Sunday 9 August 2015

Hindu

ಸಂಸ್ಕೃತದಲ್ಲಿರುವ ಸುವಿಚಾರಗಳು ಹಲವಾರು..ಅವುಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸಲು
ನಮ್ಮ ಪುಟ್ಟ ಪ್ರಯತ್ನ..

ಸುವಚನಾನಿ ಎಂಬ ಧಾರಾವಾಹಿ ಮಾಲಿಕೆಯಲ್ಲಿ , ಸಂಸ್ಕೃತದಲ್ಲಿರುವಪ್ರಮುಖವಾದ
ಸುವಚನಗಳನ್ನು (ಒಳ್ಳೆಯ ಮಾತು) ಪರಿಚಯಿಸುತ್ತಿದ್ದೇವೆ..

ಇದನ್ನು ತಪ್ಪದೇ ಓದಿ..ಶೇರ್ ಮಾಡಿ..

ಅತಿಲೋಭಃ ವಿನಾಶಾಯ

(ಅತಿಯಾದ ಆಸೆಯಿಂದ ವಿನಾಶ)

ಅತಿತೃಷ್ಣಾ ನ ಕರ್ತವ್ಯಾ

(ಅತ್ಯಾಸೆ ಪಡಬೇಡ)

ಅತಿ ಸರ್ವತ್ರ ವರ್ಜಯೇತ್

(ಅತಿಯಾದ ಆಸೆಯನ್ನು ಎಲ್ಲ ಕಡೆ ವರ್ಜಿಸಬೇಕು)

ಅಧಿಕಸ್ಯಾಧಿಕಂ ಫಲಂ

(ಅಧಿಕ ಪ್ರಯತ್ನಕ್ಕೆ ಅಧಿಕ ಫಲ)

ಅನತಿಕ್ರಮಣೀಯಾ ಹಿ ನಿಯತಿಃ

(ವಿಧಿಯನ್ನು ಗೆಲ್ಲುವುದು ಅಸಾಧ್ಯ)

ಅಲ್ಪಶ್ಚ ಕಾಲೋ ಬಹವಶ್ಚ ವಿಘ್ನಾಃ

(ಕಾಲ ಅಲ್ಪ..ವಿಘ್ನಗಳು ಹಲವಾರು)

ಅಹಿಂಸಾ ಪರಮೋ ಧರ್ಮಃ

(ಅಹಿಂಸೆಯೇ ಪರಮಧರ್ಮ)

ಅಭದ್ರಂ ಭದ್ರಂ ವಾ ವಿಧಿಲಿಖಿತಮ್ ಉನ್ಮೂಲಯತಿ ಕಃ ?

(ಒಳ್ಳೆಯದೋ , ಕೆಟ್ಟದ್ದೋ ವಿಧಿಲಿಖಿತವನ್ನು ತಪ್ಪಿಸಬಲ್ಲವರು ಯಾರು ?)

ವಿತ್ತಂ ಹಿ ಲೋಕೇ ಪುರುಷಸ್ಯ ಬಂಧುಃ

(ಹಣವೇ ಪ್ರಪಂಚದಲ್ಲಿ ಮನುಷ್ಯನ ನಿಜವಾದ ಬಂಧು.)

ಇಕ್ಷುಃ ಮಧುರೋಪಿ ಸಮೂಲಂ ನ ಭಕ್ಷ್ಯಃ

(ಕಬ್ಬು ಸಿಹಿಯೆಂದು ಕಬ್ಬಿನಬೇರನ್ನು ತಿನ್ನಬಾರದು.)

ಈಶ್ವರೇಚ್ಛಾ ಬಲೀಯಸೀ

(ಈಶ್ವರನ ಇಚ್ಛೆಯೇ ಪ್ರಬಲವಾದದ್ದು)

ಉತ್ಪದ್ಯಂತೇ ವಿಲೀಯಂತೇ ದರಿದ್ರಾಣಾಂ ಮನೋರಥಾಃ

(ಬಡವರ ಕನಸುಗಳು ಹುಟ್ಟುತ್ತವೆ ಹಾಗೇ ಸಾಯುತ್ತವೆ.)

ಉತ್ಸವಪ್ರಿಯಾಃ ಖಲು ಮನುಷ್ಯಾಃ

(ಮಾನವರು ಉತ್ಸವಪ್ರಿಯರು.)

ಕರ್ತವ್ಯೋ ಮಹದಾಶ್ರಯಃ

(ನಮ್ಮ ಕರ್ತವ್ಯವೇ ನಮಗಾಶ್ರಯ.)

ಕವಯಃ ಕಿಂ ನ ಪಶ್ಯಂತಿ ?

(ಕವಿಗಳು ಏನನ್ನು ತಾನೇ ನೋಡುವುದಿಲ್ಲ..?)

ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಮ್

(ಬುದ್ಧಿವಂತರ ಕಾಲ ಕಾವ್ಯ , ಶಾಸ್ತ್ರಗಳ ವಿವೇಚನೆಯಲ್ಲಿ ಕಳೆಯುತ್ತದೆ.)

ಕಾಲಾಯ ತಸ್ಮೈ ನಮಃ

(ಸಮಯಕ್ಕೆ ನಮಸ್ಕಾರ)

ಕ್ಷಮಯಾ ಕಿಂ ನ ಸಿಧ್ಯತಿ ?

(ಕ್ಷಮೆಯಿಂದ ಯಾವುದು ತಾನೇ ಅಸಾಧ್ಯ..?)

ಗತಂ ನ ಶೋಚ್ಯಮ್

(ಕಳೆದುಹೋಗಿದ್ದಕ್ಕೆ ಚಿಂತಿಸಬಾರದು.)

ಗುಣಾಃ ಸರ್ವತ್ರ ಪೂಜ್ಯಂತೇ

(ಸದ್ಗುಣಗಳು ಎಲ್ಲೆಡೆ ಪೂಜಿಸಲ್ಪಡುತ್ತವೆ.)

ಚಕ್ರವತ್ ಪರಿವರ್ತಂತೇ ದುಃಖಾನಿ ಚ ಸುಖಾನಿ ಚ

(ಸುಖ-ದುಃಖಗಳು ಚಕ್ರದಂತೇ ಸುತ್ತುತ್ತಲೇ ಇರುತ್ತವೆ.)

ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ

(ಜನನಿ ಹಾಗೂ ಜನ್ಮಭೂಮಿಗಳು ಸ್ವರ್ಗಕ್ಕಿಂತಲೂ ಮಿಗಿಲಾದವು.)

ತ್ರೈಲೋಕ್ಯೇ ದೀಪಕಃ ಧರ್ಮಃ

(ಧರ್ಮ ಮೂರು ಲೋಕಗಳನ್ನೂ ಬೆಳಗುತ್ತದೆ.)

No comments:

Post a Comment