಳು ಅಲ್ಲೂ ಶಾಂತಿ ಸ್ಥಾಪಿಸುವ ಉದ್ದೇಶವುಳ್ಳವು! ನನ್ನ ದೇಶವನ್ನು ಜಾತಿಯಾಧಾರವಾಗಿ ಹೊಡೆಯುವ ಮುನ್ನ,ಮತದ ಬೇಗುದಿಗೆ ನನ್ನ ಭಾರತ ಮಾತೆಯನ್ನು ನೂಕುವ ಮುನ್ನ,ಶಾಂತಿಯಿಂದ ಯೋಚಿಸಿ ನೋಡಿ ನನ್ನಮ್ಮ ಯಾವ ಜಾತಿಯ ಮಕ್ಕಳಿಗೂ ಮಲತಾಯಿ ಧೋರಣೆ ಮಾಡಿಲ್ಲ.ನಮ್ಮನ್ನು ಒಕ್ಕಲೆಬ್ಬಿಸುತ್ತಿರುವರು 'ಅರ್ಧನಾಲೇಜ್ ಶ್ವರರೇ'!
'ಆ ಮತ ಈ ಮತ ನೂಕಥ,
ನಮ್ಮದೊಂದೇ ಮನುಜ ಮತ ಎದೆ ತಟ್ಟಿ ಹೇಳು ನಾನು ಭಾರತೀಯ ಅಂತಾ...!
ನನ್ನ ದೇಶದ 68ನೇ ಹುಟ್ಟು ಹಬ್ಬದ ಶುಭಾಯಗಳು ತಮಗೆಲ್ಲಾ.
     - ಷಣ್ಮುಖ ಹೂಗಾರ್.

No comments:

Post a Comment